ಬಹುಶಃ ಇಂಥದ್ದೊಂದು ಕಾಂಬಿನೇಷನ್ಅನ್ನು ಯಾರೂ ನಿರೀೆ ಮಾಡಿರಲಿಲ್ಲವೇನೋ? ಹೌದು, ಕನಸಿನ ರಾಣಿ ಮಾಲಾಶ್ರೀ ಮತ್ತು "ಕಾಂತಾರ' ಖ್ಯಾತಿಯ ಕನಕವತಿ ಸದ್ಯ ದಣ ಭಾರತದ ಬಹುಬೇಡಿಕೆಯ ನಟಿಯಾಗಿರುವ ರುಕ್ಮಿಣಿ ವಸಂತ್ ಒಂದಾಗಿದ್ದಾರೆ. "ಮಂಗಳ ಗೌರಿ' ಎಂಬ ಚಿತ್ರದಲ್ಲಿ ಎರಡು ತಲೆಮಾರಿನ ಖ್ಯಾತ ನಟಿಯರು ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ಟೈಟಲ್ ಬಿಡುಗಡೆ ಮಾಡಲಾಗಿದ್ದು, ಸದ್ಯ ಶೂಟಿಂಗ್ ಭರದಿಂದ ಸಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ವೆಂಕಟ್ ಕೆ. ನಾರಾಯಣ್ ಮತ್ತು ದಾಾಯಿಣಿ ಟಾಕೀಸ್ ಬ್ಯಾನರ್ನಲ್ಲಿ ನಿರ್ದೇಶಕ ಹೇಮಂತ್ ಎಂ. ರಾವ್ ಜಂಟಿಯಾಗಿ ಈ ಸಿನಿಮಾ ನಿರ್ಮಿಸುತ್ತಿದ್ದು, ಇದೇ ಮೊದಲ ಬಾರಿಗೆ ಇಬ್ಬರೂ ಒಂದಾಗಿರುವುದು ನಿರೀೆ ಹೆಚ್ಚಿಸಿದೆ. "ಮಂಗಳ ಗೌರಿಗೆ'ಗೆ ರಾಹುಲ್ ಪಿ.ಕೆ. ಆ್ಯಕ್ಷನ್&ಕಟ್ ಹೇಳುತ್ತಿದ್ದಾರೆ. "ಸಪ್ತಸಾಗರದಾಚೆ' ಸರಣಿ ಮತ್ತು "ಟಾಕ್ಸಿಕ್' ಚಿತ್ರಗಳಲ್ಲಿ ನಟಿಸಿರುವ ರುಕ್ಮಿಣಿ ವಸಂತ್ಗೆ ಈ ಸಿನಿಮಾ ಎರಡೂ ನಿರ್ಮಾಣ ಸಂಸ್ಥೆಗಳ ಜತೆ ಎರಡನೇ ಚಿತ್ರವಾಗಿದೆ. ಉತ್ತರ ಪ್ರದೇಶದ ಲಖ್ನೋನಲ್ಲಿರುವ ಜಾಮಾ ಮಸೀದಿ ಎದುರು ಮಂಗಳ (ಮಾಲಾಶ್ರೀ) ಮತ್ತು ಪೊಲೀಸ್ ಕಾನ್ಸ್ಟೇಬಲ್ ಗೌರಿ (ರುಕ್ಮಿಣಿ ವಸಂತ್) ಸ್ಕೂಟರ್ ಮೇಲೆ ಕುಳಿತಿರುವಂತೆ ಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಕುತೂಹಲ ಮೂಡಿಸುವಂತಿದೆ. ಇದೊಂದು ಕಾಮಿಡಿ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು ಮಿಧುನ್ ಮುಕುಂದನ್ ಸಂಗೀತ, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ, ವಿಕ್ರಮ್ ಮೋರ್ ಸಾಹಸ ನಿರ್ದೇಶನದಲ್ಲಿ ಮೂಡಿಬರಲಿದೆ. ಸದ್ಯ ಸಿನಿಮಾ ಕೊನೆಯ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ.