ರಾಯಲಸೀಮೆಯ ರಣಧೀರ ರಣಬಾಲಿ: ಟ್ರೇಲರ್‌ನಲ್ಲಿ ಮಿಂಚಿದ ನಟ ವಿಜಯ್ ದೇವರಕೊಂಡ, ಇದೇ 16ಕ್ಕೆ ಸಿನಿಮಾ ತೆರೆಗೆ

ಸತತ ಸೋಲಿನಿಂದ ಕಂಗೆಟ್ಟಿರುವ ತೆಲುಗು ನಟ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ‘ರಣಬಾಲಿ’ ಮೂಲಕ ಗೆಲುವಿನ ಹಳಿಗೆ ಬರುವ ತವಕದಲ್ಲಿದ್ದಾರೆ. ಇಲ್ಲಿ ವಿಜಯ್‌ಗೆ ಪತ್ನಿ, ನಟಿ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದು, ‘ಗೀತಗೋವಿಂದಂ’ (2018), ‘ಡಿಯರ್ ಕಾಮ್ರೇಡ್’ (2019) ಬಳಿಕ ಏಳು ವರ್ಷಗಳ ಬಳಿಕ ತಾರಾ ಜೋಡಿ ಒಂದಾಗಿರುವ ಕಾರಣ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ.
ranabaali poster
ರಣಬಾಲಿ ಪೋಸ್ಟರ್​
Published on: 

ಸತತ ಸೋಲಿನಿಂದ ಕಂಗೆಟ್ಟಿರುವ ತೆಲುಗು ನಟ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ‘ರಣಬಾಲಿ’ ಮೂಲಕ ಗೆಲುವಿನ ಹಳಿಗೆ ಬರುವ ತವಕದಲ್ಲಿದ್ದಾರೆ. ಇಲ್ಲಿ ವಿಜಯ್‌ಗೆ ಪತ್ನಿ, ನಟಿ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದು, ‘ಗೀತಗೋವಿಂದಂ’ (2018), ‘ಡಿಯರ್ ಕಾಮ್ರೇಡ್’ (2019) ಬಳಿಕ ಏಳು ವರ್ಷಗಳ ಬಳಿಕ ತಾರಾ ಜೋಡಿ ಒಂದಾಗಿರುವ ಕಾರಣ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ರಿಲೀಸ್ ಮಾಡಿರುವ ‘ಏನಯ್ಯ ಸ್ವಾಮಿ’ ಸಾಂಗ್ ಹಿಟ್ ಲಿಸ್ಟ್ ಸೇರಿದ್ದು, ಪೋಸ್ಟರ್, ಟೀಸರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ 16ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಚಿತ್ರತಂಡ ದೇಶದ ವಿವಿಧೆಡೆ ಪ್ರಚಾರಕ್ಕೆ ಮುಂದಾಗಿದೆ. ಶೀಘ್ರದಲ್ಲಿ ಚಿತ್ರತಂಡ ಬೆಂಗಳೂರಿಗೂ ಆಗಮಿಸಲಿದೆ. ಅದಕ್ಕೂ ಮುನ್ನ ‘ರಣಬಾಲಿ’ ಟೀಮ್ ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಮಾಡಿದೆ. ಇದು ಸ್ವಾತಂತ್ರ್ಯಪೂರ್ವ ಕಥೆಯಾಗಿದ್ದು, ರಾಯಲಸೀಮೆಯ ಜನ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದ ನೈಜ ಘಟನೆಯನ್ನಾಧರಿಸಿದೆ. ಸದ್ಯ ರಿಲೀಸ್ ಮಾಡಿರುವ 3.47 ನಿಮಿಷದ ಟ್ರೇಲರ್ ಕೂಡ ರಾಯಲಸೀಮೆಯ ರಣಧೀರ ರಣಬಾಲಿ ಮತ್ತು ಬ್ರಿಟಿಷರ ನಡುವಿನ ಕಾಳಗಕ್ಕೆ ಸಾಕ್ಷಿಯಾಗಿದೆ. ಭಾರತೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ಚಿತ್ರಹಿಂಸೆ ನೀಡುತ್ತಿರುವ ಬ್ರಿಟಿಷರಿಗೆ ರಣಬಾಲಿ, ವೀರೋಚಿತ ಹೋರಾಟದ ಮೂಲಕ ಉತ್ತರ ನೀಡುತ್ತಿರುವ ದೃಶ್ಯಗಳಿಂದ ಟ್ರೇಲರ್ ಕೂಡಿದೆ. ಇನ್ನು ವಿಜಯ್ ದೇವರಕೊಂಡ ಪಾತ್ರದಲ್ಲಿ ಪರಕಾಯ ಪ್ರವೇಶಿಸಿದ್ದು, ಸಿಟ್ಟು, ಆಕ್ರೋಶ, ಬಂಡಾಯವನ್ನು ಕಣ್ಣಿನಲ್ಲಿಯೇ ತೋರಿಸಿದ್ದಾರೆ. ‘ಶ್ಯಾಮ್ ಸಿಂಗ ರಾಯ್’ ಖ್ಯಾತಿಯ ರಾಹುಲ್ ಸಂಕೃತ್ಯನ್ ಈ ಪೀರಿಯಾಡಿಕ್ ಆ್ಯಕ್ಷನ್ ಸಿನಿಮಾ ನಿರ್ದೇಶಿಸಿದ್ದು, ಅಜಯ್-ಅತುಲ್ ಸಂಗೀತ, ನೀರವ್ ಶಾ-ಜಿಷ್ಣು ಭಟ್ಟಾಚಾರ್ಯ ಛಾಯಾಗ್ರಹಣದಲ್ಲಿ ಮೂಡಿಬಂದಿದೆ. -ಏಜೆನ್ಸೀಸ್

‘ದ ಮಮ್ಮಿ’ ಖಳನಟ ಅರ್ನಾಲ್ಡ್ ಡೆಬ್ಯೂ

‘ರಣಬಾಲಿ’ಯಲ್ಲಿ ಹಲವು ಹಾಲಿವುಡ್ ನಟರು ಅಭಿನಯಿಸಿರುವುದು ವಿಶೇಷ. ಅದರಲ್ಲೂ ‘ದ ಮಮ್ಮಿ’ ಸರಣಿ, ‘ಜಿಐ ಜೋ’ ಸರಣಿಯ ಖಳನಟ ಅರ್ನಾಲ್ಡ್ ವೋಸ್ಲೊ ಈ ಚಿತ್ರದ ಮೂಲಕ ತೆಲುಗಿಗೆ ಮಾತ್ರವಲ್ಲದೆ ಭಾರತೀಯ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಭಾರತೀಯರನ್ನು ಹಿಂಸಿಸುವ ಬ್ರಿಟಿಷ್ ಅಧಿಕಾರಿ ಸರ್ ಥಿಯೋಡರ್ ಹೆಕ್ಟರ್ ಪಾತ್ರದಲ್ಲಿ ಅರ್ನಾಲ್ಡ್ ಅಬ್ಬರಿಸಿದ್ದಾರೆ. ‘ರಣಬಾಲಿ’ಯಲ್ಲಿ ವಿಜಯ್ ಮತ್ತು ಅರ್ನಾಲ್ಡ್ ನಡುವಿನ ಸಂಘರ್ಷದ ದೃಶ್ಯಗಳು ಗಮನ ಸೆಳೆಯುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net