Birbal 2 - ಅವರನ್ನ ಬಿಟ್​, ಇವರನ್ನ ಬಿಟ್​, ಅವರ್ಯಾರು?

Birbal 2
Birbal 2
Published on
Birbal 2 -
ನಟ, ನಿರ್ದೇಶಕ ಎಂ.ಜಿ. ಶ್ರೀನಿವಾಸ್​ 2023ರ "ಘೋಸ್ಟ್​' ಬಳಿಕ "ಬೀರ್​ಬಲ್​ 2' ಘೋಷಿಸಿದ್ದರು. 2019ರಲ್ಲಿ ಶ್ರೀನಿ ನಟಿಸಿ, ನಿರ್ದೇಶಿಸಿದ್ದ ಲೀಗಲ್​ ಕಾಮಿಡಿ ಥ್ರಿಲ್ಲರ್​ ಚಿತ್ರದ ಮೂಲಕ ರುಕ್ಮಿಣಿ ವಸಂತ್​ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. "ಬೀರ್​ಬಲ್​' ಮೂರು ಚಿತ್ರಗಳ ಸರಣಿಯಾಗಿದ್ದು, ಮೊದಲ ಭಾಗಕ್ಕೆ ಫೈಂಡಿಂಗ್​ ವಜ್ರಮುನಿ' ಎಂದು ಶೀರ್ಷಿಕೆ ಇಡಲಾಗಿತ್ತು. ಇದೀಗ ಏಳು ವರ್ಷಗಳ ಬಳಿಕ "ಬೀರ್​ಬಲ್​ 2: ಅವರನ್ನ ಬಿಟ್​, ಇವರನ್ನ ಬಿಟ್​, ಅವರ್ಯಾರು?' ತೆರೆಗೆ ಬರಲು ರೆಡಿಯಾಗಿದೆ. ವಿಶೇಷ ಅಂದರೆ 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಖುಷ್ಬೂ "ನಾನಲ್ಲ" (2011) ಬಳಿಕ ಮತ್ತೆ ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗೇ 2012ರ "ಕ್ರೇಜಿ ಲೋಕ' ನಂತರ ಡೈಸಿ ಬೋಪಣ್ಣ ಕೂಡ ಕನ್ನಡದಲ್ಲಿ ನಟಿಸಿಲ್ಲ. ಹೀಗಾಗಿ 15 ವರ್ಷಗಳ ನಂತರ ಖುಷ್ಬೂ, 14 ವರ್ಷಗಳ ಬಳಿಕ ಡೈಸಿ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡುತ್ತಿರುವ ಕಾರಣ "ಬೀರ್​ಬಲ್​ 2' ಕುತೂಹಲ ಹೆಚ್ಚಿಸಿದೆ. ಹಾಗೇ "ಅರಸನ್​', "ಟೂರಿಸ್ಟ್​ ಫ್ಯಾಮಿಲಿ' ಖ್ಯಾತಿಯ ತಮಿಳು ನಟಿ ಯೋಗಲಕ್ಷ್ಮೀ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿಗೆ "ಬೀರ್​ಬಲ್​' ಸೀಕ್ವೆಲ್​ ಬಗ್ಗೆ ಮಾಹಿತಿ ನೀಡಿದ ಎಂಜಿ ಶ್ರೀನಿ, "ಈ ಸೀಕ್ವೆಲ್​ನಲ್ಲಿ ಹೊಸ ಕೇಸ್​ ಕುರಿತ ಕಥೆ ಹೇಳಲಿದ್ದೇವೆ. ಬೆಂಗಳೂರಿನಲ್ಲೇ ಪೂರ್ತಿ ಚಿತ್ರೀಕರಣ ಮಾಡಿದ್ದು, ಈಗಾಗಲೇ ಶೂಟಿಂಗ್​ ಪೂರ್ಣಗೊಂಡಿದೆ. ಪೋಸ್ಟ್​&ಪ್ರೊಡಕ್ಷನ್​ ಕಾರ್ಯಗಳೂ ಮುಗಿದಿದ್ದು, ಸದ್ಯ ಸೆನ್ಸಾರ್​ಗೆ ರೆಡಿಯಾಗಿದ್ದೇವೆ. ಇದೇ ಸೆಪ್ಟೆಂಬರ್​ ಅಥವಾ ಅಕ್ಟೋಬರ್​ನಲ್ಲಿ ಸಿನಿಮಾ ರಿಲೀಸ್​ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ.

ಶ್ರೀನಿ ಯೂನಿವರ್ಸ್​

"ಬೀರ್​ಬಲ್​' ಚಿತ್ರದಲ್ಲಿ ಲಾಯರ್​ ಮಹೇಶ್​ ಪಾತ್ರದಲ್ಲಿ ಶ್ರೀನಿ ನಟಿಸಿದ್ದರು. ಅದೇ ಪಾತ್ರದಲ್ಲಿ "ಘೋಸ್ಟ್​' ಸಿನಿಮಾದಲ್ಲೂ ಗೆಸ್ಟ್​ ಅಪಿಯರೆನ್ಸ್​ ಮಾಡಿದ್ದರು. ಇನ್ನು "ಘೋಸ್ಟ್​' ಚಿತ್ರದಲ್ಲಿ ದಳವಾಯಿ ಮುದ್ದಣ್ಣ ಅಲಿಯಾಸ್​ ಬಿಗ್​ ಡ್ಯಾಡಿ ಹಾಗೂ ಆನಂದ್​ ರಾವ್​ ಹೀಗೆ ದ್ವಿಪಾತ್ರಗಳಲ್ಲಿ ಶಿವಣ್ಣ ನಟಿಸಿದ್ದರು. ಇದೀಗ "ಬೀರ್​ಬಲ್​ 2'ನಲ್ಲಿ ಶಿವಣ್ಣ "ಬಿಗ್​ ಡ್ಯಾಡಿ'ಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ "ಘೋಸ್ಟ್​ 2', "ಬೀರ್​ಬಲ್​ 3', "ದಳವಾಯಿ' ಚಿತ್ರಗಳನ್ನೂ ಈಗಾಗಲೇ ಘೋಷಿಸಲಾಗಿದ್ದು, ಒಂದು ಚಿತ್ರದ ಪಾತ್ರ ಇನ್ನೊಂದು ಚಿತ್ರದಲ್ಲಿ ಮುಂದುವರಿಯಲಿದೆ.


ಎ ಫಾರ್​ ಆನಂದ್​ನಲ್ಲಿ, ಎಂ ಫಾರ್​ ಮಾಧುರಿ?

ಈ ಯೂನಿವರ್ಸ್​ ಅಲ್ಲದೇ ಶ್ರೀನಿವಾಸ್​ ಮತ್ತು ಶಿವರಾಜಕುಮಾರ್​ ಕಾಂಬಿನೇಷನ್​ನಲ್ಲಿ "ಎ ಫಾರ್​ ಆನಂದ್​' ಸಿನಿಮಾ ಮುಹೂರ್ತ ಕಳೆದ ವರ್ಷ ನೆರವೇರಿತ್ತು. ಇದೀಗ ಚಿತ್ರದ ನಾಯಕಿಯ ಆಯ್ಕೆ ನಡೆಯುತ್ತಿದ್ದು, ತಂಡ ಬಾಲಿವುಡ್​ ನಟಿ ಮಾಧುರಿ ದೀತ್​ರನ್ನು ಸಂಪರ್ಕಿಸಿದೆಯಂತೆ. "ಮಾಧುರಿ ಅವರನ್ನು ಸಂಪರ್ಕಿಸಿರುವುದು ನಿಜ. ಆದರೆ, ಇನ್ನೂ ಕಥೆ ಹೇಳಿಲ್ಲ. ಮಾತುಕತೆಯೂ ಪ್ರಾರಂಭವಾಗಿಲ್ಲ. ಎಲ್ಲ ಓಕೆ ಆದ ಬಳಿಕವಷ್ಟೇ ನಾನು ಮಾಹಿತಿ ನೀಡಬಲ್ಲೆ. ನಾಯಕಿಯ ಆಯ್ಕೆಯ ಬಳಿಕ ಉಳಿದ ತಾರಾಗಣದ ಆಯ್ಕೆ ಮಾಡಿಕೊಳ್ಳಲಿದ್ದೇವೆ. ಸೆಪ್ಟೆಂಬರ್​ನಲ್ಲಿ "ಎ ಾರ್​ ಆನಂದ್​' ಶೂಟಿಂಗ್​ ಪ್ರಾರಂಭಿಸಲಿದ್ದೇವೆ, ಅಷ್ಟರಲ್ಲಿ ಎಲ್ಲ ಫೈನಲ್​ ಆಗಲಿದೆ' ಎನ್ನುತ್ತಾರೆ ಶ್ರೀನಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net