_1786887744778.webp?w=480&auto=format%2Ccompress&fit=max)
_1786887744778.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಹಿರಿಯ ನಟ ಶಶಿಕುಮಾರ್ ಪುತ್ರ ಆದಿತ್ಯ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ‘ಓ ಮೈ ಲವ್’, ‘ಖೆಯೊಸ್’ ಸಿನಿಮಾಗಳಲ್ಲಿ ನಟಿಸಿರುವ ಅವರು ಇದೀಗ ಸದ್ದಿಲ್ಲದೇ ‘ರಾಶಿ’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಇಲ್ಲಿ ಆದಿತ್ಯಗೆ ‘ರಾನಿ’ ಖ್ಯಾತಿಯ ಸಮೀಕ್ಷಾ ಜೋಡಿಯಾಗಿದ್ದಾರೆ. ನಿರ್ಮಾಪಕ ಅಭಿಲಾಷ್ ಬರೆದ ಕಥೆಗೆ ವಿಜಯ್ ಪಾಳೇಗಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ -ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿವೆ. ಈ ನಡುವೆ ಚಿತ್ರತಂಡ ರಿಲೀಸ್‌ಗೆ ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ‘ಮೊದಲ ಪ್ರೀತಿ’ ಎಂಬ ಶೀರ್ಷಿಕೆಯ ಹಾಡನ್ನು ರಿಲೀಸ್ ಮಾಡಿದೆ. ನಿರ್ದೇಶಕ ವಿಜಯ್ ಪಾಳೇಗಾರ್ ರಚಿಸಿ, ಸಂಗೀತ ನೀಡಿರುವ ಈ ಹಾಡಿಗೆ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜಿಸಿದ್ದು, ಆದಿತ್ಯ ಶಶಿಕುಮಾರ್ ಹೆಜ್ಜೆ ಹಾಕಿದ್ದಾರೆ. ಚಿತ್ರದಲ್ಲಿ ಒಂದು ಪ್ರಮೋಷನಲ್ ಸಾಂಗ್ ಸೇರಿ ಐದು ಹಾಡುಗಳಿದ್ದು ಕುನಾಲ್ ಗಾಂಜಾವಾಲ, ವಿಜಯ್ ಯೇಸುದಾಸ್, ಅನುರಾಧಾ ಭಟ್, ಶರಣ್, ಮಳವಳ್ಳಿ ಮಹದೇವಸ್ವಾಮಿ ಧ್ವನಿಯಾಗಿದ್ದಾರೆ. ಆದಿತ್ಯ, ಸಮೀಕ್ಷಾ ಜತೆ ರಮೇಶ್ ಇಂದಿರಾ, ತಬಲ್ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ, ಭಜರಂಗಿ ಪ್ರಸನ್ನ ಕಲಾಬಳಗದಲ್ಲಿದ್ದಾರೆ.