_1786881134532.webp?w=480&auto=format%2Ccompress&fit=max)
_1786881134532.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಗಾಯಗೊಂಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ‘ಮೈಸಾ’ ಚಿತ್ರದ ಹಾಡಿನ ಶೂಟಿಂಗ್ ವೇಳೆ ನಟಿಯ ಸೊಂಟದ ಭಾಗಕ್ಕೆ ಬಲವಾಗಿ ಪೆಟ್ಟುಬಿದ್ದಿತ್ತು. ಅದರಿಂದಾಗಿ ಸುಮಾರು ಆರು ವಾರಗಳ ಕಾಲ ಅವರಿಗೆ ವಿಶ್ರಾಂತಿ ಸೂಚಿಸಲಾಗಿತ್ತು. ಚಿಕಿತ್ಸೆ ಪಡೆದಿರುವ ರಶ್ಮಿಕಾ ಮಂದಣ್ಣ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅದರ ನಡುವೆಯೇ, ನಟಿಯು ‘ರಣಬಾಲಿ’ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಈಗಾಗಲೇ ಘೋಷಿಸಿರುವಂತೆ ‘ರಣಬಾಲಿ’ ಸೆ.11ಕ್ಕೆ ರಿಲೀಸ್ ಆಗಲಿದ್ದು, ಹಾಗಾಗಿ ಶೂಟಿಂಗ್ ಮುಗಿಸಿಕೊಡುವ ಒತ್ತಡ ಇರುವ ಕಾರಣ ಪತಿ ವಿಜಯ್ ದೇವರಕೊಂಡ ಜತೆ ರಶ್ಮಿಕಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಪ್ರತಿಕ್ರಿಯಿಸಿದ್ದು, ‘ಮನೆಯಲ್ಲಿ ಸುಮ್ಮನೇ ಕೂರುವುದರಿಂದ ಭಯವಾಗುತ್ತದೆ. ಆದರೆ, ಸದ್ಯದ ಪರಿಸ್ಥಿತಿಗೆ ತಲೆಬಾಗಲೇಬೇಕು’ ಎಂದಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ‘ಅಮ್ಮನ ಜತೆ ಮಾತನಾಡುತ್ತಾ, ಮುದ್ದಿನ ನಾಯಿಮರಿ ಜತೆ ಕಾಲ ಕಳೆಯುತ್ತಾ, ಅಡುಗೆ ಮಾಡುತ್ತಾ.. ನನ್ನ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ, ವಿಶ್ರಾಂತಿಯಿಲ್ಲದೇ ದಿನವಿಡೀ ಕೆಲಸದಲ್ಲಿ ಬಿಜಿಯಾಗಿರುತ್ತಿದ್ದ ನನಗೆ ಈ ರೀತಿ ಸಮಯ ದೂಡುವುದು ಕಷ್ಟ. ಆದರೆ, ಈಗ ಇದೇ ಅನಿವಾರ್ಯವಾಗಿದೆ. ಈ ಹಿಂದಿನ ಓಡುವ ಬದುಕನ್ನು ನೆನಪಿಸಿಕೊಂಡರೆ, ಈಗಿನ ಸ್ಲೋ ಜೀವನ ನೋಡಿದರೆ ನಿಜಕ್ಕೂ ಭಯ ಅನಿಸುತ್ತದೆ. ಬಹುಶಃ ಜೀವನ ಎಂದರೆ ಇದೇ ಇರಬೇಕು’ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹಾಗೇ ಅಭಿಮಾನಿಗಳ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದ ಹೇಳಿದ್ದಾರೆ. ಆ ಮೂಲಕ ರಶ್ಮಿಕಾ ಪೆಟ್ಟಿನ ಕಾರಣ ಕೊಟ್ಟು, ‘ಮೈಸಾ’ ತಂಡ ಅರ್ಧಕ್ಕೇ ಬಿಟ್ಟು ‘ರಣಬಾಲಿ’ಯಲ್ಲಿ ಬಿಜಿಯಾಗಿದ್ದಾರೆ ಎಂಬ ಗಾಳಿಸುದ್ದಿಗೂ ಬ್ರೇಕ್ ಹಾಕಿದ್ದಾರೆ. -ಏಜೆನ್ಸೀಸ್
‘ರಣಬಾಲಿ’ ಮುಂದಕ್ಕೆ?: