ಖಲೀಫಾ ಟು ಚೆನ್ನೈ ಪ್ರೇಮ ಕಥೆ; ಈ ವಾರ ಒಟಿಟಿ ಮತ್ತು ಚಿತ್ರ ಮಂದಿರದಲ್ಲಿ ರಿಲೀಸ್​ ಆಗುವ ಸಿನಿಮಾಗಳಿವು..South Indian movies

5 new South Indian movies releasing on OTT and in theatres
5 new South Indian movies releasing on OTT and in theatres
Published on

ಈ ಬಾರಿ ಆಗಸ್ಟ್ 17 ರಿಂದ 23, 2026 ರವರೆಗೆ ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಅತ್ಯಾಕರ್ಷಕ ಸಿನಿಮಾಗಳು ಒಟಿಟಿಯಲ್ಲಿ ಮರತ್ತು ಥಿಯೇಟರ್​ನಲ್ಲಿ ರಿಲೀಸ್ ಆಗಲು ಸಜ್ಜಾಗುತ್ತಿದೆ. ಅತ್ಯಾಕರ್ಷಕ ಆಕ್ಷನ್ ಕಥೆಯಿಂದ ಹಿಡಿದು, ಕ್ರೈಂ ಥ್ರಿಲ್ಲರ್​, ಕೌಟುಂಬಿಕ ಮನರಂಜನೆಯವರೆಗೆ  ಸಾಲು ತಮಿಳು, ಮಲಯಾಳಂ ಮತ್ತು ತೆಲುಗು  ಸಿನಿಮಾಗಳು ಕಣ್ತುಂಬಿಕೊಳ್ಳಲು ಸಿಗಲಿವೆ.

ಈ ಕೆಲಸದ ಒತ್ತಡದ ಮಧ್ಯೆ ಫ್ಯಾಮಿಲಿಗೆ ಮತ್ತು ಸಿನಿಮಾ ನೋಡಲು ಥಿಯೇಟರ್​ಗೆ ಹೋಗೋಕೆ ಸಮಯ ಕೊಟ್ಟುಕೊಳ್ಳೋಕೆ ಸಾಧ್ಯನೇ ಆಗೋದಿಲ್ಲ.   ಹೀಗಾಗಿ ಸಿನಿ ಪ್ರೇಮಿಗಳು ಓಟಿಟಿ ಫ್ಲಾಟ್​ಫಾರ್ಮ್​ನಲ್ಲಿ ರಿಲೀಸ್​ ಆಗುವ ಚಿತ್ರಕ್ಕಾಗಿ ಕಾದು ಫ್ಯಾಮಿಲಿ ಜೊತೆಗೆ ಸಿನಿಮಾ ನೋಡುತ್ತಾ ಸಮಯ ಕಳೆಯುತ್ತಾರೆ. ಈ ವಾರ ಯಾವ ಯಾವ್ಯಾವ ಚಿತ್ರ ರಿಲೀಸ್ ಆಗುತ್ತದೆ ಎನ್ನುವ  ಸಂಪೂರ್ಣ ಮಾಹಿತಿ ಇಲ್ಲಿದೆ. 

ಸಿನಿಮಾ: ಖಲೀಫಾ

  • 20 ಆಗಸ್ಟ್ 2026ರಂದು ಸಿನಿಮಾ ರಿಲೀಸ್​
ಪೃಥ್ವಿರಾಜ್ ಸುಕುಮಾರನ್, ನೀಲ್ ನಿತಿನ್ ಮುಖೇಶ್ ಮತ್ತು ಮಾಳವಿಕಾ ಶರ್ಮಾ ನಟಿಸಿರುವ ಖಲೀಫಾ ಸಿನಿಮಾ ಇತ್ತೀಚೆಗೆ ಥಿಯೇಟರ್​​ಗಳಲ್ಲಿ ರಿಲೀಸ್​ ಆಗಿತ್ತು. ವೈಶಾಖ್​ ನಿರ್ದೇಶನದ ಈ ಚಿತ್ರ ಆಕ್ಷನ್-ಕ್ರೈಮ್ ಥ್ರಿಲ್ಲರ್ ಚಲನಚಿತ್ರವಾಗಿದೆ. 
20 ಆಗಸ್ಟ್ 2026ರಂದು ಸಿನಿಮಾ ರಿಲೀಸ್​ ಆಗಲಿದೆ  ಕ್ರೈಮ್ ಥ್ರಿಲ್ಲರ್, ಅಧಿಕಾರ, ಪ್ರತೀಕಾರ ಮತ್ತು ಭೂಗತ ಲೋಕವನ್ನು ಒಳಗೊಂಡ ಬಹು-ಪೀಳಿಗೆಯ ಯುದ್ಧದ ಕೇಂದ್ರಬಿಂದುವಾಗಿರುವ ಕುಖ್ಯಾತ ಚಿನ್ನದ ಕಳ್ಳಸಾಗಣೆ ಸುತ್ತ ಈ ಸಿನಿಮಾ ಕತೆ ಸುತ್ತುತ್ತದೆ.

ಬೆಥ್ ಲೆಹೆಮ್ ಕುಟುಂಬಂ ಯೂನಿಟ್

  • ಬಿಡುಗಡೆ ದಿನಾಂಕ: 21 ಆಗಸ್ಟ್ 2026 
  • ತಾರಾಗಣ: ನಿವಿನ್ ಪೌಲಿ, ಮಮಿತಾ ಬೈಜು ಮತ್ತು ಸಂಗೀತ್ ಪ್ರತಾಪ್
  •  ನಿರ್ದೇಶಕ: ಗಿರೀಶ್ ಎಡಿ 
  • ಎಲ್ಲಿ ವೀಕ್ಷಿಸಬೇಕು: ಚಿತ್ರಮಂದಿರಗಳಲ್ಲಿ
ಮಲಯಾಳಂ ಕಾಮಿಡಿ, ರೊಮ್ಯಾಂಟಿಕ್​ ಸಿನಿಮಾ ಇದಾಗಿದೆ.  ವಿದೇಶದಲ್ಲಿದ್ದ  ಮಹಿಳೆ ಸ್ವದೇಶಕ್ಕೆ ಬರುವ ಸುತ್ತ ಸಿನಿಮಾದ ಕತೆ ಇದೆ. 

ಇರುಮುಡಿ

  • ಬಿಡುಗಡೆ ದಿನಾಂಕ: 21 ಆಗಸ್ಟ್ 2026
  • ತಾರಾಗಣ: ರವಿತೇಜ, ಪ್ರಿಯಾ ಭವಾನಿ ಶಂಕರ್ ಮತ್ತು ಸಾಯಿ ಕುಮಾ
  • ರ್ನಿರ್ದೇಶಕ: ಶಿವ ನಿರ್ವಾಣ
  • ಎಲ್ಲಿ ವೀಕ್ಷಿಸಬೇಕು: ಚಿತ್ರಮಂದಿರಗಳಲ್ಲಿ

ರವಿತೇಜ ನಟನೆಯ ಇರುಮುಡಿ ಸಿನಿಮಾ ಭೌವನಾತ್ಮಕ ಆಕ್ಷನ್​ ಸಿನಿಮಾ. ತಂದೆ ಮತ್ತು ಮಗಳ ರಕ್ಷಣೆ ಸುತ್ತ ಕತೆಯನ್ನು ಹೆಣೆಯಲಾಗಿದೆ.  ಏಕೈಕ ದೌರ್ಬಲ್ಯವೇನೆಂದರೆ, ಅವನು ಪ್ರತಿ ಪುಟ್ಟ ಹುಡುಗಿಯಲ್ಲೂ ತನ್ನ ಮಗಳ ಪ್ರತಿಬಿಂಬವನ್ನು ನೋಡುತ್ತಾನೆ. ಆದ್ದರಿಂದ ತನ್ನ ಸ್ವಂತ ಮಗಳು ಸೇರಿದಂತೆ ತನ್ನ ಹಳ್ಳಿಯ ಹುಡುಗಿಯರಿಗೆ ಅಪಾಯ ಬಂದಾಗ, ಅವನು ಅವರನ್ನು ರಕ್ಷಿಸಲು ಹೊರಟು, ತನ್ನ ಅತ್ಯಂತ ಉಗ್ರ ರೂಪವನ್ನು ಪಡೆದುಕೊಳ್ಳುವುದು ಸಿನಿಮಾದ ಕಥಾ ಹಂದರವಾಗಿದೆ. 

ಸಿನಿಮಾ:  ಪ್ಯಾರ್ ಪ್ರೇಮ ಕಲ್ಯಾಣಂ

  • ಬಿಡುಗಡೆ ದಿನಾಂಕ: 21 ಆಗಸ್ಟ್ 2026
  • ಪಾತ್ರವರ್ಗ: ಸಾನ್ವೆ ಮೇಘನಾ ಮತ್ತು ಎಲಾನ್ನಿ
  • ರ್ದೇಶಕ: ಎಲಾನ್
  • ಎಲ್ಲಿ ನೋಡಬೇಕು: ನೆಟ್‌ಫ್ಲಿಕ್ಸ್
ಎಲಾನ್​ ನಿರ್ದೇಶಿಸಿ , ನಟಿಸಿರುವ  ತಮಿಳಿನ ರೊಮ್ಯಾಂಟಿಕ್​ ಸಿನಿಮಾ ನೇರವಾಗಿ  ನೆಟ್​ಫ್ಲಿಕ್ಸ್​ನಲ್ಲಿ ತೆರೆಕಾಣುತ್ತಿದೆ.  2018ರಲ್ಲಿ ರಿಲೀಸ್​ ಆಗಿದ್ದ  ದೊಡ್ಡ ಹಿಟ್​ ಚಿತ್ರ  ಪ್ಯಾರ್​ ಪ್ರೇಮ ಕಾದಲ್​ನ ಮುಂದುವರೆದ ಭಾಗ ಎನ್ನಲಾಗಿದೆ. ಮದುವೆ ನಂತರ ಗಂಡನ ಮನೆಗೆ ಹೆಣ್ಣು ತೆರಳುವದು ವಾಡಿಕೆ. ಆದರೆ ಇಲ್ಲಿ ಎಲಾನ್​ ಮಳೆ ಅಳಿಯನಾಗಿ ಉಳಿದುಕೊಳ್ಳುತ್ತಾರೆ. ಇವರಿಬ್ಬರ ಜೀವನ ಹೇಗಿರುತ್ತದೆ ಎನ್ನುವ ಸುತ್ತ ಸಿನಿಮಾವಿದೆ.

ಚೆನ್ನೈ ಪ್ರೇಮಕಥೆ

ಕಿರಣ್ ಅಬ್ಬಾವರಂ ಮತ್ತು ಶ್ರೀ ಗೌರಿ ಪ್ರಿಯಾ ರೆಡ್ಡಿ ನಟಿಸಿರುವ ಚೆನ್ನೈ ಲವ್ ಸ್ಟೋರಿ ಪ್ರೀತಿ, ಹಂಬಲ ಮತ್ತು ಸಂಬಂಧ bgfgeದ ಅನಾವರಣಗೊಳಿಸುತ್ತದೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿ ಪ್ರದರ್ಶನದ ನಂತರ, ಈ ಚಿತ್ರ ಆಗಸ್ಟ್ 21 ರಿಂದ ಪ್ರಸಾರವಾಗಲಿದೆ. ಸೋನಿಲೈವ್​ನಲ್ಲಿ ಸಿನಿಮಾ ವೀಕ್ಷಿಸಬಹುದು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net