‘ಗಾಂಧಿ ಜಯಂತಿ’ಗೆ ‘ಹುಲಿಬೀರ’: ಅ.2ಕ್ಕೆ ಉತ್ತರ ಕರ್ನಾಟಕದ ಸೊಗಡಿನ ಸಿನಿಮಾ ತೆರೆಗೆ

ಚೈತ್ರಾ, ಅಂಜನ್​, ವನು ಪಾಟೀಲ್
ಚೈತ್ರಾ, ಅಂಜನ್​, ವನು ಪಾಟೀಲ್
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕರ್ನಾಟಕದ ಸೊಗಡಿನ ಸಿನಿಮಾ
  • ಟ್ರೇಲರ್ ನಲ್ಲಿವೆ ಸ್ನೇಹ, ಪ್ರೀತಿ, ಪ್ರಣಯ, ದ್ವೇಷ ಹಾಗೂ ಸೇಡಿನ ಅಂಶಗಳು
  • ಅಂಜನ್ ಜತೆಗೆ ಚೈತ್ರಾ ತೋಟದ್​, ವನು ಪಾಟೀಲ್ ನಟನೆ
ಬೆಂಗಳೂರು: ಆಗಸ್ಟ್ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸಿನಿಮಾ ಹಂಗಾಮ ಜೋರಾಗಿದೆ. ಸೆಪ್ಟೆಂಬರ್‌ನಲ್ಲಿ ಈಗಾಗಲೇ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿದ್ದು, ಅಕ್ಟೋಬರ್‌ನಲ್ಲಿ ಕೂಡ ಸಿನಿಮಾ ಜಾತ್ರೆ ಮುಂದುವರಿದು ಹಲವು ಚಿತ್ರಗಳು ತೆರೆ ಕಾಣಲಿವೆ. ಅದರಲ್ಲಿ ‘ಹುಲಿಬೀರ’ ಕೂಡ ಒಂದು. ‘ಮದರಂಗಿ’ ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಪಕ್ಕಾ ಜವಾರಿ ಸೊಗಡಿನ ‘ಹುಲಿಬೀರ’ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಇದೇ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ‘ಜಿಗ್ರಿ ದೋಸ್ತ’ ಹಾಡಿನ ಮೂಲಕ ಸದ್ದು ಮಾಡಿರುವ ಈ ಚಿತ್ರದಲ್ಲಿ ರೂರಲ್ ಅಂಜನ್ ನಾಯಕನಾಗಿದ್ದು, ಅವರಿಗೆ ಚೈತ್ರಾ ತೋಟದ ಹಾಗೂ ವನು ಪಾಟೀಲ್ ಇಬ್ಬರು ಜೋಡಿಯಾಗಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಿರಿಯ ನಟ ಶಶಿಕುಮಾರ್ ಟ್ರೇಲರ್ ರಿಲೀಸ್ ಮಾಡಿ, ತಂಡಕ್ಕೆ ಶುಭ ಕೋರಿದರು. ಉತ್ತರ ಕರ್ನಾಟಕ ಭಾಷೆ ಶೈಲಿಯಲ್ಲಿ ಟ್ರೇಲರ್ ನಿರೂಪಣೆಯಾಗಿದ್ದು, ಸ್ನೇಹ, ಪ್ರೀತಿ, ಪ್ರಣಯ, ದ್ವೇಷ ಹಾಗೂ ಸೇಡಿನ ಅಂಶಗಳನ್ನು ನೋಡಬಹುದು. ನಾಯಕ ಅಂಜನ್, ‘2019ರಲ್ಲಿ ಅಪಘಾತಕ್ಕೀಡಾಗಿ ಡಿಪ್ರೆಷನ್‌ಗೆ ಹೋಗಿದ್ದೆ. ಆಗ ನನಗೆ ಚೈತನ್ಯ ತುಂಬಿದ್ದೆ ‘ಹುಲಿಬೀರ’. ಶಶಿಕುಮಾರ್ ಸರ್‌ಗೆ ಟ್ರೇಲರ್ ತೋರಿಸಿದೆ, ಕೊನೆಗೆ ಬರುವ ದೇವರ ದೃಶ್ಯಗಳನ್ನು ಚಪ್ಪಲಿ ತೆಗೆದು ನೋಡಿ ಎಂದು ಶುಭ ಕೋರಿದರು. ಪ್ರತಿ ಮನೆಯಲ್ಲಿ ಇಂತಹ ಒಬ್ಬ ಹುಡುಗ ಇರ್ತಾನೆ. ಆತ ಇಡೀ ಊರನ್ನೇ ಹೇಗೆ ಉದ್ಧಾರ ಮಾಡುತ್ತಾನೆ ಎಂಬುದೇ ‘ಹುಲಿಬೀರ’ ಎಂದು ಮಾಹಿತಿ ನೀಡಿದರು. ವೀರ್ ಸಮರ್ಥ್ ಸಂಗೀತ, ಧರ್ಮ ವಿಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net