

| ಹರ್ಷವರ್ಧನ್ ಬ್ಯಾಡನೂರು
ಕನ್ನಡ ಚಿತ್ರರಂಗಕ್ಕೆ 2025 ಹೊಸ ಹುರುಪು ನೀಡಿತ್ತು. ಕಳೆದ 2024ರ ಡಿಸೆಂಬರ್ನಲ್ಲಿ "ಯುಐ' ಮತ್ತು "ಮ್ಯಾಕ್ಸ್' ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗಿ ಸ್ವಲ್ಪ ಮಟ್ಟಿಗೆ ಪ್ರೇಕ್ಷಕರನ್ನು ಥಿಯೇಟರ್ಗೆ ಕರೆತಂದಿದ್ದವು. ಅದರ ಬೆನ್ನಲ್ಲೇ 2025ರ ಜ. 10ರಂದು ರಿಲೀಸ್ ಆದ "ಛೂ ಮಂತರ್' ಕೂಡ 50 ಯಶಸ್ಸಿನ ನಗೆ ಬೀರಿತ್ತು. ಆದರೆ, ಸ್ಟಾರ್ ಚಿತ್ರಗಳು, ಒಳ್ಳೆಯ ಕಂಟೆಂಟ್ಗಳು ಕಡಿಮೆಯಾದ ಕಾರಣವೋ ಏನೋ ಕ್ರಮೇಣ ಜನ ಮತ್ತೆ ಥಿಯೇಟರ್ಗಳಿಂದ ದೂರವಾಗತೊಡಗಿದರು. "ಯುದ್ಧಕಾಂಡ', "ಮಾದೇವ, "ಪಪ್ಪಿ', "ನೋಡಿದವರು ಏನಂತಾರೆ', ಅಂತಹ ಸಿನಿಮಾಗಳು ಆಗೊಮ್ಮೆ ಈಗೊಮ್ಮೆ ಸದ್ದು ಮಾಡಿದವು.
ಆದರೆ, "ಫಾರೆಸ್ಟ್', "ಮನದ ಕಡಲು', "ಅಜ್ಞಾತವಾಸಿ', "ವಿದ್ಯಾಪತಿ', "ಮಾದೇವ', "ಭುವನಂ ಗಗನಂ', "ಅಪಾಯವಿದೆ ಎಚ್ಚರಿಕೆ', "ವೀರ ಚಂದ್ರಹಾಸ', ಫೈರ್ಫ್ಲೈ ಸೇರಿ ಕೆಲ ಚಿತ್ರಗಳು ಭರ್ಜರಿ ಲಾಭ ಮಾಡಿಕೊಡದಿದ್ದರೂ, ಸಮಾಧಾನಕರ ಪ್ರದರ್ಶನ ಕಂಡಿವೆ. "ಎಡಗೈಯೇ ಅಪಘಾತಕ್ಕೆ ಕಾರಣ', "ಕಾಲವೇ ಮೋಸಗಾರ', "ಎಕ್ಸ್ ಆ್ಯಂಡ್ ವೈ' ಜತೆಗೆ ಕೆಲ ಸಿನಿಮಾಗಳು ಸದ್ಯ ಪ್ರದರ್ಶನ ಮುಂದುವರಿಸಿವೆ. ಹೀಗಿದ್ದರೂ 2025ರ ಮೊದರ್ಲಧ ಚಿತ್ರರಂಗ ಮತ್ತು ಪ್ರೇಕ್ಷಕರ ಮಟ್ಟಿಗೆ ನಿಧಾನವಾಗಿದ್ದು, ದ್ವೀತಿಯಾರ್ಧ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ.
ವರ್ಷದಿಂದ ವರ್ಷಕ್ಕೆ ನಿರ್ಮಾಣವಾಗುತ್ತಿರುವ ಕನ್ನಡ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅವುಗಳನ್ನು ನೋಡಲು ಥಿಯೇಟರ್ಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ ಮೂರು ವರ್ಷಗಳ ದಾಖಲೆ ಗಮನಿಸಿದರೆ, 2022ರಲ್ಲಿ ಕರೊನಾದಿಂದ ಚೇತರಿಸಿಕೊಂಡಿದ್ದ ಕನ್ನಡ ಚಿತ್ರರಂಗದಲ್ಲಿ ಒಟ್ಟು 202 ಚಿತ್ರಗಳು ಬಿಡುಗಡೆಯಾಗಿದ್ದು. ಆ ವರ್ಷ ಎಂಟು ಕೋಟಿ ಜನ ಕನ್ನಡ ಚಿತ್ರಗಳನ್ನು ವೀಸಿದ್ದರು. ಆದರೆ, 2023ರಲ್ಲಿ ಸಿನಿಮಾಗಳ ಸಂಖ್ಯೆ 217ಕ್ಕೆ ಏರಿಕೆಯಾದರೂ, ಪ್ರೇಕ್ಷಕರ ಸಂಖ್ಯೆ 3.2 ಕೋಟಿಗೆ ಇಳಿದಿತ್ತು. ಇನ್ನು ಕಳೆದ ವರ್ಷ 227 ಚಿತ್ರಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಸಂಖ್ಯೆ 2.6 ಕೋಟಿಗೆ ಇಳಿದಿದೆ. ಇನ್ನು ಈ ವರ್ಷ ಪ್ರತಿ ವಾರ ಸರಾಸರಿ ಐದು ಚಿತ್ರಗಳು ರಿಲೀಸ್ ಆಗುತ್ತಿದ್ದು ಮೊದರ್ಲಧ 127 ಚಿತ್ರಗಳು ರಿಲೀಸ್ ಆಗಿವೆ. ಆದರೆ, ಪ್ರೇಕ್ಷಕರ ಸಂಖ್ಯೆ ಒಂದು ಕೋಟಿಗೂ ಕಡಿಮೆ ಇದೆ ಎನ್ನಲಾಗಿದೆ.
ದ್ವೀತಿಯಾರ್ಧದ ಮೊದಲ ಶುಕ್ರವಾರ ಕನ್ನಡದ "ತಪಸ್ಸಿ', "ಜಂಗಲ್ ಮಂಗಲ್', "ಕಪಟ ನಾಟಕ ಸೂತ್ರಧಾರಿ', "ಪೆನ್ಡೆವ್', "ಹೆಬ್ಬುಲಿ ಕಟ್', "ಕ್ಯಾಪಿಟಲ್ ಸಿಟಿ' ಹೀಗೆ ಆರು ಚಿತ್ರಗಳು ಬಿಡುಗಡೆಯಾಗಲಿವೆ. ಜತೆಗೆ 2015ರ ಹಿಟ್ "ರಂಗಿತರಂಗ' ರಿ&ರಿಲೀಸ್ ಆಗಲಿದೆ. ಭಿನ್ನ, ವಿಭಿನ್ನ ಜಾನರ್ ಚಿತ್ರಗಳಾದ ಕಾರಣ, ಸೆಕೆಂಡ್ ಹ್ಾನಲ್ಲಾದರೂ ಉತ್ತಮ ಪ್ರಾರಂಭ ದೊರೆಯುವ ನಿರೀೆ ಇದೆ. ಮೊದರ್ಲಧದ ವೇಗದಲ್ಲಿಯೇ ಸಿನಿಮಾಗಳು ಥಿಯೇಟರ್ಗೆ ಬಂದರೆ ಈ ವರ್ಷ 250 ಚಿತ್ರಗಳು ಬಿಡುಗಡೆಯಾಗಿ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದರೂ ಆಶ್ಚರ್ಯವಿಲ್ಲ ಎನ್ನಲಾಗಿದೆ.
ಕಳೆದ ವರ್ಷದಂತೆಯೇ ಈ ವರ್ಷದ ದ್ವೀತಿಯಾರ್ಧದಲ್ಲೂ ಸ್ಟಾರ್ ಸಿನಿಮಾಗಳು ಲೈನಪ್ನಲ್ಲಿವೆ. ಯುವರಾಜಕುಮಾರ್, ಸಂಜನಾ, ಸಂಪದ ಅಭಿನಯದ "ಎಕ್ಕ' ಇದೇ ತಿಂಗಳ 18ರಂದು ತೆರೆಗೆ ಬರಲಿದೆ. ದೊಡ್ಡಮನೆ ಕುಡಿಯ ಸ್ಟಾರ್ ಪವರ್, ಗಟ್ಟಿ ಕಂಟೆಂಟ್ ಚಿತ್ರಗಳ ಮೂಲಕ ಗಮನ ಸೆಳೆದಿರುವ ನಿರ್ದೇಶಕ ರೋಹಿತ್ ಪದಕಿ, ಈಗಾಗಲೇ ವೈರಲ್ ಆಗಿರುವ ಎರಡು ಹಾಡುಗಳ ಜತೆಗೆ ಪಿಆರ್ಕೆ, ಕೆಆರ್ಜಿ ಮತ್ತು ಜಯಣ್ಣ ಫಿಲಂಸ್ ಮೂರು ನಿರ್ಮಾಣ ಸಂಸ್ಥೆಗಳು ಕೈಜೋಡಿಸಿದ್ದು, ವಿತರಣೆಯಲ್ಲೂ ಹಿಡಿತವಿರುವ ಕಾರಣ "ಎಕ್ಕ' ಓಡುವುದು ಪಕ್ಕಾ ಎನ್ನಲಾಗುತ್ತಿದೆ. ಅದಾಗುತ್ತಲೇ ಆಗಸ್ಟ್ 15ರಂದು ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ನಟಿಸಿರುವ, ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸಿರುವ "45' ತೆರೆಗೆ ಬರಲಿದೆ.
ಆ ಬಳಿಕ ಧ್ರುವ ಸರ್ಜಾ ಮತ್ತು ಪ್ರೇಮ್ ಕಾಂಬಿನೇಷನ್ನ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ "ಕೆಡಿ: ದ ಡೆವಿಲ್' ದಸರ ಹಬ್ಬಕ್ಕೆ ತೆರೆಗೆ ಬರುವ ನಿರೀೆ ಇದೆ. ಅದರ ಬೆನ್ನಲ್ಲೇ ಅ. 2ರಂದು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ, ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ಮೂಡಿಬರುತ್ತಿರುವ ಹಿಟ್ "ಕಾಂತಾರ' ಚಿತ್ರದ ಪ್ರೀಕ್ವೆಲ್ "ಚಾಪ್ಟರ್ 1' ರಿಲೀಸ್ ಆಗಲಿದೆ. ಆ ನಂತರ ವರ್ಷದಂತ್ಯಕ್ಕೆ ನಟ ದರ್ಶನ್ ಮತ್ತು "ಮಿಲನ' ಖ್ಯಾತಿಯ ಪ್ರಕಾಶ್ ವೀರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ "ಡೆವಿಲ್' ತೆರೆಗೆ ಬರಲಿದೆ.
ಕಳೆದ ವರ್ಷದ ದ್ವೀತಿಯಾರ್ಧದಲ್ಲಿ ಸ್ಟಾರ್ ಸಿನಿಮಾಗಳು ರಿಲೀಸ್ ಆಗಿ, ಉತ್ತಮ ರೀತಿಯಲ್ಲಿ ಗಳಿಕೆ ಮಾಡಿಕೊಂಡವು. ವರ್ಷದ ಪ್ರಾರಂಭದಲ್ಲಿ ನಮ್ಮ "ಛೂ ಮಂತರ್' ಕೂಡ ಯಶಸ್ವಿಯಾಯಿತು. ಈ ವರ್ಷವೂ ದ್ವೀತಿಯಾರ್ಧದಲ್ಲಿ "ಕೆಡಿ', "ಡೆವಿಲ್'ನಂತೆ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ಗೆ ಬರುವ ನಿರೀಕ್ಷೆ ಇದೆ. ಸ್ಟಾರ್ಗಳಿದ್ದರೆ ಉತ್ತಮ, ಅವರ ಜತೆಗೆ ಒಳ್ಳೆಯ ಕಂಟೆಂಟ್ ಕೂಡ ಇರಬೇಕು. ಹಾಗಿದ್ದಲ್ಲಿ ಜನ ಖಂಡಿತ ಥಿಯೇಟರ್ಗೆ ಬಂದೇ ಬರುತ್ತಾರೆ.
"ಕೆಡಿ', "ಡೆವಿಲ್', "45', "ಕಾಂತಾರ: ಚಾಪ್ಟರ್ 1', ದುನಿಯಾ ವಿಜಯ್ ಅವರ "ಮಾರುತ' ಹೀಗೆ ಕೆಲ ಸ್ಟಾರ್ ಸಿನಿಮಾಗಳು ರಿಲೀಸ್ ಆಗುವ ನಿರೀೆ ಇದೆ. ಜತೆಗೆ ಕೆಲ ಪರಭಾಷಾ ಸ್ಟಾರ್ ಚಿತ್ರಗಳೂ ಬಿಡುಗಡೆ ಆಗಲಿವೆ. ಆಗ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ನಿರೀೆಯಿದೆ. ಸಿನಿಮಾಗಳ ಸಂಖ್ಯೆ ಏನೋ ಹೆಚ್ಚಾಗುತ್ತಿದೆ. ಆದರೆ, ಸಕ್ಸಸ್ ರೇಟ್ ಕಡಿಮೆಯಾಗಿದೆ. ಅದಕ್ಕೆ ಕಾರಣ ಪೈರಸಿ ಹಾವಳಿ. ಪೈರಸಿಗೆ ಕಡಿವಾಣ ಹಾಕಿದರೆ ಮಾತ್ರ ಚಿತ್ರರಂಗದ ಬೆಳವಣಿಗೆ ಸಾಧ್ಯ. ಪೈರಸಿಯಿಂದ ಭಾರತೀಯ ಚಿತ್ರರಂಗಕ್ಕೆ 24,500 ಕೋಟಿ ರೂ. ನಷ್ಟ ಆಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
- ಉಮೇಶ್ ಬಣಕಾರ್, ನಿರ್ಮಾಪಕರ ಸಂದ ಅಧ್ಯಕ್ಷ.