ಮರವಾಗಲು, ಕನ್ನಡದ ಬೇರು ಗಟ್ಟಿಯಾಗಲಿ

ಕವಿರಾಜ್​
ಕವಿರಾಜ್​
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಭಿಮಾನದಿಂದ ಬದುಕಿ, ಗರ್ವದಿಂದ ‘ನಾನು ಕನ್ನಡಿಗ’ ಎಂದು ಗರ್ಜಿಸಬೇಕಿದೆ
  • ನಮ್ಮ ಕನ್ನಡತನವನ್ನು ಗಟ್ಟಿಗೊಳಿಸಿದಾಗ ಮಾತ್ರ ಭಾಷೆ ಮರವಾಗಿ ಬೆಳೆಯಲು ಸಾಧ್ಯ
  • ಭಾಷೆಯ ಪರವಾಗಿ ಧ್ವನಿ ಎತ್ತಬೇಕಿದೆ

ಕವಿರಾಜ್, ಚಿತ್ರ ಸಾಹಿತಿ, ನಿರ್ದೇಶಕ

ಕನ್ನಡಿಗರಿಗೆಮರೆವು.ಕುವೆಂಪುಹೇಳಿದಂತೆ ಅವರನ್ನು ಬಡಿದೆಚ್ಚರಿಸಬೇಕಾದಹೊತ್ತು ಇದು.ಕನ್ನಡಿಗರಇತಿಹಾಸ,ಅಸ್ಮಿತೆಗಳುಹಿರಿದಾಗಿದ್ದು,ಸ್ವಾಭಿಮಾನದಿಂದಬದುಕಿ,ಗರ್ವದಿಂದ‘ನಾನು ಕನ್ನಡಿಗ’ ಎಂದು ಗರ್ಜಿಸಬೇಕಿದೆ.ಮುಖ್ಯವಾಗಿಒಗ್ಗಟ್ಟಾಗಬೇಕಿದೆ.ಕೆಲಕೊರತೆಗಳ ನಡುವೆಯೂ ಕನ್ನಡದ ಶಕ್ತಿಜಾಗೃತವಾಗಿರುವುದನ್ನು ಕಂಡಿದ್ದೇವೆ.ಬೆಂಗಳೂರಿನಂತಹಮಹಾನಗರಗಳಲ್ಲಿ ಕನ್ನಡ ಮಾತನಾಡಿದಕಾರಣಕ್ಕಾಗಿಯೇ ಹಲ್ಲೆ ಮಾಡಿದವರವಿರುದ್ಧ ಕನ್ನಡಿಗರು ತಿರುಗಿಬಿದ್ದಿದ್ದರು.ಇಂತಹಘಟನೆಗಳನ್ನು ನೋಡಿದಾಗ ಕನ್ನಡಭಾಷೆ ಕುರಿತಂತೆ ನಾವು ಜಾಗೃತರಾಗಿದ್ದೇವೆಎಂಬ ಆಶಾಕಿರಣ ಮೂಡುತ್ತದೆ.ಆದರೂ,ಇನ್ನಷ್ಟುಹೆಚ್ಚು ಭಾಷೆಯ ಬಗ್ಗೆ ಅಭಿಮಾನಹೊಂದಬೇಕಿದೆ.ಇಂದಿನಯುವಕರು ಕನ್ನಡ ನಾಡಿನ ಇತಿಹಾಸದಬಗ್ಗೆ ಅರಿಯಬೇಕಿದೆ.ಮರದೊಡ್ಡದಾಗಿ ಬೆಳೆಯಲು ಬೇರು ಮುಖ್ಯ.ನಮಗೆಕನ್ನಡವೇ ಬೇರು.ನಮ್ಮಕನ್ನಡತನವನ್ನು ಗಟ್ಟಿಗೊಳಿಸಿದಾಗಮಾತ್ರ ಭಾಷೆ ಮರವಾಗಿ ಬೆಳೆಯಲುಸಾಧ್ಯ.ಯಾರದೋಅಸ್ಮಿತೆಯಲ್ಲಿ ಮುಂದುವರಿದರೆಬೆಲೆ ಇರುವುದಿಲ್ಲ.ಬದಲಾಗಿನಮ್ಮ ಮಣ್ಣಿನ ಸೊಗಡಿನಲ್ಲಿಬೆಳೆದಾಗ ಮಾತ್ರ ಬೆಲೆ ಹೆಚ್ಚಾಗುತ್ತದೆ.

ಕನ್ನಡಬರೀ ಭಾಷೆಯಷ್ಟೇ ಅಲ್ಲ.ಅದಕ್ಕೊಂದುಪರಂಪರೆ,ಸಂಸ್ಕೃತಿಯಿದೆ.ಬಸವಣ್ಣ,ಸರ್ವಜ್ಞರವಚನಗಳ ಜ್ಞಾನ,ಕುವೆಂಪು,ಕಾರಂತರಅನುಭವ ಸಾಹಿತ್ಯವಿದೆ.ಇವೆಲ್ಲವನ್ನುಅರಗಿಸಿಕೊಂಡು ಜ್ಞಾನ ಪಡೆಯಬೇಕು.ಆಗಮಾತ್ರ ಎಂತಹ ಪ್ರಪಂಚ ಎದುರುನಿಂತರೂ ಎದುರಿಸುತ್ತೇವೆ.ನೆಲಮೂಲದ ಜ್ಞಾನ,ಸೊಗಡು,ಸಂಸ್ಕೃತಿಯನ್ನುಮೈಗೂಡಿಸಿಕೊಂಡಾಗಲೇ ನಮ್ಮಲ್ಲಿಭಾಷಾಭಿಮಾನ ಬೆಳೆಯುವುದು.ಹಿಂದಿನಕಾಲದಲ್ಲಿ ನಮ್ಮ ರಾಜರು-ಮಹಾರಾಜರುಅರ್ಧ ಏಷ್ಯಾಖಂಡವನ್ನೇ ಆಳಿದ್ದಾರೆ.ಅಂತಹವರಯಶೋಗಾಥೆಗಳನ್ನು ಕೇಳಿ,ಅವರನ್ನುಮೆರೆಸಬೇಕು.ಇನ್ನುಭಾಷೆಯ ಪರವಾಗಿ ಧ್ವನಿ ಎತ್ತಬೇಕಿದೆ.ಧ್ವನಿಎತ್ತುವುದು ಎಂದರೆ,ಕೇವಲಬಾವುಟ ಹಿಡಿದುಕೊಂಡು ಹೋರಾಟಕ್ಕೆಇಳಿಯಬೇಕಂತೇನಲ್ಲ.ಉದಾಹರಣೆಗೆನಾವು ಯಾವುದೋ ಒಂದು ಅಂಗಡಿಗೆಹೋಗುತ್ತೇವೆ ಎಂದರೆ,ಅಲ್ಲಿನಮಗೆ ಸಂಪೂರ್ಣ ಕನ್ನಡದಲ್ಲಿಯೇವ್ಯವಹರಿಸುವಂತೆ ಇರಬೇಕು.ಹಾಗೆಯೇನಾವು ಕೂಡ ಕನ್ನಡದಲ್ಲಿ ವ್ಯವಹರಿಸಬೇಕು.ಬಳಸಿದಾಗಮಾತ್ರ ಭಾಷೆ ಬೆಳೆಯಲು ಸಾಧ್ಯ.ಕನ್ನಡದಲ್ಲಿಉತ್ಕೃಷ್ಟವಾದ ಸಾಹಿತ್ಯವಿದೆ.ಇಂದಿನಯುವ ಪೀಳಿಗೆ ಓದುವ ಅಭಿರುಚಿಬೆಳೆಸಿಕೊಳ್ಳಬೇಕು.ದಿನಕ್ಕೆಹತ್ತೇ ಪುಟ ಓದಿದರೆ ಸಾಕು,ತಿಂಗಳಿಗೆಮೂರು ಪುಸ್ತಕ ಓದಬಹುದು.ಮೊದಲುಓದಲು ಕೂರಿ ಬಳಿಕ ನಿಮಗೆ ನೀವೆಹೊಸ ಜಗತ್ತನ್ನು ಅನ್ವೇಷಿಸುತ್ತೀರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net