‘ಮಧುರೆಗೆ ಹೋದನು ಮಾಧವ’ : ‘ಭಾವಾಂತರ’ಕ್ಕೆ ಭಾವ ತುಂಬಿದ ಡಾ.ಎಚ್‌ಎಸ್ವಿ ಭಾವಗೀತೆ

‘ಮೊದ ಮೊದಲಿದು’, ‘ಆ ನೀಲಿ ಭಾನು’ ಹಾಡುಗಳು ವೈರಲ್ ಆಗಿವೆ. ಅದರ ಬೆನ್ನಲ್ಲೇ ಚಿತ್ರತಂಡ ‘ಮಧುರೆಗೆ ಹೋದನು ಮಾಧವ’ ಶೀರ್ಷಿಕೆಯ ಮೂರನೇ ಹಾಡು ರಿಲೀಸ್ ಮಾಡಿದೆ.
still from bhavanthara movie
ಭಾವಾಂತರ ಚಿತ್ರದ ದೃಶ್ಯ
Published on: 

ಬೆಂಗಳೂರು: ಕಾರ್ತಿಕ್ ಶರ್ಮಾ ಮೊದಲ ಬಾರಿಗೆ ನಟಿಸಿ, ನಿರ್ದೇಶಿಸಿರುವ ‘ಭಾವಾಂತರ’ ಚಿತ್ರವು ಹಾಡಿನ ಮೂಲಕವೇ ಗಮನಸೆಳೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಮೊದ ಮೊದಲಿದು’, ‘ಆ ನೀಲಿ ಭಾನು’ ಹಾಡುಗಳು ವೈರಲ್ ಆಗಿವೆ. ಅದರ ಬೆನ್ನಲ್ಲೇ ಚಿತ್ರತಂಡ ‘ಮಧುರೆಗೆ ಹೋದನು ಮಾಧವ’ ಶೀರ್ಷಿಕೆಯ ಮೂರನೇ ಹಾಡು ರಿಲೀಸ್ ಮಾಡಿದೆ. ಖ್ಯಾತ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ರಚಿಸಿರುವ ಜನಪ್ರಿಯ ಈ ಭಾವಗೀತೆಗೆ ಸ್ವತಃ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದು, ಐಶ್ವರ್ಯಾ ರಂಗರಾಜನ್ ಧ್ವನಿಯಾಗಿದ್ದಾರೆ. 3.12 ನಿಮಿಷದ ಇಡೀ ಹಾಡನ್ನು ಸಿಂಗಲ್ ಶಾಟ್‌ನಲ್ಲಿ ಚಿತ್ರಿಸುವ ಮೂಲಕ ಚಿತ್ರತಂಡ ವಿಭಿನ್ನ ಪ್ರಯೋಗ ಮಾಡಿದೆ. ನಟಿ ತಾನ್ವಿ ರಾವ್ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಮನೋಜ್ಞ ನೃತ್ಯದ ಮೂಲಕ ಗಮನಸೆಳೆದಿದ್ದಾರೆ. ನಿಶಾ ನೃತ್ಯ ಸಂಯೋಜಿಸಿದ್ದು, ಸಾಗರ್ ಅಥಡ್ಕರ್ ಛಾಯಾಗ್ರಹಣ ಹಾಡಿನ ಅಂದವನ್ನು ಹೆಚ್ಚಿಸಿದೆ. ಇನ್ನು ಹೊಂಬಾಳೆ ಸಂಸ್ಥೆಯು ಚಿತ್ರದ ಹಾಡಿನ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಪ್ರಚಾರದಲ್ಲಿ ಬಿಜಿಯಾಗಿರುವ ಚಿತ್ರತಂಡವು ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net