Toxic Piracy- ಟಾಕ್ಸಿಕ್​ಗೆ ಪೈರಸಿ ಕಾಟ

ಟಾಕ್ಸಿಕ್
ಟಾಕ್ಸಿಕ್
Published on
Toxic Piracy -
ಯಶ್​, ನಿರ್ದೇಶಕಿ ಗೀತು ಮೋಹನದಾಸ್​ ಮತ್ತು ಕೆವಿಎನ್​ ಪ್ರೊಡಕ್ಷನ್ಸ್​ ನಿರ್ಮಾಣದಲ್ಲಿ ಮೂಡಿಬಂದಿರುವ ಈ ವರ್ಷದ ಬಹುನಿರೀತ ಸಿನಿಮಾ "ಟಾಕ್ಸಿಕ್​'. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ, ನೆಗೆಟಿವ್​ ಪ್ರಚಾರದ ನಡುವೆಯೂ ಸಿನಿಮಾ ರಿಲೀಸ್​ ಆದ ಐದು ದಿನಗಳಲ್ಲಿ ಭಾರತದ ಬಾಕ್ಸಾಫೀಸಿನಲ್ಲಿ ₹255.95 ಕೋಟಿ ಹಾಗೂ ಓವರ್​ಸೀಸ್​ನಲ್ಲಿ ₹29.25 ಕೋಟಿ ಸೇರಿ ಒಟ್ಟು ₹285. 20 ಕೋಟಿ ಗಳಿಕೆ ಮಾಡಿಕೊಂಡಿದ್ದು, ₹300 ಕೋಟಿ ಕ್ಲಬ್​ನತ್ತ ಸಾಗಿದೆ. ಒಂದೆಡೆ ಹಿಂದಿ ಮತ್ತು ತೆಲುಗು ಚಿತ್ರರಂಗಗಳಲ್ಲಿ "ಟಾಕ್ಸಿಕ್​' ವಿರುದ್ಧ ದೊಡ್ಡ ಮಟ್ಟದಲ್ಲಿ ನೆಗಟಿವ್​ ಪ್ರಚಾರ ನಡೆಸಲಾಗುತ್ತಿದ್ದು, ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಸಾಲದು ಎಂಬಂತೆ "ಟಾಕ್ಸಿಕ್​'ಗೆ ಪೈರಸಿ ಕೂಡ ಕಂಟಕವಾಗಿ ಕಾಡುತ್ತಿದೆ. ಮೂಲಗಳ ಪ್ರಕಾರ ಸಿನಿಮಾ ರಿಲೀಸ್​ ಆದ ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಲಿಂಕ್​ಗಳನ್ನು ಡಿಲೀಟ್​ ಮಾಡಲಾಗಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಕೇವಲ ನಾಲ್ಕು ದಿನಗಳಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪೈರಸಿ ಲಿಂಕ್​ಗಳನ್ನು ಡಿಲೀಟ್​ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ. ಹಾಗೇ ಆರು ದಿನಗಳಲ್ಲಿ 1.37 ಲಕ್ಷಕ್ಕೂ ಅಧಿಕ ಪೈರಸಿ ಲಿಂಕ್​ಗಳನ್ನು ಡಿಲೀಟ್​ ಮಾಡಲಾಗಿದೆ. "ಈ ಹಿಂದೆ "ಅನಿಮಲ್​', "ಧುರಂಧರ್​' ಮತ್ತು "ಪುಷ್ಪ' ಸರಣಿ ಸೇರಿ ಕೆಲ ಪ್ಯಾನ್​ ಇಂಡಿಯಾ ಚಿತ್ರಗಳು ಪೈರಸಿಯಾಗಿದ್ದರೂ, ಅತಿ ಕಡಿಮೆ ಸಮಯದಲ್ಲಿ ಲಾಂತರ ಲಿಂಕ್​ಗಳು ಜಾಲತಾಣ ಸೇರಿರಲಿಲ್ಲ. ಆದರೆ, ನಟ ಯಶ್​ ಮತ್ತು "ಟಾಕ್ಸಿಕ್​' ಚಿತ್ರವನ್ನು ಮಟ್ಟ ಹಾಕಲೇಬೇಕೆಂದು ಕೆಲ ಕಾಣದ ಕೈಗಳು ಪಣ ತೊಟ್ಟಂತಿದೆ ಎಂಬ ಮಾತುಗಳು ಸ್ಯಾಂಡಲ್​ವುಡ್​ನಲ್ಲಿ ಕೇಳಿಬರುತ್ತಿವೆ.

ಎಲ್ಲೆಲ್ಲಿ ಪೈರಸಿ?

ಸಾಮಾನ್ಯವಾಗಿ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್​ ಆದ ಎರಡು ಅಥವಾ ಮೂರನೇ ದಿನದಿಂದ ಪೈರಸಿ ಕಾಪಿಗಳು ಜಾಲತಾಣ ಸೇರುತ್ತವೆ. ಆದರೆ, ಬುಧವಾರ ಬೆಳಗ್ಗೆ 10 ಗಂಟೆಯಿಂದಲೇ ಅರ್ಥಾತ್​ ಮುಂಜಾನೆ ಶೋ ಮುಗಿದ ಕೆಲವೇ ನಿಮಿಷಗಳಲ್ಲೇ "ಟಾಕ್ಸಿಕ್​' ಪೈರಸಿ ಕಾಪಿಗಳು ವೈರಲ್​ ಆಗುತ್ತಿವೆ. ಮೊದಲು ಟಾರೆಂಟ್​ ವೆಬ್​ಸೈಟ್​ನಲ್ಲಿ ಪೈರಸಿ ಸಿನಿಮಾಗಳನ್ನು ಅಪ್​ಲೋಡ್​ ಮಾಡಲಾಗುತ್ತಿತ್ತು. ಅಲ್ಲಿಂದ ಟೆಲಿಗ್ರಾಂ, ಫೇಸ್​ಬುಕ್​, ಇನ್​ಸ್ಟಾಗ್ರಾಂ, ಯೂಟ್ಯೂಬ್​ ಸೇರಿ ಇತರೆ ಜಾಲತಾಣಗಳಲ್ಲಿ ಲಿಂಕ್​ ಹಂಚಿಕೆಯಾಗುತ್ತಿತ್ತು. ಆದರೆ, ಇತ್ತೀಚೆಗೆ ಟಾರೆಂಟ್​ಗಿಂತ ಹೆಚ್ಚಾಗಿ ಟೆಲಿಗ್ರಾಂನಲ್ಲಿ ಸಿನಿಮಾ ಲಿಂಕ್​ಗಳನ್ನು ಶೇರ್​ ಮಾಡಲಾಗುತ್ತಿದೆ. ಹಾಗೇ ಫೇಸ್​ಬುಕ್​, ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂನಲ್ಲೂ ನಕಲಿ ಖಾತೆಗಳ ಮೂಲಕ ಇಡೀ ಸಿನಿಮಾನೇ ಅಪ್​ಲೋಡ್​ ಮಾಡಲಾಗಿದೆ. ಅಂತಹ ಲಿಂಕ್​ಗಳನ್ನು ಹುಡುಕಿ ಡಿಲೀಟ್​ ಮಾಡುವ ಹೊತ್ತಿಗೆ ಕೆಲವೇ ನಿಮಿಷಗಳಲ್ಲಿ ಚಿತ್ರವನ್ನು ಸಾವಿರಾರು ಮಂದಿ ವೀಸುತ್ತಿದ್ದು, "ಟಾಕ್ಸಿಕ್​' ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದುವರೆಗಿನ ಗಳಿಕೆ

ರಿಲೀಸ್​ ಆದ ಮೊದಲ ದಿನ ಬುಧವಾರ (ಆ. 26) ಭಾರತದಲ್ಲಿ "ಟಾಕ್ಸಿಕ್​' ಚಿತ್ರದ 24,479 ಶೋಗಳಿದ್ದವು. ಫಸ್ಟ್​ ಡೇ ದೇಶಾದ್ಯಂತ ಬರೋಬ್ಬರಿ ₹130 ಕೋಟಿ ಸೇರಿ ವಿಶ್ವಾದ್ಯಂತ ₹150 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿಕೊಂಡಿತ್ತು. ಆದರೆ, ಎರಡನೇ ದಿನದಿಂದಲೇ ನೆಗೆಟಿವ್​ ಪ್ರಚಾರದಿಂದಾಗಿ ಹಿಂದಿ ಮತ್ತು ತೆಲುಗು ರಾಜ್ಯಗಳಲ್ಲಿ ಚಿತ್ರಕ್ಕೆ ದೊಡ್ಡ ಹೊಡೆತ ಬಿತ್ತು. ಹೀಗಾಗಿ ಎರಡನೇ ದಿನ <48.65 ಕೋಟಿಗೆ ಕಲೆಕ್ಷನ್​ ಇಳಿದಿತ್ತು. ನಂತರ ಮೂರನೇ ದಿನ <34.5 ಕೋಟಿ, ನಾಲ್ಕನೇ ದಿನ ₹27.15 ಕೋಟಿ ಹಾಗೂ ಐದನೇ ದಿನ ಭಾನುವಾರ (ಆ. 30) ₹23 ಕೋಟಿ ಗಳಿಸಿದೆ. ಹೀಗೆ ದಿನೇ ದಿನೆ ಚಿತ್ರದ ಗಳಿಕೆ ಇಳಿಯುತ್ತಿರುವ ಕಾರಣ, ಭಾರತದಲ್ಲಿ ಮೊದಲ ದಿನ 24,579 ಇದ್ದ "ಟಾಕ್ಸಿಕ್​' ಶೋಗಳ ಸಂಖ್ಯೆ, ಐದನೇ ದಿನಕ್ಕೆ 16,241ಕ್ಕೆ ಇಳಿದಿದೆ. ಸೋಮವಾರ (ಆ. 31) ಶೋಗಳ ಸಂಖ್ಯೆಯನ್ನು ಮತ್ತಷ್ಟು ಇಳಿಸಲಾಗಿದ್ದು ಕೇವಲ 4279 ಶೋಗಳಷ್ಟೇ ಪ್ರದರ್ಶನವಾಗಿವೆ ಎನ್ನಲಾಗಿದೆ.

ಮೊದಲು ಮೈನಸ್​ ನಂತರ ಪ್ಲಸ್​!

"ಟಾಕ್ಸಿಕ್​' ರಿಲೀಸ್​ ಆದ ಮೊದಲ ದಿನದಿಂದಲೇ ನೆಗೆಟಿವ್​ ಪ್ರಚಾರ ಮತ್ತು ಪೈರಸಿ ಹಾವಳಿ ಮಿತಿಮೀರಿತ್ತು. ಎರಡು ಮತ್ತು ಮೂರನೇ ದಿನ ಮುಗಿಲು ಮುಟ್ಟಿತ್ತು. ನಾಲ್ಕನೇ ದಿನದಿಂದ ಸ್ವಲ್ಪ ಮಟ್ಟಿಗೆ ಪಾಸಿಟಿವ್​ ಮೌತ್​ ಟು ಮೌತ್​ ಪಬ್ಲಿಸಿಟಿ ಪ್ರಾರಂಭವಾಗಿದ್ದು, ಸೋಮವಾರದಿಂದ ಪ್ರತಿ ತಾಸು ಸರಾಸರಿ 8ರಿಂದ 10 ಸಾವಿರ ಮಂದಿ ಆನ್​ಲೈನ್​ ಮೂಲಕ ಟಿಕೆಟ್​ ಬುಕ್​ ಆಗುತ್ತಿವೆ. ಹೀಗಾಗಿ ವಾರದ ದಿನಗಳಲ್ಲಿ "ಟಾಕ್ಸಿಕ್​' ಚೇತರಿಸಿಕೊಳ್ಳುವ ನಿರೀೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net