ಲೆಕ್ಕಾಚಾರ ಪ್ರಕಾರ ದರ್ಶನ್​ಗೆ ಸುದೀಪ್​ ಸೋದರಮಾವ ಆಗ್ತಾರಂತೆ: ಹೇಗೆಂದು ಪ್ರಥಮ್​ ಹೇಳ್ತಾರೆ ಕೇಳಿ!

Darshan - Sudeep Final
Published on

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಒಂದು ಕಾಲದಲ್ಲಿ ಸ್ನೇಹಿತರಾಗಿ ಮಿಂಚಿದ್ದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮತ್ತು ಕಿಚ್ಚ ಸುದೀಪ್​ ದೂರಾಗಿ ವರ್ಷಗಳೇ ಕಳೆಯಿತು. ಆದರೂ ಸಹ ಇಬ್ಬರ ಅಭಿಮಾನಿಗಳು ಯಾವಾಗ ಒಂದಾಗ್ತಾರೆ ಎಂದು ಕಾಯುತ್ತಿರುವ ನಡುವೆಯೇ ನಟ ಹಾಗೂ ಬಿಗ್​ಬಾಸ್​ ವಿನ್ನರ್​ ಪ್ರಥಮ್​ ಮಾಡಿರುವ ಟ್ವೀಟ್​ ಕೂತೂಹಲಕಾರಿಯಾಗಿದೆ.

ನಿನ್ನೆ ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್​ ಹುಟ್ಟುಹಬ್ಬ ಆಚರಿಸಿಕೊಂಡರು. ಎಂದಿನಂತೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಆಪ್ತರು ಸುಮಲತಾ ಅವರಿಗೆ ಶುಭಕೋರಿದ್ದಾರೆ.

ನಟ ದರ್ಶನ್​ ಟ್ವೀಟ್​ ಮಾಡಿ ಮದರ್ ಇಂಡಿಯಾ ಸುಮಲತಾ ಅಮ್ಮರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಎಂದಿದ್ದರು. ಸುದೀಪ್​ ಸಹ ಟ್ವೀಟ್​ ಮಾಡಿ, ಆರೋಗ್ಯ ಮತ್ತು ಸಂತೋಷ ಸಿಗಲಿ. ಈ ದಿನ ನಿಮ್ಮ ಪಾಲಿಗೆ ಅದ್ಭುತ ದಿನವಾಗಲಿ ಎಂದು ಶುಭಕೋರಿ ಸುಮಲತಾ ಅಕ್ಕ ಎಂದು ಸಂಭೋದಿಸಿದ್ದರು.

ಇದೀಗ ಪ್ರಥಮ್​ ಈ ಎರಡು ಟ್ವೀಟ್​ ಅನ್ನು ಒಟ್ಟಿಗೆ ಸೇರಿಸಿ ಸಂಬಂಧವೊಂದರ ಲಾಜಿಕ್​ ಹುಡುಕಿದ್ದಾರೆ. ದರ್ಶನ್ ಅವರಿಗೆ ಆದರೆ, ಸುದೀಪ್ ಅವರಿಗೆ ಅಕ್ಕ‌. ಹಾಗಾದ್ರೆ ಲೆಕ್ಕಾಚಾರ ಪ್ರಕಾರ ದರ್ಶನ್​ ಸರ್​ಗೆ ಸುದೀಪ್​ ಸರ್​ ಸೋದರಮಾವ ಆಗ್ತಾರೆ. ಅಂತು ನಮ್ಮ ಸಿನಿಮಾ ಇಂಡಸ್ಟ್ರಿ ಒಂದೇ ಕುಟುಂಬ ಅನ್ನೋದು ನಿಜ ಆಯ್ತು ಎಂದಿದ್ದಾರೆ. ಅಲ್ಲದೆ, ಸುಮಲತಾರಿಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿರುವ ಪ್ರಥಮ್​, ನಮ್ಮಮ್ಮನಿಗಿಂತ ಸ್ವಲ್ಪ ದೊಡ್ಡವರು ನೀವು‌. ಹೀಗಾಗಿ ನಾನು ದೊಡ್ಡಮ್ಮನ್ನ ಅಂತೀನಿ ಎಂದಿದ್ದಾರೆ. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net