19ನೇ ಆವೃತ್ತಿಯಲ್ಲಿ ಆರ್‌ಸಿಬಿ ವಿಜಯ ಸಾಧಿಸಿರುವುದಕ್ಕೆ ಇಡೀ ಸ್ಯಾಂಡಲ್‌ವುಡ್ ಹರ್ಷ ವ್ಯಕ್ತಪಡಿಸಿದೆ. ನಿರ್ದೇಶಕ ಸಿಂಪಲ್ ಸುನಿ ಅಹಮದಾಬಾದ್‌ಗೆ ತೆರಳಿ ಮೈದಾನದಲ್ಲಿ ಮ್ಯಾಚ್ ನೋಡಿ ಸಂಭ್ರಮಿಸಿದ್ದಾರೆ. ಹಾಗೇ ನಟರಾದ ಶಿವರಾಜಕುಮಾರ್, ರಿಷಬ್ ಶೆಟ್ಟಿ, ನಟಿಯರಾದ ಸಪ್ತಮಿಗೌಡ, ನಮ್ರತಾ ಗೌಡ, ಶ್ರುತಿ, ಅಮೃತಾ ಪ್ರೇಮ್, ಹರ್ಷಿಕಾ ಪೂಣಚ್ಚ, ಆಶಿಕಾ ರಂಗನಾಥ್ ಸೇರಿ ಹಲವು ತಾರೆಯರು ಜಾಲತಾಣದ ಮೂಲಕ ಗೆಲುವನ್ನು ಸಂಭ್ರಮಿಸಿದ್ದಾರೆ.