ಮೊದಲ ಬಾರಿಗೆ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಪಾತ್ರಕ್ಕಾಗಿ ನಡೆಸುತ್ತಿರುವ ಸಿದ್ಧತೆ ಮತ್ತು ಸವಾಲಿನ ಬಗ್ಗೆ ಭುವನ್, ‘ಪಾತ್ರದ ಮೂಲಕ ನಗಿಸುವುದು, ಅಳಿಸುವುದು ತುಂಬಾ ಕಷ್ಟ. ನಾನೀಗ ತೆರೆ ಮೇಲೆ ನಗಿಸಬೇಕು ಎಂದರೆ, ನನಗೆ ನಾನೇ ಬದಲಾಗಬೇಕಿದೆ. ಹಾವಭಾವ, ದೇಹಭಾಷೆ ಹಾಗೂ ಮಾತಿನ ವೈಖರಿಯನ್ನು ಬದಲಿಸಿಕೊಳ್ಳಬೇಕಿದೆ. ಅದಕ್ಕಾಗಿ ಈ ಪಾತ್ರ ಸವಾಲಿನದು. ಪಾತ್ರಕ್ಕಾಗಿ ಇಂಟೆನ್ಸ್ ಟ್ರೇನಿಂಗ್ ಕ್ಲಾಸ್‌ಗೆ ಹೋಗುತ್ತಿದ್ದೇನೆ. ಈಗಾಗಲೇ 12 ದಿನಗಳ ಕ್ಲಾಸ್ ಮುಗಿಸಿದ್ದೇನೆ. ಇದೇ ಜೂನ್ 12ರಿಂದ ಶೂಟಿಂಗ್ ಆರಂಭವಾಗಲಿದ್ದು, 45-50 ದಿನಗಳ ಕಾಲ ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ಚಿತ್ರೀಕರಣ ನಡೆಯಲಿದೆ. ಹೀರೋಯಿನ್‌ಗೆ ಹುಡುಕಾಟ ನಡೆದಿದ್ದು, ಸದ್ಯದಲ್ಲೇ ಅಂತಿಮಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.