ತಮಿಳುನಾಡಿನಲ್ಲಿ ಕನ್ನಡದ 'ರುಕ್ಕು' ಕ್ರೇಜ್​! ಟಾಕ್ಸಿಕ್​ ಈವೆಂಟ್​ನಲ್ಲಿ ಮಾತಿಗೂ ಮುನ್ನವೇ ಸದ್ದು ಮಾಡಿತು ಮೆಲಿಸ್ಸಾ ಹವಾ | Rukmini Vasanth

ತಮಿಳುನಾಡಿನಲ್ಲಿ ಕನ್ನಡದ 'ರುಕ್ಕು' ಕ್ರೇಜ್​! ಟಾಕ್ಸಿಕ್​ ಈವೆಂಟ್​ನಲ್ಲಿ ಮಾತಿಗೂ ಮುನ್ನವೇ ಸದ್ದು ಮಾಡಿತು ಮೆಲಿಸ್ಸಾ ಹವಾ | Rukmini Vasanth
ತಮಿಳುನಾಡಿನಲ್ಲಿ ಕನ್ನಡದ 'ರುಕ್ಕು' ಕ್ರೇಜ್​! ಟಾಕ್ಸಿಕ್​ ಈವೆಂಟ್​ನಲ್ಲಿ ಮಾತಿಗೂ ಮುನ್ನವೇ ಸದ್ದು ಮಾಡಿತು ಮೆಲಿಸ್ಸಾ ಹವಾ | Rukmini Vasanth
Published on

ಪ್ರಮುಖ ಮುಖ್ಯಾಂಶಗಳು

  • ಇದೇ ಆ.26ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಟಾಕ್ಸಿಕ್ ರಿಲೀಸ್​
  • ಚೆನ್ನೈನಲ್ಲಿ ನಡೆದ ಪ್ರೀ-ರಿಲೀಸ್​ ಈವೆಂಟ್​ನಲ್ಲಿ ಕನ್ನಡದ ಬ್ಯೂಟಿಗೆ ಸಖತ್ ಕ್ರೇಜ್​
  • ರುಕ್ಮಿಣಿ ವಸಂತ್​ ವೇದಿಕೆ ಹತ್ತುತ್ತಿದ್ದಂತೆ ಜೋರಾದ ಫ್ಯಾನ್ಸ್​ ಕ್ರೇಜ್​
ಚೆನ್ನೈ: ಇದೇ ಆ.26ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ರಿಲೀಸ್​ ಆಗಲು ಕ್ಷಣಗಣನೆ ಶುರು ಮಾಡಿರುವ ರಾಕಿಂಗ್ ಸ್ಟಾರ್ ಯಶ್​ ಅಭಿನಯದ ಹಾಗೂ ಗೀತು ಮೋಹನ್​ದಾಸ್​ ನಿರ್ದೇಶನದ 'ಟಾಕ್ಸಿಕ್​: ದಿ ಫೇರಿಟೇಲ್​ ಫಾರ್​ ಗ್ರೋನಪ್ಸ್'​ ಚಿತ್ರದ ಪ್ರೀ-ರಿಲೀಸ್​ ಈವೆಂಟ್​ ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ನಡೆಯಿತು. ಈ ವೇದಿಕೆಯಲ್ಲಿ, ಟಾಕ್ಸಿಕ್​ನ ಐವರು ನಟಿಯರಿಗಿಂತ ಕನ್ನಡದ ಬ್ಯೂಟಿ ರುಕ್ಮಿಣಿ ವಸಂತ್​ಗೆ (Rukmini Vasanth) ಸಿಕ್ಕ ಮನ್ನಣೆ, ಫ್ಯಾನ್ಸ್​ ಕ್ರೇಜ್​ ಸದ್ಯ ಹಲವರ ಹುಬ್ಬೇರಿಸಿದೆ.
​'ಕಾಂತಾರ' ಚಾಪ್ಟರ್​ 1 ಚಿತ್ರದಲ್ಲಿ ಕನಕಾವತಿ ಪಾತ್ರದಲ್ಲಿ ಮಿಂಚಿದ ಸೌತ್ ಬ್ಯೂಟಿ ರುಕ್ಮಿಣಿ ವಸಂತ್​ಗೆ ಸದ್ಯ ಅಭಿಮಾನಿಗಳ, ಅವಕಾಶಗಳ ಅಲೆ ಜೋರಾಗಿದೆ. ಯಶ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ವರ್ಲ್ಡ್​ ಟಾಕ್ಸಿಕ್​ನಲ್ಲಿ ಮೆಲಿಸ್ಸಾ ಆಗಿ ಕಾಣಿಸಿಕೊಂಡಿರುವ ರುಕ್ಕು, ಇದೀಗ ತಮ್ಮ ಅಭಿಮಾನಿ ಬಳಗವನ್ನು ಸ್ಯಾಂಡಲ್​ವುಡ್​ಗೆ ಮಾತ್ರವಲ್ಲ, ಟಾಲಿವುಡ್​, ಬಾಲಿವುಡ್​, ಮಾಲಿವುಡ್​ ಮತ್ತು ಕಾಲಿವುಡ್​ ಪೂರ ವಿಸ್ತರಿಸಿಕೊಂಡಿದ್ದಾರೆ ಎನ್ನುವುದಕ್ಕೆ ತಮಿಳುನಾಡಿನಲ್ಲಿ ಕೇಳಿಬಂದ ಅಭಿಮಾನಿಗಳ ಕ್ರೇಜ್​​ ಸಾಕ್ಷಿ.
ಚೆನ್ನೈನಲ್ಲಿ ಹಮ್ಮಿಕೊಂಡಿದ್ದ ಈವೆಂಟ್​ನಲ್ಲಿ ಭಾಗಿಯಾಗಿದ್ದ ರುಕ್ಮಿಣಿ ವಸಂತ್​, ವೇದಿಕೆ ಹತ್ತುತ್ತಿದ್ದಂತೆ ತಮಿಳು ಜನತೆ ಅವರಿಗಾಗಿ ಚೀರಾಡಿದ್ದಾರೆ. ಕೆಲ ನಿಮಿಷ ಸೌತ್ ಬ್ಯೂಟಿಗೆ ಮಾತಾಡಲು ಬಿಡದ ತಮಿಳು ಅಭಿಮಾನಿ ಬಳಗಕ್ಕೆ ಖುಷಿಯಿಂದಲೇ ಧನ್ಯವಾದ ಅರ್ಪಿಸಿದ ರುಕ್ಕು, ಅಲ್ಲಿನ ಭಾಷೆಯಲ್ಲೇ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದರು. ತಮಿಳು ಮಣ್ಣಿನಲ್ಲಿ ಕನ್ನಡದ ನಟಿಗೆ ಸಿಕ್ಕ ಜನಪ್ರಿಯತೆಗೆ ಕನ್ನಡಿಗರು ಖುಷಿ ವ್ಯಕ್ತಪಡಿಸಿದ್ದು, ವೇದಿಕೆಯಲ್ಲಿ ರುಕ್ಮಿಣಿ ಎದುರಿಗೆ ಕುಳಿತಿದ್ದ ಯಶ್​ ಮತ್ತು ಗೀತು ಮೋಹನ್​ದಾಸ್​ ಕೂಡ ಫ್ಯಾನ್ಸ್​ ಕ್ರೇಜ್​ ನೋಡಿ ಸಂತಸ ವ್ಯಕ್ತಪಡಿಸಿದರು.
ಯಶ್ ಅವರ ಗ್ಯಾಂಗ್‌ಸ್ಟರ್ ಟಾಕ್ಸಿಕ್​ ಚಿತ್ರದಲ್ಲಿ 'ಮೆಲಿಸ್ಸಾ' ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ, ಸಿನಿಮಾ ಪೂರ ಸಖತ್​ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಈಗಾಗಲೇ ರಿಲೀಸ್​ ಆಗಿರುವ ಟೀಸರ್​ ಹಾಗೂ ಟ್ರೇಲರ್ ಹೇಳಿದೆ. ಪ್ರಮುಖ ಪಾತ್ರವನ್ನೇ ಅವರು ನಿಭಾಯಿಸಿದ್ದಾರೆ ಎಂಬುದು ಟ್ರೇಲರ್​ನಲ್ಲಿ ಇನ್ನಷ್ಟು ಸ್ಪಷ್ಟವಾಗಿದೆ. ವರದಿಗಳ ಪ್ರಕಾರ, 600 ಕೋಟಿ ಬಿಗ್ ಬಜೆಟ್​ ಸಿನಿಮಾದಲ್ಲಿ ರುಕ್ಮಿಣಿ ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಡ್ಯಾಡಿ ಕಮ್ಸ್​ ಹೋಮ್​

ಆ.26ರಂದು ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ರಿಲೀಸ್​ಗೆ ಸಜ್ಜಾಗಿರುವ 'ಟಾಕ್ಸಿಕ್'​ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಯಶ್​, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಥೋವಿನೋ ಥಾಮಸ್​, ಅಕ್ಷಯ್​ ಓಬ್​ರಾಯ್​ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net