ಗಾಯದ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ರಶ್ಮಿಕಾ: ಕೈ ಹಿಡಿದು ಸಾಥ್ ನೀಡಿದ ವಿಜಯ್ ದೇವರಕೊಂಡ! Rashmika Mandanna

Rashmika Mandanna ಚಿತ್ರ Instagram
Rashmika Mandanna ಚಿತ್ರ Instagram
Published on

Rashmika Mandanna: ಮುಂಬರುವ ‘ಮೈಸಾ’ (Mysaa) ಚಿತ್ರದ ಸಾಹಸಮಯ ಹಾಡಿನ ಚಿತ್ರೀಕರಣದ ವೇಳೆ ಸೊಂಟದ ಭಾಗಕ್ಕೆ ತೀವ್ರ ಗಾಯ ಮಾಡಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ, ಸುದೀರ್ಘ ವಿಶ್ರಾಂತಿಯ ನಂತರ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ರಾಜಕಾರಣಿ, ಶಿರಗಾಪುರ ನಿರಂಜನ್ ರೆಡ್ಡಿ ಅವರ ಪುತ್ರ ಸಾಹಿಲ್ ರೆಡ್ಡಿ ಅವರ ಅದ್ದೂರಿ ನಿಶ್ಚಿತಾರ್ಥ ಸಮಾರಂಭದಲ್ಲಿ ರಶ್ಮಿಕಾ ತಮ್ಮ ಪತಿ ವಿಜಯ್​ ದೇವರಕೊಂಡ ಅವರೊಂದಿಗೆ ಭಾಗವಹಿಸಿದ್ದರು.

ವಿಜಯ್ ದೇವರಕೊಂಡ ತೋರಿದ ಕಾಳಜಿ

ಈ ಶುಭ ಸಮಾರಂಭಕ್ಕಾಗಿ ರಶ್ಮಿಕಾ ಕಪ್ಪು ಮತ್ತು ಚಿನ್ನದ ಬಣ್ಣದ ಅನಾರ್ಕಲಿ ಉಡುಪಿನಲ್ಲಿ ಕಂಗೊಳಿಸಿದರೆ, ವಿಜಯ್ ಬಂದ್‌ಗಲಾ ಉಡುಪಿನಲ್ಲಿ ಜೊತೆಯಾದರು. ಆದಾಗ್ಯೂ, ಗಾಯದ ನೋವಿನಿಂದ ಸಂಪೂರ್ಣ ಚೇತರಿಸಿಕೊಳ್ಳದ ರಶ್ಮಿಕಾ ನಡೆಯುವಾಗ ಸ್ವಲ್ಪ ಕಷ್ಟಪಡುತ್ತಿದ್ದದ್ದನ್ನು ಗಮನಿಸಿದ ವಿಜಯ್​ ಭದ್ರವಾಗಿ ಹಿಡಿದುಕೊಂಡು ವೇದಿಕೆಯತ್ತ ಕರೆದೊಯ್ದರು. ಈ ವೇಳೆಯಲ್ಲಿ ಇಬ್ಬರೂ ತಮಾಷೆಯಾಗಿ ಮಾತನಾಡುತ್ತಾ ನಗೆಯಾಡಿದ ದೃಶ್ಯಗಳು ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನಸೆಳೆದವು.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಹರ್ಷ

ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ರಶ್ಮಿಕಾ ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ. ಸ್ವಲ್ಪ ಕುಂಟುತ್ತಿರುವುದು ಕಂಡುಬಂದರೂ, ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿರುವುದು ಖುಷಿ ನೀಡಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ರಶ್ಮಿಕಾ ಅವರಿಗೆ ಇನ್ನು ಕೆಲವು ವಾರಗಳ ಕಾಲ ಪೂರ್ಣ ವಿಶ್ರಾಂತಿ ಅಗತ್ಯವಿದೆ ಎಂದು ಪ್ರೀತಿಯ ಕಾಳಜಿ ತೋರಿದ್ದಾರೆ.

ಗಾಯದ ವಿವರ ಹಂಚಿಕೊಂಡಿದ್ದ ನಟಿ

ಆಗಸ್ಟ್ 3 ರಂದು ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದ ರಶ್ಮಿಕಾ, ಮೈಸಾ ಸಿನಿಮಾದ ಚಿತ್ರೀಕರಣದ ವೇಳೆ ನನ್ನ ಬಲ ಸೊಂಟದ ಟೆಂಡನ್ ತುಂಡಾಗಿತ್ತು. ಇದು ನನಗೆ ಸತತವಾಗಿ ಸಂಭವಿಸಿದ 3ನೇ ಗಾಯ. ನನ್ನ ದೇಹವನ್ನು ಯಂತ್ರದಂತೆ ದಂಡಿಸದೆ, ಮನುಷ್ಯರಂತೆ ನೋಡಿಕೊಳ್ಳುವುದನ್ನು ನಾನು ಕಲಿಯಬೇಕಿದೆ ಎಂದು ತಿಳಿಸಿದ್ದರು. ಆದಾಗ್ಯೂ, ನಿರಂತರ ಕೆಲಸದ ನಡುವೆ ಬಲವಂತವಾಗಿ ಬಂದ ಈ ವಿಶ್ರಾಂತಿಯ ದಿನಗಳಲ್ಲಿ ತಾವು ಗುಣಮುಖರಾಗುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net