_1787495064404.webp?w=480&auto=format%2Ccompress&fit=max)
_1787495064404.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬಹುಭಾಷಾ ತಾರೆ ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್ 2’ ಕಳೆದ ವರ್ಷ ಘೋಷಣೆಯಾಗಿತ್ತು. ಸದ್ಯ ‘ಟಾಕ್ಸಿಕ್’ ಪ್ರಚಾರ, ಸಲ್ಮಾನ್ ಖಾನ್ ಜತೆ ‘ಮಾನ್ಸ್‌ಟರ್’ ಚಿತ್ರದ ಶೂಟಿಂಗ್ ನಡುವೆ ನಯನತಾರಾ ‘ಮೂಕುತಿ ಅಮ್ಮನ್ 2’ ಚಿತ್ರೀಕರಣದಲ್ಲೂ ಬಿಜಿಯಾಗಿದ್ದಾರೆ. 2020ರಲ್ಲಿ ತೆರೆಕಂಡಿದ್ದ ‘ಮೂಕುತಿ ಅಮ್ಮನ್’ ಸೀಕ್ವೆಲ್ ಇದಾಗಿದ್ದು, ನಯನತಾರಾ ಜತೆ ಊರ್ವಶಿ, ದುನಿಯಾ ವಿಜಯ್, ಸ್ನೇಹಾ ಹೀಗೆ ಹಲವರು ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಇದೀಗ ಕನ್ನಡದ ‘ಸೂರ್ಯಕಾಂತಿ’ ನಟಿ ರೆಜಿನಾ ಕೆಸಾಂಡ್ರಾ ತಂಡಕ್ಕೆ ಹೊಸದಾಗಿ ಸೇರಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ರೆಜಿನಾ ‘ಮೂಕುತಿ ಅಮ್ಮನ್ 2’ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ನಯನತಾರಾಗೆ ಸೆಡ್ಡು ಹೊಡೆಯುತ್ತಿದ್ದಾರೆ. ಆರಂಭದಲ್ಲಿ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರೆಜಿನಾ ಇತ್ತೀಚಿನ ವರ್ಷಗಳಲ್ಲಿ ಖಳನಾಯಕಿ ಪಾತ್ರಗಳಲ್ಲೂ ಮಿಂಚುತ್ತಿದ್ದಾರೆ. ತಮಿಳಿನ ‘ವಿದಾಮುಯರ್ಚಿ’, ‘ಜಾಟ್’ ಚಿತ್ರಗಳಲ್ಲಿ ವಿಲನ್ ಆಗಿದ್ದ ರೆಜಿನಾ ಇದೀಗ ಮತ್ತೊಮ್ಮೆ ‘ಮೂಕುತಿ ಅಮ್ಮನ್ 2’ನಲ್ಲಿಯೂ ಖಳನಾಯಕಿಯಾಗಿದ್ದಾರೆ. ನಿರ್ದೇಶಕ ಸುಂದರ್, ರೆಜಿನಾ ಪಾತ್ರವನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಿದ್ದು, ಈವರೆಗೆ ಕಾಣದ ರೀತಿಯಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಂಡ ಹೇಳಿಕೊಂಡಿದೆ. ಅಂದಾಜು 100 ಕೋಟಿ ಬಜೆಟ್‌ನಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ರಿಲೀಸ್‌ಗೂ ಮುನ್ನವೇ ಚಿತ್ರದ ಒಟಿಟಿ ಹಕ್ಕುಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಉಳಿದಂತೆ, ರೆಜಿನಾ ತಮಿಳಿನ ‘ಫ್ಲಾಷ್‌ಬ್ಯಾಕ್’, ಹಿಂದಿಯ ‘ದ ವೈಫ್ಸ್’, ‘ಸೆಕ್ಷನ್ 108’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್