ಹಿಮಶ್ರೀ ದಸರಾ ಸೊಬಗು: ದುರ್ಗಾಷ್ಟಮಿ ದಿನ ಉಪವಾಸ ವ್ರತ ಮಾಡುವ ‘ಬೃಂದಾವಿಹಾರಿ’ ನಟಿ HIMASHREE

ಕನ್ನಡದ ‘ರಾಮಾಚಾರಿ’, ‘ಸೂರ್ಯವಂಶ’ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶಿವಮೊಗ್ಗ ಮೂಲದ ನಟಿ ಹಿಮಶ್ರೀ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ‘ಮೃತ್ಯುದೇವತೆ’ ಸೇರಿ ಕೆಲ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಇದೀಗ ‘ಬೃಂದಾವಿಹಾರಿ’ ಮೂಲಕ ಮತ್ತೊಮ್ಮೆ ತೆರೆ ಮೇಲೆ ಮಿಂಚಲು ಸಿದ್ಧರಾಗುತ್ತಿದ್ದಾರೆ. ಇದು ಅವರಿಗೆ ದಸರಾ ಹಬ್ಬದ ಖುಷಿಯನ್ನು ಹೆಚ್ಚಿಸಿದೆ.
himashree
ಹಿಮಶ್ರೀ
Published on: 

ಬೆಂಗಳೂರು: ಕನ್ನಡದ ‘ರಾಮಾಚಾರಿ’, ‘ಸೂರ್ಯವಂಶ’ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶಿವಮೊಗ್ಗ ಮೂಲದ ನಟಿ ಹಿಮಶ್ರೀ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ‘ಮೃತ್ಯುದೇವತೆ’ ಸೇರಿ ಕೆಲ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಇದೀಗ ‘ಬೃಂದಾವಿಹಾರಿ’ ಮೂಲಕ ಮತ್ತೊಮ್ಮೆ ತೆರೆ ಮೇಲೆ ಮಿಂಚಲು ಸಿದ್ಧರಾಗುತ್ತಿದ್ದಾರೆ. ಇದು ಅವರಿಗೆ ದಸರಾ ಹಬ್ಬದ ಖುಷಿಯನ್ನು ಹೆಚ್ಚಿಸಿದೆ. ಶೂಟಿಂಗ್ ಬಿಜಿ ನಡುವೆಯೂ ಅವರು ಊರಿನಲ್ಲಿ ನಾಡಹಬ್ಬ ಆಚರಿಸಲು ಅಣಿಯಾಗಿದ್ದಾರೆ.

ಹಿಮಶ್ರೀ
ಹಿಮಶ್ರೀ

‘ಶಿವಮೊಗ್ಗ-ಸಾಗರದ ನಡುವಿನ ಹಳ್ಳಿ ನಮ್ಮದು. ಊರಿನಲ್ಲಿ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ದುರ್ಗಾಷ್ಟಮಿ ದಿನದಂದು ಗ್ರಾಮ ದೇವತೆಗೆ ಮಡಿಲು ಅಕ್ಕಿ ಕೊಡುವ ಸಂಪ್ರದಾಯವಿದೆ. ಆ ದಿನ ಊರಿನಿಂದ ಸ್ವಲ್ಪ ದೂರ ಇರುವ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳಿ ಮಡಿಲು ಅಕ್ಕಿ ನೀಡುತ್ತೇವೆ. ಇಡೀ ದಿನ ಅಲ್ಲೇ ಇದ್ದು ಸೇವೆ ಮಾಡಿ ಬರುತ್ತೇವೆ. ಇನ್ನು ಮನೆಯಲ್ಲಿ ಕೂಡ ಒಂಬತ್ತು ದಿನಗಳ ಕಾಲ ಪೂಜೆ ಮಾಡುತ್ತೇವೆ. ಕೆಲಸದ ಬಿಜಿಯಿಂದಾಗಿ ಒಂಬತ್ತು ದಿನ ನನಗೆ ಉಪವಾಸ ಇರಲು ಆಗುವುದಿಲ್ಲ. ಹಾಗಾಗಿ, ದುರ್ಗಾಷ್ಟಮಿ ದಿನ ಮಾತ್ರ ಉಪವಾಸ ಮಾಡುತ್ತೇನೆ. ಗ್ರಾಮದೇವತೆಗೆ ಮಡಿಲು ಅಕ್ಕಿ ಸೇವೆ ಅರ್ಪಿಸಿದ ಬಳಿಕವಷ್ಟೇ ನಾನು ಪ್ರಸಾದ ಸೇವಿಸುವುದು. ಯಾವುದೇ ಕೆಲಸ ಆರಂಭಿಸಲಿ, ಹೊಸ ಪ್ರಾಜೆಕ್ಟ್ ಆರಂಭಿಸಲಿ ದೇವಿಗೆ ನನ್ನ ಮೊದಲ ಪ್ರಾರ್ಥನೆ. ಈ ಬಾರಿ ಕೂಡ ಒಳ್ಳೆಯ ಸಿನಿಮಾಗಳು ಸಿಗಲಿ ಎಂದೇ ಪ್ರಾರ್ಥಿಸುತ್ತೇನೆ. ಹಂತ ಹಂತವಾಗಿ ಬೆಳವಣಿಗೆ ಕಂಡಿದ್ದೇನೆ. ನನ್ನ ಮೇಲೆ ನನಗೆ ಅಚಲವಾದ ನಂಬಿಕೆಯಿದೆ. ಹಾಗೆಯೇ, ದೇವಿಯ ಕೃಪೆ ಇದೆ. ಕೆಲಸ ಮಾಡುವುದು ನನ್ನ ಕರ್ತವ್ಯ, ಉಳಿದಿದ್ದು ದೇವರಿಗೆ ಬಿಟ್ಟಿದ್ದು’ ಎಂದು ಹೇಳಿಕೊಳ್ಳುತ್ತಾರೆ. ಸದ್ಯ ಹಿಮಶ್ರೀ ಕನ್ನಡದ ‘ಬೃಂದಾವಿಹಾರಿ’, ‘ಮದರ್’, ‘ಕೌಸ್ತುಭ’, ‘ರಾಶಿ’ ಚಿತ್ರಗಳ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಅಲ್ಲದೇ ‘ರೀಲ್ಸ್ ರಾಣಿ, ಲೈಕ್ ರಾಜ’ ಸೇರಿ ಕೆಲ ಸಿನಿಮಾ, ಧಾರಾವಾಹಿಗಳ ಶೂಟಿಂಗ್‌ನಲ್ಲಿ ಬಿಜಿಯಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net