ಪ್ರಣಮ್ ನಿಶ್ಚಿತಾರ್ಥ! : ಬಹುಕಾಲದ ಗೆಳತಿ ನಮಿತಾ ಗೋಪಾಲ್ ಜತೆ ಉಂಗುರ ಬದಲಾಯಿಸಿಕೊಂಡ ನಟ

ನಮಿತಾ ಗೋಪಾಲ್- ಪ್ರಣಮ್ ದೇವರಾಜ್
ನಮಿತಾ ಗೋಪಾಲ್- ಪ್ರಣಮ್ ದೇವರಾಜ್
Published on

ಪ್ರಮುಖ ಮುಖ್ಯಾಂಶಗಳು

  • ದೇವರಾಜ್ ಕಿರಿಯ ಪುತ್ರನ ನಿಶ್ಚಿತಾರ್ಥ
  • ಉಂಗುರ ಬದಲಾಯಿಸಿಕೊಂಡ ಪ್ರಣಮ್​- ನಮಿತಾ
  • ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ

ಬೆಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಟ ದೇವರಾಜ್ ಕಿರಿಯ ಪುತ್ರ ಪ್ರಣಮ್ ದೇವರಾಜ್‌ರ ಮದುವೆ ನಿಶ್ಚಿತಾರ್ಥ ನೆರವೇರಿದೆ. ಬುಧವಾರ ಬೆಂಗಳೂರಿನ ನಿವಾಸದಲ್ಲಿ ಅದ್ದೂರಿಯಾಗಿ ಸಮಾರಂಭ ನೆರವೇರಿದ್ದು, ಬಹುಕಾಲದ ಗೆಳತಿ ನಮಿತಾ ಗೋಪಾಲ್ ಜತೆ ಪ್ರಣಮ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಸಮಾರಂಭದಲ್ಲಿ ಸ್ಯಾಂಡಲ್‌ವುಡ್ ಗಣ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ. ಪ್ರಣಮ್ ದೇವರಾಜ್ ಕನ್ನಡದ ‘ಕುಮಾರಿ 21 ಎಫ್​…’, ‘ಸನ್ ಆಫ್​ ಮುತ್ತಣ್ಣ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಶ್ರೀಕಾಂತ್ ಹುಣಸೂರು ನಿರ್ದೇಶನದ ಸಿನಿಮಾದ ಜತೆಗೆ ಇನ್ನೊಂದು ‘ರುಸ್ತುಂ’ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಪ್ರಣಮ್ ಮದುವೆಯಾಗುತ್ತಿರುವ ಹುಡುಗಿ ನಮಿತಾ ಗೋಪಾಲ್ ಇಂಗ್ಲೆಂಡ್‌ನ ನ್ಯಾಟಿಗಮ್ ಟ್ರೆಂಟ್ ವಿವಿಯಿಂದ ಪದವಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ನಿಶ್ಚಿತಾರ್ಥ ಫೋಟೋ, ವಿಡಿಯೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಸೇರಿ ಸ್ಯಾಂಡಲ್‌ವುಡ್ ಕಲಾವಿದರು ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net