ಪ್ರೇಮ್ ಹುಟ್ಟುಹಬ್ಬಕ್ಕೆ ಸ್ಯಾಂಡಲ್​ವುಡ್​ ಶುಭ ಹಾರೈಕೆ

Prem Final
Published on

ಇಂದು ಪ್ರೇಮ್ ಹುಟ್ಟುಹಬ್ಬ. ಲಾಕ್‌ಡೌನ್‌ನಿಂದಾಗಿ ಈ ಬಾರಿ ಬರ್ಥ್‌ಡೇ ಸಂಭ್ರಮ ಇರಲಿಲ್ಲವಾದರೂ, ಸ್ಯಾಂಡಲ್‌ವುಡ್‌ನ ಹಲವು ಸೆಲೆಬ್ರಿಟಿಗಳು ಪ್ರೇಮ್‌ಗೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸುವ ಮೂಲಕ, ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಪ್ರಮುಖವಾಗಿ, ಪ್ರೇಮ್ ಬಹಳ ಗೌರವ ಕೊಡುವ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ತಾಯಿ ಚಾಮುಂಡೇಶ್ವರಿ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದ್ದಾರೆ. ದರ್ಶನ್ ಅಲ್ಲದೆ ಜಗ್ಗೇಶ್, ಶರಣ್, ಸತೀಶ್ ನೀನಾಸಂ, ಕೃತಿ ಖರಬಂದ, ತರುಣ್ ಸುಧೀರ್, ಪ್ರಶಾಂತ್ ರಾಜ್ ಸೇರಿದಂತೆ ಹಲವರು ಪ್ರೇಮ್ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ.

ಇದಲ್ಲದೆ ಪ್ರೇಮ್, ಶನಿವಾರ ಸಂಜೆ ಐದಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬರುವುದಾಗಿ ನಿನ್ನೆಯೇ ಹೇಳಿದ್ದರು. ಯಾರು ಬೇಕಾದರೂ ಲೈವ್ ಬಂದು ಶುಭ ಹಾರೈಸುವುದರ ಜತೆಗೆ, ಮಾತನಾಡಬಹುದು ಎಂದಿದ್ದರು. ಅದರಂತೆ ಲೈವ್ ಬಂದ ಪ್ರೇಮ್‌ಗೆ ಹಲವರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಇನ್ನು ಪ್ರೇಮ್ ಹುಟ್ಟುಹಬ್ಬದ ಅಂಗವಾಗಿ, ‘ಪ್ರೇಮಂ ಪೂಜ್ಯಂ’ ತಂಡವು, ಒಂದು ಲಿರಿಕಲ್ ಹಾಡನ್ನು ಉಡುಗೊರೆಯಾಗಿ ಬಿಡುಗಡೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net