_1788010397965.webp?w=480&auto=format%2Ccompress&fit=max)
_1788010397965.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ‘ಕಾಂತಾರ’ ಸರಣಿಯ ದೊಡ್ಡ ಯಶಸ್ಸಿನ ಮೂಲಕ ಜಾಗತಿಕ ಮನ್ನಣೆ ಪಡೆದಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಇದೀಗ ಅವರಿಗೆ ಮತ್ತೊಂದು ಗೌರವ ಸಂದಿದೆ. ಪ್ರತಿಷ್ಠಿತ ‘ಫೋರ್ಬ್ಸ್ ಇಂಡಿಯಾ’ ಬಿಡುಗಡೆ ಮಾಡಿರುವ ದೇಶದ ಪ್ರಮುಖ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ರಿಷಬ್ ಸ್ಥಾನ ಪಡೆದಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದ ಹಿರಿಮೆಯನ್ನು ಮತ್ತೊಮ್ಮೆ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ‘ಕಾಂತಾರ’ ಚಿತ್ರ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸೃಷ್ಟಿಸಿದ ಅಭೂತಪೂರ್ವ ಯಶಸ್ಸು, ದೇಶಾದ್ಯಂತ ವಿವಿಧ ಚಿತ್ರರಂಗಗಳು, ತಂಡಗಳು ನೆಲಮೂಲದ ಕಥೆಗಳತ್ತ ಗಮನ ಹರಿಸುವಂತೆ ಮಾಡಿತು. ಈ ಬಾರಿಯ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ರಿಷಬ್ ನಟನೆಯ ಜತೆಗೆ ನಿರ್ದೇಶನ ಮತ್ತು ಬರಹಗಾರ ವಿಭಾಗದಲ್ಲಿಯೂ ಆಯ್ಕೆಯಾಗಿರುವುದು ವಿಶೇಷ. ಆ ಮೂಲಕ ಭಾರತದ ಬೇರೆ ಯಾವ ಭಾಷೆಯ ಸೆಲೆಬ್ರಿಟಿ ಮಾಡಿರದ ಸಾಧನೆಯನ್ನು ರಿಷಬ್ ಮಾಡಿದ್ದಾರೆ. ಹಾಗೇ ಈ ಬಾರಿ ಫೋರ್ಬ್ಸ್ ಪಟ್ಟಿಯಲ್ಲಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಖ್ ಮತ್ತು ದೀಪಾ ಬಸ್ತಿ ಕೂಡ ಸ್ಥಾನ ಪಡೆದಿದ್ದಾರೆ. ಈ ಹಿಂದೆ ನಟ ಸುದೀಪ್ ಫೋರ್ಬ್ಸ್ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ರಿಷಬ್ ಶೆಟ್ಟಿ ಸದ್ಯ ತೆಲುಗಿನ ‘ಜೈ ಹನುಮಾನ್’ ಹಾಗೂ ಹಿಂದಿಯ ‘ಛತ್ರಪತಿ ಶಿವಾಜಿ ಮಹಾರಾಜ್: ದ ಪ್ರೈಡ್ ಆಫ್ ಭಾರತ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ದಕ್ಷಿಣದವರ ಪಾರುಪತ್ಯ