ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಚಿತಾ ರಾಮ್ RACHITHA RAM

ಕಳೆದ ಮೇ ತಿಂಗಳಲ್ಲಿ ಚಿತ್ರರಂಗಕ್ಕೆ ಬಂದು 13 ವರ್ಷಗಳ ಸಂಭ್ರಮ ಆಚರಿಸಿಕೊಂಡಿದ್ದ ರಚಿತಾ ರಾಮ್ ಇದೀಗ ಹುಟ್ಟುಹಬ್ಬವನ್ನೂ ಸಡಗರದಿಂದ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಶನಿವಾರ (ಅ. 3) ರಚಿತಾ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
rachitha ram birthday celebratation
ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಚಿತಾ ರಾಮ್​
Published on: 

ಬೆಂಗಳೂರು : ದರ್ಶನ್ ಅಭಿನಯದ ‘ಬುಲ್ ಬುಲ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ನಟಿ ರಚಿತಾ ರಾಮ್ ಸದ್ಯ ಕನ್ನಡ ಸೇರಿ ಪರಭಾಷೆಯಲ್ಲೂ ಗಮನ ಸೆಳೆಯುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಚಿತ್ರರಂಗಕ್ಕೆ ಬಂದು 13 ವರ್ಷಗಳ ಸಂಭ್ರಮ ಆಚರಿಸಿಕೊಂಡಿದ್ದ ಅವರು, ಇದೀಗ ಹುಟ್ಟುಹಬ್ಬವನ್ನೂ ಸಡಗರದಿಂದ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಶನಿವಾರ (ಅ. 3) ರಚಿತಾ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ನಟಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ನಿವಾಸ ಮುಂಭಾಗದಲ್ಲಿ ನಟಿಯ 16 ದೊಡ್ಡ ಕಟೌಟ್‌ಗಳನ್ನು ನಿರ್ಮಿಸಲಾಗಿತ್ತು. ಕೇಕ್ ಕತ್ತರಿಸಿದ ಬಳಿಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅವರು ‘ಈ ಕ್ಷಣದ ಬಗ್ಗೆ ಹೇಳಲು ನನಗೆ ಪದಗಳೇ ಸಾಲುತ್ತಿಲ್ಲ. ಈ ವಿಜೃಂಭಣೆಯ ಆಚರಣೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಇದೆಲ್ಲಾ ಸಾಧ್ಯವಾಗಿದ್ದು ಅಭಿಮಾನಿಗಳಿಂದ. ನಾನು ಎಂದಿಗೂ ಅಭಿಮಾನಿಗಳಿಗೆ ಋಣಿ. ಇಷ್ಟು ವರ್ಷಗಳಲ್ಲಿ ಈ ಬಾರಿಯ ಹುಟ್ಟುಹಬ್ಬ ವಿಶೇಷ. ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಒಳ್ಳೆಯದನ್ನು ಮಾಡೋಣ ಹಾಗೂ ಒಳ್ಳೆಯದನ್ನೇ ಬಯಸೋಣ’ ಎಂದು ಖುಷಿ ಹಂಚಿಕೊಂಡರು. ಸದ್ಯ ಕನ್ನಡದ ‘ಕ್ರಿಮಿನಲ್’, ‘ಲವ್ ಮಿ ಆರ್ ಹೇಟ್ ಮಿ’, ತೆಲುಗಿನ ‘ಕಾಕಾ’ ಚಿತ್ರಗಳಲ್ಲಿ ರಚಿತಾ ನಟಿಸುತ್ತಿದ್ದಾರೆ.

ದರ್ಶನ್ ಆಶೀರ್ವಾದ ಇದ್ದೇ ಇದೆ

ಇತ್ತೀಚೆಗೆ ನಟಿ ರಚಿತಾ ರಾಮ್, ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಹುಟ್ಟುಹಬ್ಬದ ಸಂದರ್ಭದಲ್ಲಿ ಆ ಬಗ್ಗೆ ಮಾತನಾಡಿ, ‘ದರ್ಶನ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅವರನ್ನು ಭೇಟಿ ಮಾಡಲು ವಾರದಲ್ಲಿ ಎರಡೇ ವಿಸಿಟಿಂಗ್‌ಗೆ ಅವಕಾಶ ಇರುವುದು. ಈಗಾಗಲೇ ಒಬ್ಬರು ಭೇಟಿಯಾಗಿದ್ದು, ಇನ್ನು ಶನಿವಾರ ಅವರ ಕುಟುಂಬದ ಸದಸ್ಯರು ಭೇಟಿಗೆ ಅವಕಾಶ ಕೇಳಿದ್ದಾರೆ. ಹಾಗಾಗಿ, ನನಗೆ ಅವರ ದರ್ಶನ ಸಿಗಲಿಲ್ಲ. ಮುಂದಿನ ಬಾರಿ ಅವರನ್ನು ಭೇಟಿ ಮಾಡಿ, ಅಶೀರ್ವಾದ ಪಡೆಯುವೆ’ ಎಂದು ರಚಿತಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net