ದುಃಖದ ಜೊತೆಗೆ ಬದುಕುವುದನ್ನು ಕಲಿಯುತ್ತಿದ್ದೇನೆ, ಬೇರೆ ದಾರಿಯೇ ಇಲ್ಲ; ಕೃಷಿ ತಾಪಂಡ ಹೊಸ ಪೋಸ್ಟ್..Krishi Thapanda

Krishi Thapanda
Krishi Thapanda
Published on

ಪ್ರಮುಖ ಮುಖ್ಯಾಂಶಗಳು

  • ಆತ್ಮೀಯ ವೈಶಾಖ್​ ನಿಧನದ ನಂತರ ಮತ್ತೊಂದು ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಕೃಷಿ
  • ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ…ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ ಎಂದು ಭಾವುಕ
  • ನೀವು ಗಟ್ಟಿಗಿತ್ತಿ..ಎಲ್ಲ ಸರಿಯಾಗುತ್ತೆ ಎಂದು ಅಭಿಮಾನಿಗಳಿಂದ ಸಿಕ್ತು ಸಾಂತ್ವನ
Krishi Thapanda: ಕನ್ನಡದ ನಟಿ ಹಾಗೂ ಬಿಗ್​​ಬಾಸ್​​ನ ಮಾಜಿ ಸ್ಪರ್ಧಿ ಕೃಷಿ ತಾಪಂಡ ಅವರು ಮತ್ತೆ ಮೌನ ಮುರಿದಿದ್ದಾರೆ. ಇತ್ತೀಚೆಗೆ ತಮ್ಮ ಆತ್ಮೀಯ ಸ್ನೇಹಿತ ವೈಶಾಖ್​ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾವಿರಾರು ಊಹಾಪೋಹಕ್ಕೆ ಕಾರಣವಾಗಿತ್ತು.  ಆ ಬೆನ್ನಲ್ಲೇ ಅವರು ನಿಮ್ಮ ವದಂತಿಗಳನ್ನು ನಿಲ್ಲಿಸಿ. ನನಗೆ ಬದುಕಲು ಬಿಡಿ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಸದ್ಯ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಮತ್ತೊಂದು ಪೋಸ್ಟ್​​  ಗಮನಸೆಳೆದಿದೆ.

ಕೃಷಿ ಪೋಸ್ಟ್​ನಲ್ಲಿ ಏನಿದೆ?

ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ…ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ.ಆಯ್ಕೆ ಮಾಡಿಕೊಂಡದ್ದರಿಂದಲ್ಲ..ಬೇರೆ ದಾರಿಯೇ ಇಲ್ಲದ ಕಾರಣ ಎಂದು ಬರೆದುಕೊಂಡು ಇತ್ತೀಚೆಗೆ ಅವರು ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅವರ ಫಾಲೋವರ್ಸ್​ಗಳು ಧೈರ್ಯ ತುಂಬಿದ್ದಾರೆ. 
ಐದಾರು ಫೋಟೋ ಹಂಚಿಕೊಂಡಿರುವ ನಟಿ ಕೃಷಿ ತಾಪಂಡ ಅವರು ಮೊದಲ ಫೋಟೋದಲ್ಲಿ ಯಾವುದೋ ಕಲ್ಲಿನ ಮೇಲೆ ಆಲೋಚಿಸುತ್ತ ಕುಳಿತ ಫೋಟೋಗೆ ಅಪೂರ್ಣ ಎಂದು ಬರೆದುಕೊಂಡಿದ್ದಾರೆ. ಪ್ರಕೃತಿ, ಮಳೆ,  ಶ್ವಾನ ನಿದ್ರಿಸುತ್ತಿರುವುದು,  ಪಕ್ಷಿಗಳ ಓಡಾಟ, ಗಿಡಕ್ಕೆ ನೀರುಣಿಸುವಾಗ ಆಳವಾಗಿ ಚಿಂತಿಸುತ್ತಿರುವ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. 

ನೆಟ್ಟಿಗರು ಏನಂದ್ರು?

ಒಳ್ಳೆ ಕಾಲ ಬಂದೇ ಬರುತ್ತೆ ನೀವು ಅದಕ್ಕಾಗಿ ಕಾಯಬೇಕಷ್ಟೇ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಗಟ್ಟಿಯಾಗಿ ನಿಲ್ಲಿ ಎಂದಿದ್ದಾರೆ. ಸಮಯ ಎಲ್ಲವನ್ನೂ ಮರೆಸುತ್ತೆ. ಕತ್ತಲು ಬಂದರೆ ಬೆಳಕು ಬರೋದು. ನೀವು ನಾನು ನೋಡಿದ ಬಲಿಷ್ಠ ಮಹಿಳೆ ಎಂದು ಅಭಿಮಾನಿಗಳು ಸಾಂತ್ವನ ಹೇಳಿದ್ದಾರೆ,

ವೈಶಾಖ್ ಆತ್ಮಹತ್ಯೆ

ನಟಿ ಕೃಷಿ ತಾಪಂಡ ಅವರ ಆರ್​ಆರ್​ನಗರದ  ಫ್ಲಾಟ್​​ನಲ್ಲಿ ಅವರ ಆತ್ಮೀಯ ಸ್ನೇಹಿತ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲಸದ ನಿಮಿತ್ತ ಯಲಹಂಕದಲ್ಲಿದ್ದ ಅವರಿಗೆ ವೈಶಾಖ್ ಜೀವನ ಕೊನೆಗೊಳಿಸುವ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ನಾನು ಬರುವವರೆಗೂ ತಡೆದಿರು..ರಾಯರ ಮಠಕ್ಕೆ ಹೋಗೋಣ ಎಂದಿದ್ದರಂತೆ ಆದರೆ, ನಟಿ ಬರುವವೇಳೆಗೆ ಅವರದ್ದೇ ಸೀರೆಯಲ್ಲಿ ಸೂಸೈಡ್ ಮಾಡಿಕೊಂಡಿದ್ದರು. ಆನಂತರ ಸಾಕಷ್ಟು ವದಂತಿ ಹರಿದಾಡಿತ್ತು.

ಬದುಕಲು ಬಿಡಿ ಪ್ಲೀಸ್

ವದಂತಿಗಳಿಗೆ ಬ್ರೇಕ್​  ಹಾಕಲು ನಟಿ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದರು. ಇಂತಹದೊಂದನ್ನು ನಾನು ಬರಿಯುತ್ತೇನೆ ಎಂದುಕೊಂಡಿರಲಿಲ್ಲ. ಆತ್ಮೀಯ ವ್ಯಕ್ತಿಯನ್ನು ಕಳೆದುಕೊಂಡು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದೇನೆ ಎಂದು ತಿಳಿದಿಲ್ಲ. ಈ ಮಧ್ಯೆ ನನ್ನ ವಿರುದ್ಧ ಹರಡುತ್ತಿರುವ ವದಂತಿಯನ್ನು ನಿಲ್ಲಿಸಿ. ನನಗೆ ಬದುಕಲು ಬಿಡಿ ಎಂದು ಬರೆದುಕೊಂಡಿದ್ದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net