

ಕರೊನಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಸ್ಯಾಂಡಲ್ವುಡ್ ಕೂಡ ಸ್ಪಂದಿಸಿದ್ದು, ‘ಜನತಾ ಕರ್ಫ್ಯೂ’ಗೆ ಹಲವಾರು ನಟ-ನಟಿಯರು ಬೆಂಬಲ ಸೂಚಿಸಿದ್ದಾರೆ. ಕರೊನಾ ಸೋಂಕು ತಗುಲದಂತೆ ಹಾಗೂ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ. 22ರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಮನೆಯೊಳಗೇ ಇದ್ದು ‘ಜನತಾ ಕರ್ಫ್ಯೂ’ ಪಾಲಿಸುವಂತೆ ಪ್ರಧಾನಿ ಮೋದಿ ಗುರುವಾರ ಕರೆ ನೀಡಿದ್ದರು. ದೇಶದ ಜನತೆಯ ಹಿತಕ್ಕಾಗಿ ಅವರು ನೀಡಿರುವ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಅದಕ್ಕೀಗ ತಾರೆಯರೂ ಕೈಜೋಡಿಸಿದ್ದಾರೆ. ಆ ಮೂಲಕ ಅಭಿಮಾನಿಗಳು ‘ಜನತಾ ಕರ್ಫ್ಯೂ’ನಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮುಖೇನ ಕರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಪಾತ್ರ ಕೂಡ ಇರುವಂತಹ ಕೆಲಸವನ್ನು ಚಿತ್ರರಂಗದ ಹಲವರು ಮಾಡುತ್ತಿದ್ದಾರೆ.
ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ
| ಭಾರತಿ ವಿಷ್ಣುವರ್ಧನ್ ನಟಿ
ಕುಟುಂಬ ಕಾಪಾಡಿ ಕೊಳ್ಳೋಣ
| ಪುನೀತ್ ರಾಜ್ಕುಮಾರ್ ನಟ
ಯಾರೂ ಹೆದರಬೇಡಿ
| ಜೋಗಿ ಪ್ರೇಮ್ ನಿರ್ದೇಶಕ
ಪ್ರತಿಯೊಬ್ಬರ ಹೋರಾಟ ಅನಿವಾರ್ಯ
| ನೀನಾಸಂ ಸತೀಶ್ ನಟ
ದಯವಿಟ್ಟು ಭಾಗವಹಿಸಿ
ನಮ್ಮನೆಯಿಂದ ಯಾರೂ ಹೊರಬರಲ್ಲ
| ಶ್ರುತಿ ನಟಿ
ಕರೊನಾ ಕಡಿಮೆ ಆಗುವವರೆಗೂ ಮಾಡಿ
| ಆಶಿಕಾ ರಂಗನಾಥ್ ನಟಿ
ಮನೆ ಬಿಟ್ಟು ಹೊರಗೇ ಬರಲ್ಲ
| ಸುಮನ್ ನಗರ್ಕರ್ ನಟಿ
ರಾಜಕುಮಾರ್ ಅಕಾಡೆಮಿಯಿಂದ ಜಾಗೃತಿ
ಕರೊನಾ ವೈರಸ್ ವಿರುದ್ಧ ಡಾ.ರಾಜಕುಮಾರ್ ಅಕಾಡೆಮಿ ಕೂಡ ಜಾಗೃತಿ ಮೂಡಿಸುತ್ತಿದೆ. ಕರೊನಾ ಮಾತ್ರವಲ್ಲದೆ ಕಾಲರಾ ರೋಗದ ಲಕ್ಷಣಗಳ ಬಗ್ಗೆಯೂ ಪ್ರತ್ಯೇಕವಾಗಿ ತಿಳಿಸುವ ಮೂಲಕ ಈ ಅಕಾಡೆಮಿ ಸಾಮಾಜಿಕ ಕಳಕಳಿ ತೋರುತ್ತಿದೆ. ಕರೊನಾ ರೋಗ ಲಕ್ಷಣಗಳು ಹಾಗೂ ಅದರ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪೋಸ್ಟರ್ಗಳನ್ನು ಪ್ರಕಟಿಸಿ ಅಕಾಡೆಮಿ ಜಾಗೃತಿ ನಡೆಸುತ್ತಿದೆ. ಮತ್ತೊಂದೆಡೆ ಜನತಾ ಕರ್ಫ್ಯೂಗೆ ಬೆಂಬಲಿಸುವಂತೆ ‘ಹೊಂಬಾಳೆ ಫಿಲಮ್್ಸ’ ಕೂಡ ಸೋಷಿಯಲ್ ಮೀಡಿಯಾ ಮೂಲಕ ಕೋರಿಕೊಂಡಿದೆ.
ಇಲ್ಲ್ಲಾಂದ್ರೆ ಮುಂದೆ ಕಷ್ಟ
| ಶ್ರೀಮುರಳಿ ನಟ
ನಮ್ಮ ಆದ್ಯತೆಗಳು ನಮ್ಮ ಜೀವಕ್ಕಿಂತ ಮುಖ್ಯವಲ್ಲ. ಉತ್ತಮ ಭವಿಷ್ಯಕ್ಕಾಗಿ ಸಲಹೆ ಸೂಚನೆಗಳನ್ನು ಪಾಲಿಸಿ, ಮನೆಯಲ್ಲೇ ಇರೋಣ.
| ಮಾನ್ವಿತಾ ಕಾಮತ್ ನಟಿ
ಕರೊನಾ ಕೊಲ್ಲೋಣ
| ತಾರಾ ಅನೂರಾಧಾ ನಟಿ
ದಂಪತಿಯ ಮನವಿ
| ಪವನ್ ಒಡೆಯರ್ ನಿರ್ದೇಶಕ ಮತ್ತು ಅಪೇಕ್ಷಾ ಪುರೋಹಿತ್ ನಟಿ