'ನಾನು ನಿಮ್ಮ ಫ್ಯಾನ್​'​... ಒಂದೆರೆಡು ಹಿಟ್​ ಕೊಟ್ಟ ಯುವ ನಟನಿಗೆ 'ಸರ್' ಎನ್ನಬೇಡಿ ಶಿವಣ್ಣ! ಕನ್ನಡಿಗರ ಬೇಸರ ​

ನಟ ಪ್ರದೀಪ್ ರಂಗನಾಥನ್​, ಹಿರಿಯ ನಟ ಶಿವರಾಜ್​ಕುಮಾರ್​
ನಟ ಪ್ರದೀಪ್ ರಂಗನಾಥನ್​, ಹಿರಿಯ ನಟ ಶಿವರಾಜ್​ಕುಮಾರ್​
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮಾತನಾಡಿದ ಶಿವಣ್ಣ
  • ತಮಿಳಿನ ಯುವ ನಟನಿಗೆ ಸರ್​ ಎಂದು ಕರೆದ ಕನ್ನಡದ ಹಿರಿಯ ನಟ
  • ಶಿವಣ್ಣ ಸರ್​ ಎಂದು ಮಾತನಾಡಿಸಿದ್ದಕ್ಕೆ ಕನ್ನಡಿಗರು ಗರಂ
ತಮಿಳುನಾಡು: ಕನ್ನಡ ಚಿತ್ರರಂಗದ ಹಿರಿಯ ನಟ, ಡಾ. ಶಿವರಾಜ್​ಕುಮಾರ್​ ಅವರು ತಮಿಳಿನ ಯುವ ನಟನಿಗೆ 'ಸರ್'​ ಎಂದು ಗೌರವ ಕೊಟ್ಟು ಮಾತನಾಡಿಸಿದ್ದೇ ಸದ್ಯ ಒಂದಷ್ಟು ಕನ್ನಡ ಸಿನಿಪ್ರಿಯರ ಹಾಗೂ ಅಭಿಮಾನಿಗಳಲ್ಲಿ ಭಾರಿ ಬೇಸರಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ಆನಂದ್​ ವಿಕಟನ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಶಿವಣ್ಣ, ವೇದಿಕೆಯಲ್ಲಿ ತಮಿಳಿನ ಯುವ ನಟ, ನಿರ್ದೇಶಕ ಪ್ರದೀಪ್ ರಂಗನಾಥನ್ ಬಗ್ಗೆ ಕೆಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. "ಪ್ರದೀಪ್​ ಸರ್​, ನಿಮ್ಮ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ನಾನು ನಿಮ್ಮ ಅಭಿಮಾನಿ" ಎಂದರು. 
"ನಿಮ್ಮ ಎಲ್ಲ ಚಿತ್ರಗಳನ್ನು ನೋಡಿದ್ದೇನೆ. ವಾಸ್ತವವಾಗಿ, ನಿಮಗೆ ನಾನೂ ಅಭಿಮಾನಿ. ನನಗೆ ನಟ ಧನುಷ್ ಕಂಡರೆ ತುಂಬಾ ಇಷ್ಟ. ನಿಮ್ಮನ್ನು ನೋಡಿದಾಗಲೆಲ್ಲ, ನನಗೆ ಧನುಷ್ ಅವರನ್ನೇ ನೋಡುತ್ತಿರುವಂತೆ ಅನಿಸುತ್ತೆ. ನೀವೊಬ್ಬರು ಅದ್ಭುತ ನಿರ್ದೇಶಕ ಮತ್ತು ಉತ್ತಮ ನಟ ಕೂಡ" ಎಂದು ಮೆಚ್ಚಿ ಮಾತನಾಡಿದರು. ಶಿವಣ್ಣ ಅವರ ಈ ಮಾತುಗಳಿಂದ ಕೆಲವರು ಖುಷಿ ಪಟ್ಟರೆ, ಕನ್ನಡಿಗರು ತೀವ್ರ ಬೇಸರ ಹೊರಹಾಕಿದ್ದಾರೆ. 
'ಲವ್ ಟುಡೇ', 'ಡ್ರ್ಯಾಗನ್' ಮತ್ತು 'ಡ್ಯೂಡ್‌'ನಂತಹ ಸಿನಿಮಾಗಳ ಮೂಲಕ ಒಂದೆರೆಡು ಹಿಟ್​ ಕೊಟ್ಟ ತಕ್ಷಣ ಯುವ ನಟನಿಗೆ ಸರ್​ ಎನ್ನುವ ಅವಶ್ಯಕತೆಯಿಲ್ಲ. ನಿಮ್ಮ ಸ್ಥಾನವೇ ಬೇರೆ ಎಂದು ಶಿವಣ್ಣ ಅವರು ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net