

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕನ್ನಡ-ತುಳುವಿನಲ್ಲಿ ರಿಲೀಸ್ ಆಗಿದ್ದ ‘ಪಿಚ್ಚರ್’ ಚಿತ್ರದ ಮೂಲಕ ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ಇದೀಗ ಅವರು ಮತ್ತೊಂದು ಕನ್ನಡ-ತುಳು ಭಾಷೆಯಲ್ಲಿ ನಿರ್ಮಾಣವಾಗಿರುವ ‘ಟಾಸ್’ ಚಿತ್ರಕ್ಕೆ ಸಾಥ್ ನೀಡಲು ಮುಂದಾಗಿದ್ದು, ತಮ್ಮ ಗೋಲ್ಡನ್ ಮೂವೀಸ್ ಸಂಸ್ಥೆಯ ಮೂಲಕ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಹಿರಿಯ ಕಲಾವಿದ ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಸಿನಿಮಾಕ್ಕೆ ನಟ ಅರ್ಜುನ್ ದೇವ್ ಆ್ಯಕ್ಷನ್-ಕಟ್ ಹೇಳುವ ಜತೆಗೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇಲ್ಲಿ ಅರ್ಜುನ್‌ಗೆ ಸುತೇಜಾ ಶೆಟ್ಟಿ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡವು ರಿಲೀಸ್‌ಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ‘ಹೆಲೋ ಹೆಲೋ ನೀಲಾಂಬರಿ’ ಹಾಡು ಬಿಡುಗಡೆ ಮಾಡಲಾಯಿತು. ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ಅರ್ಜುನ್ ದೇವ್ ಮತ್ತು ಸುತೇಜಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೋಯೆಲ್ ಶರ್ಮನ್ ಡಿ’ಸೋಜಾ ಛಾಯಾಗ್ರಹಣ, ಯಾಶ್ವಿನ್ ಕೆ. ಶೆಟ್ಟಿಗೇರ್ ಸಂಕಲನ ಚಿತ್ರಕ್ಕಿದೆ. ‘ಸು ್ರಮ್ ಸೋ’ ನಟ ಶನೀಲ್ ಗೌತಮ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ‘ಟಾಸ್’ ಇದೇ ಸೆಪ್ಟೆಂಬರ್ 18ಕ್ಕೆ ತೆರೆ ಮೇಲೆ ಬರಲಿದೆ.