ನಕಲಿಗಿಂತ ಒರಿಜಿನಲ್​ಗೆ ಬೆಲೆ ಹೆಚ್ಚು; ಟಾಕ್ಸಿಕ್​​​​ ಹವಾ ಮಧ್ಯೆ ಇನ್​ಸ್ಟಾ ಬಯೋ ಬದಲಿಸಿದ ಯಶ್, ಖಡಕ್ ಸಂದೇಶ

sandalwood actor yash instagram bio goes viral
sandalwood actor yash instagram bio goes viral
Published on

ಪ್ರಮುಖ ಮುಖ್ಯಾಂಶಗಳು

  • ಟಾಕ್ಸಿಕ್​ ಸಿನಿಮಾ ಬಗ್ಗೆ ಟ್ರೋಲ್​​​, ಮೆಚ್ಚುಗೆ ಬೆನ್ನಲ್ಲೇ ಇನ್​ಸ್ಟಾ ಬಯೋ ಬದಲಿಸಿದ ಯಶ್
  • ನಕಲಿಯಾಗಬೇಡಿ ಒರಿಜಿನಲ್​ ಆಗಿರಿ ಎಂದು ಬಯೋ ಬದಲಿಸಿದ ಯಶ್​ .
  • ಸೋಶಿಯಲ್​ ಮೀಡಿಯಾದಲ್ಲಿ ಟಾಕ್ಸಿಕ್​ ವಿರುದ್ಧ ಭಾರೀ ಟೀಕೆ ವ್ಯಕ್ತ.
sandalwood actor yash instagram bio goes viral: ಟಾಕ್ಸಿಕ್​ ಎ ಫೇರಿಟೇಲ್ ಫಾರ್​ ಗ್ರೋನ್​ ಅಪ್ಸ್​​​ ಸಿನಿಮಾ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆಗಸ್ಟ್​ 26ರಂದು ರಿಲೀಸ್​ ಆದ ಚಿತ್ರಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ಸ್​​, ಹೇಳಿಕೆ ಕೇಳಿಬರುತ್ತಿದೆ. ಕೆಲವರು ಯಶ್​ ನಟನೆ ಬಗ್ಗೆ ಮೆಚ್ಚಿಕೊಂಡರೆ ಇನ್ನೂ ಕೆಲವರು ಸ್ಯಾಂಡಲ್​ವುಡ್​ಗೆ ಹಳೆಯ ರಾಕಿಂಗ್​ಸ್ಟಾರ್​ ಬೇಕು ಎಂದು ಪೋಸ್ಟ್​ ಹಂಚಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಯಶ್​ ಅವರ ಇನ್​ಸ್ಟಾಗ್ರಾಮ್​ ಬಯೋ ಬದಲಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸ್ಯಾಂಡಲ್​ವುಡ್​ನಿಂದ ಬೆಂಬಲ

ಚಂದನವನದಲ್ಲಿ ಯಶ್​ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಿಚ್ಚ ಸುದೀಪ, ರಕ್ಷಿತಾ ಪ್ರೇಮ್​​​, ಶಿವರಾಜ್​ ಕುಮಾರ್​​, ಮಾಸ್ಟರ್​ ಆನಂದ್​​​, ಪವನ್​ ಒಡೆಯರ್​ ಸೇರಿದಂತೆ ಹಲವರು ಹಾರೈಸಿದ್ದಾರೆ. ಯಶ್​​ ಸಿನಿಮಾ ಚೆನ್ನಾಗಿದೆ..ಆನ್​ಲೈನ್​ ಕಾಮೆಂಟ್ ಪಕ್ಕಕ್ಕಿಟ್ಟು ಸಿನಿಮಾ ನೋಡಿ ಎಂದು ಸ್ಯಾಂಡಲ್​ವುಡ್​ ಕ್ವೀನ್ ರಕ್ಷಿತಾ ಪ್ರೇಮ್​​​​​​​​ ಇನ್​ಸ್ಟಾಗ್ರಾಮ್​ನಲ್ಲಿ ಮಾತನಾಡಿದ್ದರು.

ಟೀಕೆ, ಮೆಚ್ಚುಗೆ ವ್ಯಕ್ತ

ಯಶ್​ ನಟನೆಯ ಟಾಕ್ಸಿಕ್​ ಸಿನಿಮಾದ ಮೇಕಿಂಗ್​, ರಾಯ ಹಾಗೂ ಟಿಕೆಟ್​ ಪಾತ್ರದಲ್ಲಿ ಯಶ್​​​​ ಅಭಿನಯಿಸಿರುವ ರೀತಿಯನ್ನು ಒಂದು ವರ್ಗ ಕೊಂಡಾಡುತ್ತಿದೆ. ಇನ್ನೂ ಕೆಲವರು ಕಳಪೆ ಸಿನಿಮಾ, ಗೀತು ಮೋಹನ್​ ದಾಸ್ ಅವರು ಕೆಟ್ಟ ಸಿನಿಮಾವನ್ನು ಕೊಟ್ಟಿದ್ದಾರೆ. ಧೂಮಪಾನ, ಲೈಂಗಿಕ ವಿಚಾರಗಳಿಗೆ ಹೆಚ್ಚು ಹೊತ್ತು ಕೊಡಲಾಗಿದೆ ಎಂದು ಕಿಡಿಕಾರುತ್ತಿದ್ದಾರೆ. ಈ ವಿದ್ಯಾಮಾನಗಳ ಮಧ್ಯೆ ಯಶ್​ ಬದಲಿಸಿರುವ ಬಯೋವನ್ನು ಅಭಿಮಾನಿಗಳು ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ನಿಂದಿಸುವವರಿಗೆ ಈ ವಾಕ್ಯ ಹೇಳಿ ಟಾಂಗ್​ ಕೊಡುತ್ತಿದ್ದಾರೆ.

ಯಶ್ ಬಯೋದಲ್ಲಿ ಏನಿದೆ?

ನಟ ಮತ್ತು ಹೆಮ್ಮೆಯ ಕನ್ನಡಿಗ - ನೀನು ನೀನಾಗಿಯೇ ಇರು, ಏಕೆಂದರೆ ನಕಲಿಗಿಂತ ಅಸಲಿಯೇ ಹೆಚ್ಚು ಬೆಲೆಬಾಳುವಂಥದ್ದು. (Actor & Proud Kannadiga - Be Yourself because An Original is Worth more than a Copy) ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಸಿನಿಮಾಗಳಿಗೆ ಕೇಳಿಬರುವ ನಕರಾತ್ಮಕ ಕಾಮೆಂಟ್​ಗಳ ಬಗ್ಗೆ ಹೆಚ್ಚು ಚಿಂತಿಸದೇ, ನೀವು ನೀವಾಗಿಯೇ ಇರಿ...ಬೇರೆಯವರ ಹೇಳಿಕೆಗಳಂತೆ ನಕಲಿಯಾಗಿ ವರ್ತಿಸಲು..ಇನ್ನೊಬ್ಬರ ಇಷ್ಟಕ್ಕೆ ಪಾತ್ರರಾಗಲು ಬದಲಾಗಲು ಹೋಗಬೇಡಿ. ನಿಮ್ಮ ಒರಿಜಿನಲ್​ ವ್ಯಕ್ತಿತ್ವಕ್ಕೆ ತೂಕ ಹೆಚ್ಚು ಎನ್ನುವ ಅರ್ಥದಲ್ಲಿ ಬರೆದುಕೊಂಡಿದ್ದಾರೆ.

ಯಶ್ ಸಿನಿಮಾಗಳಿಸಿದ್ದೆಷ್ಟು?

ಟಾಕ್ಸಿಕ್​ ಸಿನಿಮಾವು ಇಲ್ಲಿಯವರೆಗೂ 300 ಕೋಟಿ ಗಳಿಕೆಯತ್ತ ಸಾಗುತ್ತಿದೆ. ಭಾರತದಾದ್ಯಂತ ಐದನೇ ದಿನದವರೆಗೂ ಯಶ್​ ಸಿನಿಮಾ 255.95 ಕೋಟಿ ಗಳಿಸಿದೆ. ವಿಶ್ವದಾದ್ಯಂತ 285.20 ಕೋಟಿ ಗಳಿಸಿದೆ. ದೇಶದಾದ್ಯಂತ ಒಟ್ಟು 16,241 ಪ್ರದರ್ಶನಗಳನ್ನು ಕಂಡಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net