ಕೇನ್ಸ್ ಚಿತ್ರೋತ್ಸವದಲ್ಲಿ ಬಂಜಾರ ವಸ್ತ್ರವಿನ್ಯಾಸದಲ್ಲಿ ಮಿಂಚಿದ ರೂಪದರ್ಶಿ ದಿಶಾ ಮದನ್! Disha Madan

ಕೇನ್ಸ್ ಚಿತ್ರೋತ್ಸವದಲ್ಲಿ ಬಂಜಾರ ವಸ್ತ್ರವಿನ್ಯಾಸದಲ್ಲಿ ಮಿಂಚಿದ ರೂಪದರ್ಶಿ ದಿಶಾ ಮದನ್! Disha Madan
ಕೇನ್ಸ್ ಚಿತ್ರೋತ್ಸವದಲ್ಲಿ ಬಂಜಾರ ವಸ್ತ್ರವಿನ್ಯಾಸದಲ್ಲಿ ಮಿಂಚಿದ ರೂಪದರ್ಶಿ ದಿಶಾ ಮದನ್! Disha Madan
Published on

ಪ್ರಮುಖ ಮುಖ್ಯಾಂಶಗಳು

  • ಬಂಜಾರ ಸಮುದಾಯದ ಕರಕುಶಲ ಕರ್ಮಿಗಳು ವಿನ್ಯಾಸಗೊಳಿಸಿದ ಕಸೂತಿ ವಸ್ತ್ರದೊಂದಿಗೆ ರೂಪದರ್ಶಿ ದಿಶಾ ಮದನ್
  • ಬಂಜಾರ ಉಡುಗೆ ಧರಿಸಿ ಈ ಬಾರಿಯ ಕೇನ್ಸ್ ಚಿತ್ರೋತ್ಸವದಲ್ಲಿ ಕಂಗೊಳಿಸಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರ
  • ಕೇನ್ಸ್ ಚಿತ್ರೋತ್ಸವದಲ್ಲಿ ಬಂಜಾರ ಹೌಸ್ ಮೂಲಕ ತಯಾರಿಸಲಾದ ಫ್ಯಾಬ್ರಿಕ್, ಎಂಬ್ರಾಯ್ಡರಿಗಳನ್ನು ವಿಶೇಷವಾಗಿ ಪ್ರದರ್ಶನ
ಬೆಂಗಳೂರು: ವಿಜಯಪುರದ `ದಿ ಹೌಸ್ ಆಫ್ ಬಂಜಾರ’ ಸಂಸ್ಥೆಯ ಅಡಿಯಲ್ಲಿ ಸಕ್ರಿಯರಾಗಿರುವ ಬಂಜಾರ ಸಮುದಾಯದ ಕರಕುಶಲ ಕರ್ಮಿಗಳು ವಿನ್ಯಾಸಗೊಳಿಸಿದ ಕಸೂತಿ ವಸ್ತ್ರದೊಂದಿಗೆ ರೂಪದರ್ಶಿ ದಿಶಾ ಮದನ್ ( Disha Madan ) ಈ ಬಾರಿಯ ಕೇನ್ಸ್ ಚಿತ್ರೋತ್ಸವದಲ್ಲಿ ಕಂಗೊಳಿಸಿ, ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಬಂಜಾರರ ಪ್ರತಿಭೆ ಕೂಡ ಗಮನ ಸೆಳೆದಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಆಶಾ ಪಾಟೀಲ ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ತಮ್ಮ ನೇತೃತ್ವದ ಸಂಸ್ಥೆಯ ಬಂಜಾರ ಕರಕುಶಲ ಕರ್ಮಿಗಳು ಈ ವಸ್ತ್ರಗಳ ವಿಶಿಷ್ಟ ವಿನ್ಯಾಸಕ್ಕಾಗಿ 2,500 ಗಂಟೆಗಳ ಕಾಲದ ಪರಿಶ್ರಮ ಹಾಕಿದ್ದಾರೆ. ಇದಕ್ಕಾಗಿ ದಕ್ಷಿಣ ಭಾರತದ 30 ಮೀ. ಉದ್ದದ ವಿಶಿಷ್ಟ ರೇಷ್ಮೆಯನ್ನು ಉಪಯೋಗಿಸಲಾಗಿದೆ. ಅಲ್ಲದೆ, ವಿನ್ಯಾಸಕಿ ನಿಹಾರಿಕ ವಿವೇಕ ಮತ್ತು ಸಂಸ್ಥೆಯ ನಿರ್ಮಿತಿ ತಂಡದ ಸದಸ್ಯರು ಕೂಡ ಇದಕ್ಕಾಗಿ 80 ಗಂಟೆಗಳನ್ನು ವಿನಿಯೋಗಿಸಿದ್ದಾರೆ ಎಂದು ಹೇಳಿದ್ದಾರೆ.
ಕೇನ್ಸ್ ಚಿತ್ರೋತ್ಸವದಲ್ಲಿ ಬಂಜಾರ ಹೌಸ್ ಮೂಲಕ ತಯಾರಿಸಲಾದ ಫ್ಯಾಬ್ರಿಕ್, ಎಂಬ್ರಾಯ್ಡರಿಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗಿತ್ತು. ಲಂಬಾಣಿ ಸಮುದಾಯವು ಮೈಗೂಡಿಸಿಕೊಂಡಿರುವ ವಸ್ತ್ರವಿನ್ಯಾಸದ ಈ ಪ್ರತಿಭೆಯು ಜಾಗತಿಕ ಸ್ತರದಲ್ಲಿ ಗಮನ ಸೆಳೆದಿದೆ. ಇದರ ಜೊತೆಗೆ ಲಂಬಾಣಿ ಮಹಿಳೆಯರು ಧರಿಸುವ ಆಭರಣಗಳು ಕೂಡ ಪ್ರದರ್ಶಿತಗೊಂಡಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಜಯಪುರವನ್ನು ಕೇಂದ್ರ ಸ್ಥಳವಾಗಿ ಹೊಂದಿರುವ ದಿ ಹೌಸ್ ಆಫ್ ಬಂಜಾರ ಸಂಸ್ಥೆಯು ಬಂಜಾರ ಸಮುದಾಯದ ಈ ಪರಂಪರಾಗತ ಮತ್ತು ಸಾಂಪ್ರದಾಯಿಕ ವಸ್ತ್ರ ವಿನ್ಯಾಸ ಕೌಶಲವನ್ನು ಸಂರಕ್ಷಿಸಿ, ಹೆಚ್ಚಿನ ಮಟ್ಟದಲ್ಲಿ ಪ್ರಚುರಪಡಿಸಲು ಶ್ರಮಿಸುತ್ತಿದೆ. ಇದರ ಮೂಲಕ ನೂರಾರು ಮಹಿಳೆಯರಿಗೆ ಉತ್ತೇಜನ ನೀಡಲಾಗುತ್ತಿದ್ದು, ಮಾರುಕಟ್ಟೆ ಒದಗಿಸಲಾಗುತ್ತಿದೆ ಎಂದು ಆಶಾ ಅವರು ನುಡಿದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net