

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ರಿಯಾಲಿಟಿ ಶೋಗಳಾಯಿತು, ಕ್ರಿಕೆಟ್, ಬ್ಯಾಡ್ಮಿಂಟನ್, ಕಬಡ್ಡಿ, ಬೌಲಿಂಗ್ ಮಾಡಿದ್ದೂ ಆಯ್ತು... ಇದೀಗ ಸ್ಯಾಂಡಲ್ವುಡ್ ತಾರೆಯರು ಲುಡೋ ಸ್ಪರ್ಧಾವಳಿಗೆ ರೆಡಿಯಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ನಲ್ಲಿ ಪ್ರೋ ಲುಡೋ ಸ್ಟಾರ್ ಲೀಗ್ ಆಯೋಜಿಸಲಾಗುತ್ತಿದೆ. 40x40 ಚದರ ಅಡಿಯ ವರ್ಣರಂಜಿತ ಒಳಾಂಗಣ ಅಖಾಡದಲ್ಲಿ ಲುಡೋ ಆಟ ಅಷ್ಟೇ ಆಕರ್ಷಕವಾಗಿರಲಿದೆ. ಈ ಲೀಗ್ ನಲ್ಲಿ ಒಟ್ಟು ಎಂಟು ತಂಡಗಳಿದ್ದು, ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿರುವ 16 ತಾರೆಯರು ಈ ಎಂಟು ತಂಡಗಳಲ್ಲಿ ಇಬ್ಬರಂತೆ ಇರುತ್ತಾರೆ. ಇವರಲ್ಲದೆ 16 ಜನ ಮಾಡಲ್ಗಳು ಕೂಡ ಈ ಸ್ಪರ್ಧಾವಳಿಯ ಭಾಗವಾಗಲಿದ್ದಾರೆ.
ಅರುಣ್ ಹರಿಹರನ್ ಮತ್ತು ಜಾಹ್ನವಿ ಈ ಲುಡೋ ಸ್ಟಾರ್ ಲೀಗ್‌ನ ನಿರೂಪಣೆ ಮಾಡಲಿದ್ದಾರೆ. ಪ್ರತಿ ಪಂದ್ಯಕ್ಕೂ ಮೊದಲು ಮತ್ತು ನಂತರ ಆಟಗಾರರೊಂದಿಗೆ ಆಕರ್ಷಕವಾದ ಕಾಮೆಂಟರಿ, ಉತ್ಸಾಹಭರಿತ ಸಂವಾದಗಳೊಂದಿಗೆ ವೀಕ್ಷಕರನ್ನು ಈ ಜೋಡಿ ಆಕರ್ಷಿಸಲಿದೆ. ಡೈಸ್ ಹಾಕಿದಾಗ ಕಾಯಿನ್ ಬದಲು ಕಾಯಿನ್ ಗರ್ಲ್ಸ್ ಮೂವ್ ಆಗಲಿರುವುದು ಈ ಸ್ಪರ್ಧೆಯ ವಿಶೇಷ. ಸಿನಿಮಾ ತಾರೆಯರಿರುವ ಮನರಂಜನಾತ್ಮಕ ಲುಡೋ ಸ್ಪರ್ಧೆಗಳಾದ ಕಾರಣ ಮಾಮೂಲಿ ಲುಡೋ ಆಟದ ನಿಯಮ ಬದಲಿಸಲಾಗಿದೆ.
ಎಂಟು ತಂಡಗಳ ವಿವರ ಹಾಗೂ ಅದರಲ್ಲಿ ಆಡುವ ಸ್ಟಾರ್ ಆಟಗಾರರ ಹೆಸರುಗಳು ಹೀಗಿದೆ.
1.ಪ್ರೌಡ್ ತುಳುವರು - ನವೀನ್ ಡಿ ಪಡೀಲ್ ಮತ್ತು ಸುಂದರ್ ರೈ ಮಂದಾರ
2. ಮಿಮಿಕ್ರಿ ಮ್ಯಾಜಿಕ್ - ಮಿಮಿಕ್ರಿ ಗೋಪಿ ಮತ್ತು ವಿನುತ
3. ಟ್ವಿನ್ ಸ್ಟಾರ್ಸ್- ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ
4. ದಿ ಪವರ್ ಕಪಲ್ - ತುಕಾಲಿ ಸಂತೋಷ್ ಮತ್ತು ಮಾನಸ ಸಂತೋಷ್
5. ಲಾಫ್ಟರ್ ಲೆಜೆಂಡ್ಸ್ - ಮಂಜು ಪಾವಗಡ ಮತ್ತು ಹುಲಿ ಕಾರ್ತಿಕ್
6. ಮಲೆನಾಡು ಕ್ವೀನ್ಸ್ - ಚಂದನ ಗೌಡ ಮತ್ತು ಅಮೃತ
7. ಗೌಡ ವಾರಿಯರ್ಸ್ - ಕೆಂಪೇಗೌಡ ಮತ್ತು ಮಾನ್ಯ ಗೌಡ
8. ದಿ ಡ್ರೀಮರ್ಸ್ - ಸೀತಾರಾಮ್ ಮತ್ತು ಸಾಕ್ಷಿ ಮೇಘನ