ಪ್ರಕರಣವನ್ನುನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಎಚ್. ಶಾಂತಿಭೂಷಣ್ ಅವರ ನ್ಯಾಯಪೀಠವು ವಿಚಾರಣೆ ನಡೆಸಿ, ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ದಾಖಲಿಸಿಕೊಂಡ ಬಳಿಕ ಈ ಆದೇಶವನ್ನು ಹೊರಡಿಸಿದೆ. ಕೋರ್ಟ್ ಆದೇಶದ ಪ್ರಕಾರ, ನಟ ದುನಿಯಾ ವಿಜಯ್, ತಮ್ಮ ಪತ್ನಿಯಾಗಿದ್ದ ನಾಗರತ್ನ ಅವರಿಗೆ 2 ಕೋಟಿ ಜೀವನಾಂಶ ನೀಡುವ ಮೂಲಕ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.