ಅಶ್ಲೀಲ ಮೆಸೇಜ್​ ಕಳುಹಿಸಿದ ಸ್ಟ್ರೀಟ್ ಫೋಟೋಗ್ರಾಫರ್​: ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಟಿ ತನಿಷಾ ಕುಪ್ಪಂಡ! Tanisha Kuppanda

ಅಶ್ಲೀಲ ಮೆಸೇಜ್​ ಕಳುಹಿಸಿದ ಸ್ಟ್ರೀಟ್ ಫೋಟೋಗ್ರಾಫರ್​: ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಟಿ ತನಿಷಾ ಕುಪ್ಪಂಡ! Tanisha Kuppanda
ಅಶ್ಲೀಲ ಮೆಸೇಜ್​ ಕಳುಹಿಸಿದ ಸ್ಟ್ರೀಟ್ ಫೋಟೋಗ್ರಾಫರ್​: ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಟಿ ತನಿಷಾ ಕುಪ್ಪಂಡ! Tanisha Kuppanda
Published on

ಪ್ರಮುಖ ಮುಖ್ಯಾಂಶಗಳು

  • ಅಸಭ್ಯ ಸಂದೇಶ ಕಳುಹಿಸಿದ ಸ್ಟ್ರೀಟ್​ ಫೋಟೋಗ್ರಾಫರ್ ಒಬ್ಬನಿಗೆ ನಟಿ ತನಿಷಾ ಕುಪ್ಪಂಡ ತರಾಟೆ
  • ಸಾಮಾಜಿಕ ಜಾಲತಾಣದಲ್ಲಿ ಅಸಲಿ ಮುಖವಾಡ ಕಳಚಿಹಾಕುವ ಮೂಲಕ ನೆಟ್ಟಿಗರ ಗಮನ ಸೆಳೆದ ತನಿಷಾ
  • ನಿನ್ನ ರೇಟ್ ಎಷ್ಟು? ಡೇಟಿಂಗ್‌ಗೆ ಬರ್ತೀಯಾ? ಎಂದು ಕೇಳುವ ಮೂಲಕ ವಿಕೃತಿ ಮೆರೆದ ಸ್ಟ್ರೀಟ್​ ಫೋಟೋಗ್ರಾಫರ್​
  • ಅಸಭ್ಯ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಹಂಚಿಕೊಂಡ ತನಿಷಾ
Tanisha Kuppanda : ರಿಯಾಲಿಟಿ ಶೋ ಬಿಗ್​ ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಸಭ್ಯ ಸಂದೇಶ ಕಳುಹಿಸಿದ ಸ್ಟ್ರೀಟ್​ ಫೋಟೋಗ್ರಾಫರ್ ಒಬ್ಬನಿಗೆ ನಟಿ ಸಾರ್ವಜನಿಕವಾಗಿ ತಕ್ಕ ಪಾಠ ಕಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆತನ ಅಸಲಿ ಮುಖವಾಡವನ್ನು ಕಳಚಿಹಾಕುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಅನಿಲ್ ಕುಮಾರ್ ಎಂಬ ಹೆಸರಿನ ಫೋಟೋಗ್ರಾಫರ್, ನಟಿ ತನಿಷಾ ಅವರಿಗೆ ಅತ್ಯಂತ ಕೀಳು ಮಟ್ಟದ ಭಾಷ ಬಳಸಿ ಸಂದೇಶ ಕಳುಹಿಸಿದ್ದನು. "ನಿನ್ನ ರೇಟ್ ಎಷ್ಟು? ಡೇಟಿಂಗ್‌ಗೆ ಬರ್ತೀಯಾ?" ಎಂದು ಕೇಳುವ ಮೂಲಕ ವಿಕೃತ ಮನಸ್ಸು ಪ್ರದರ್ಶಿಸಿದ್ದನು.
ಫೋಟೋಗ್ರಾಫರ್​ನ ವರ್ತನೆಯಿಂದ ತೀವ್ರ ಆಕ್ರೋಶಗೊಂಡ ನಟಿ, ಆತನ ಪ್ರೊಫೈಲ್ ಹಾಗೂ ಆತ ಕಳುಹಿಸಿದ್ದ ಅಸಭ್ಯ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಹಂಚಿಕೊಂಡು, "ನೋಡಿ ಇವನ ಯೋಗ್ಯತೆಯನ್ನು" ಎಂದು ಬರೆಯುವ ಮೂಲಕ ಆತನ ವಿಕೃತಿಯನ್ನು ಸಾರ್ವಜನಿಕರ ಮುಂದೆ ತೆರೆದಿಟ್ಟಿದ್ದಾರೆ.

ನೆಟ್ಟಿಗರ ಆಕ್ರೋಶ

ನಟಿಯ ಈ ದಿಟ್ಟ ಹೆಜ್ಜೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಇವನ ಮುಖ ಬಯಲು ಮಾಡಿದರೆ ಸಾಲದು, ಇಂತಹ ನೀಚ ಪ್ರವೃತ್ತಿಯ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿ ಕಡ್ಡಾಯವಾಗಿ ಜೈಲಿಗಟ್ಟಬೇಕು ಎಂದು ನೆಟ್ಟಿಗರು ಮತ್ತು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ, ತನಿಷಾ ಕುಪ್ಪಂಡ ಅವರು ಪ್ರಮುಖವಾಗಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಜಗತ್ತಿನಲ್ಲಿ ಸಕ್ರಿಯವಾಗಿರುವ ಜನಪ್ರಿಯ ನಟಿ ಹಾಗೂ ಮಾಡೆಲ್. 'ಮಂಗಳಗೌರಿ ಮದುವೆ' ಸೇರಿದಂತೆ ಹಲವು ಪ್ರಸಿದ್ಧ ಕನ್ನಡ ಧಾರಾವಾಹಿಗಳಲ್ಲಿ ನೆಗೆಟಿವ್ ಶೆಡ್ (ಖಳನಾಯಕಿ) ಪಾತ್ರಗಳ ಮೂಲಕ ಮನೆಮಾತಾದ ಇವರು, 'ಶುದ್ಧಿ', 'ಪೆಂಟಗನ್' ನಂತಹ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ತನಿಷಾ, ತಮ್ಮ ನೇರ ನಡೆ-ನುಡಿ, ದಿಟ್ಟತನ ಮತ್ತು ಧೈರ್ಯಶಾಲಿ ಸ್ವಭಾವದಿಂದ "ಬೆಂಕಿ ತನಿಷಾ" ಎಂದೇ ಖ್ಯಾತಿ ಗಳಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net