Heroines Sports - ಕ್ರಿಕೆಟಿಗರು ವರ್ಷಪೂರ್ತಿ ಐಪಿಎಲ್, ಆ ಕಪ್, ಈ ಕಪ್ ಅಂತ ಕ್ರಿಕೆಟ್ ಆಡುವಂತೆಯೇ, ಸಿನಿಮಾ ತಾರೆಯರೂ ವರ್ಷಪೂರ್ತಿ ಒಂದಲ್ಲಾ ಒಂದು ಕ್ರೀಡಯಲ್ಲಿ ಬಿಜಿಯಾಗುತ್ತಿದ್ದಾರೆ. ಸಿಸಿಎಲ್, ಅಪ್ಪು ಕಪ್, ಡಾ. ರಾಜ್ ಕಪ್, ಫ್ಯಾನ್ಸ್ ಕ್ರಿಕೆಟ್ ಲೀಗ್, ಸ್ನೇಹಲೋಕ ಕಪ್, ಬ್ಯಾಡ್ಮಿಂಟನ್, ಬೌಲಿಂಗ್, ಕಬಡ್ಡಿ... ಹೀಗೆ ತಿಂಗಳಿಗೊಂದು ಕ್ರೀಡಾಕೂಟ ಅಂತ ಆಡುತ್ತಿರುತ್ತಾರೆ. ಇದೀಗ ನಟಿಮಣಿಯರಿಗಾಗಿಯೇ ಕ್ರೀಡೋತ್ಸವ ಆಯೋಜಿಸಲು ನಟಿಯರಾದ ದಿವ್ಯಾ ಉರುಡುಗ ಮತ್ತು ನಿಕಿತಾ ಸ್ವಾಮಿ ಸಿದ್ಧತೆ ನಡೆಸಿದ್ದಾರೆ.