ಸದ್ಯ ಬಿಗ್ಬಾಸ್ ಮನೆಯಲ್ಲಿ ಅಬ್ಬರಿಸುತ್ತಿರುವ ಗಿಲ್ಲಿನಟ ಮತ್ತು ಯೂಟ್ಯೂಬ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಗೌರವ್ ಶೆಟ್ಟಿ "ಸೂಪರ್ಹಿಟ್' ಚಿತ್ರದ ಮೂಲಕ ನಾಯಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಶ್ವೇತಾ ನಾಯಕಿಯಾಗಿದ್ದು ಸಾಧು ಕೋಕಿಲ, ಪ್ರಮೋದ್ ಶೆಟ್ಟಿ, ಡ್ರ್ಯಾಗನ್ ಮಂಜು, ಟೆನ್ನಿಸ್ ಕೃಷ್ಣ, ಗಿರಿ, ಕರಿಸುಬ್ಬು ಪ್ರಮುಖ ತಾರಾಗಣದಲ್ಲಿದ್ದಾರೆ. ಜತೆಗೆ ನಿರ್ದೇಶಕ ವಿಜಯಾನಂದ್ ಮತ್ತು ಅವರ ಅಣ್ಣ ಡಾ. ವಿ. ನಾಗೇಂದ್ರ ಪ್ರಸಾದ್ ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಚಿತ್ರದ ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿಯನ್ನೂ ನಾಗೇಂದ್ರ ಪ್ರಸಾದ್ ನಿರ್ವಹಿಸಿದ್ದಾರೆ.