ನಿಮ್ಮ ಧೈರ್ಯಶಾಲಿ ಪ್ರಯತ್ನಕ್ಕೆ ನನ್ನ ಬೆಂಬಲವಿದೆ: 'ಟಾಕ್ಸಿಕ್​'ಗೆ ರಿಷಬ್​ ಶೆಟ್ಟಿ ಸಾಥ್; ರಾಕಿಂಗ್​ ಸ್ಟಾರ್​ ಬಗ್ಗೆ ಡಿವೈನ್​ ಸ್ಟಾರ್ ಹೇಳಿದ್ದೇನು? Rishab Shetty on Toxic

ಟಾಕ್ಸಿಕ್​ ಸಿನಿಮಾ ಪರ ನಿಂತ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ
ಟಾಕ್ಸಿಕ್​ ಸಿನಿಮಾ ಪರ ನಿಂತ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ನಿಮ್ಮ ಧೈರ್ಯಶಾಲಿ ಪ್ರಯತ್ನಕ್ಕೆ ನನ್ನ ಬೆಂಬಲವಿದೆ
  • ಟಾಕ್ಸಿಕ್​ ಸಿನಿಮಾ ಪರ ನಿಂತ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ
  • ಕನ್ನಡ ಸಿನಿಮಾವನ್ನು ಜಾಗತೀಕರಣ ಮಾಡುವ ನಿಮ್ಮ ಪ್ರಯತ್ನಕ್ಕೆ ಮೆಚ್ಚುಗೆ
ಬೆಂಗಳೂರು: ರಾಕಿಂಗ್ ​ಸ್ಟಾರ್​ ಯಶ್​ ಅಭಿನಯದ ಹಾಗೂ ಗೀತು ಮೋಹನ್​ ದಾಸ್​ ನಿರ್ದೇಶನದ ಸಿನಿಮಾ ಟಾಕ್ಸಿಕ್​: ಎ ಫೇರಿ ಟೇಲ್​ ಫಾರ್​ ಗ್ರೋನಪ್ಸ್​ ತೆರೆಕಂಡಿದ್ದು, ಮೊದಲ ದಿನವೇ 140 ಕೋಟಿ ಗಳಿಸಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಆದರೆ, ಈ ಸಿನಿಮಾ ಬಿಡುಗಡೆಯಾದ ದಿನ ಕೆಲ ಋಣಾತ್ಮಕ ವಿಮರ್ಶೆಗಳು ಕೇಳಿ ಬಂದಿದ್ದು, ಸಿನಿಮಾವನ್ನು ಬೇಕಂತಲೇ ಸೋಲಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಯಶ್​ ಅಭಿಮಾನಿಗಳು ಆರೋಪಿಸಿದ್ದರು.

ಟಾಕ್ಸಿಕ್​ಗೆ ನೆಗೆಟಿವ್​ ರಿವ್ಯೂ ಬರುತ್ತಿರುವ ಹಿನ್ನಲೆ ಕನ್ನಡ ಚಿತ್ರರಂಗದ ಕೆಲ ನಾಯಕ ನಟರು ಯಶ್​ ಬೆಂಬಲಕ್ಕೆ ಬಂದಿದ್ದು, ಈದೀಗ ಕಿಚ್ಚಾ ಸುದೀಪ್​ ಬಳಿಕ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ (Rishab Shetty on Toxic) ಯಶ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ ಜಾಗತೀಕರಣ ಮಾಡಿದವರು ನೀವು

ಟಾಕ್ಸಿಕ್​ ಹಾಗೂ ಯಶ್​ ಅಭಿನಯವನ್ನು ಮೆಚ್ಚಿರುವ ರಿಷಬ್​ ಶೆಟ್ಟಿ, ಒಬ್ಬ ಕಲಾವಿದನಾಗಿ, ನೀವು ಒಂದು ಪಾತ್ರವನ್ನು ನಿರ್ವಹಿಸುವಾಗ, ಅದನ್ನು ನಿಮ್ಮ ಹೃದಯಾಳದಿಂದ ಜೀವಂತಗೊಳಿಸಲು ಪ್ರಯತ್ನಿಸುತ್ತೀರಿ ಎಂದು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ.
ಈ ಸಿನಿಮಾದ ಕಥಾವಸ್ತು ಮತ್ತು ಪಾತ್ರಗಳ ಚಲನೆ ಸಾಮಾನ್ಯ ಟ್ರ್ಯಾಕ್​ನಲ್ಲಿರದೆ ಇರಬಹುದು. ಆದರೆ ಟ್ರ್ಯಾಕ್​ ತಪ್ಪಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕಥೆಯನ್ನು ಹೇಳಲು ತೆಗೆದುಕೊಂಡಿರುವ ಪ್ರಯತ್ನ ಮತ್ತು ಪಯಣವನ್ನು ಮೆಚ್ಚುತ್ತೇನೆ ಎಂದಿದ್ದಾರೆ.

ಈ ಸಿನಿಮಾದಲ್ಲಿರುವ ನಿಮ್ಮ ಪಾತ್ರ ಅದ್ಭುತವಾಗಿರಬೇಕೆಂದು ನೀವು ನಿಮ್ಮನ್ನು ಅರ್ಪಿಸಿಕೊಂಡಿರುವ ರೀತಿಗೆ ಹ್ಯಾಟ್ಸಾಪ್​ ಎಂದಿರುವ ಡಿವೈನ್​ ಸ್ಟಾರ್​, ನಿಮ್ಮ ಸಮರ್ಪಣಾ ಭಾವ ಪ್ರತಿ ದೃಶ್ಯದಲ್ಲಿ ಕಾಣಿಸಿಕೊಂಡಿದೆ ಎಂದಿದ್ದಾರೆ.

ನಿಮ್ಮ ಈ ಧೈರ್ಯಶಾಲಿ ಪ್ರಯೋಗಕ್ಕೆ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನೀವು ಹೊಂದಿರುವ ಪ್ರೀತಿಗಾಗಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ರಿಷಬ್​ ಶೆಟ್ಟಿ ಬರೆದುಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net