2ನೆಯ ಅಲೆಯ ನಂತರದಲ್ಲಿ ಸ್ಯಾಂಡಲ್​ವುಡ್​: ನಾವೆಷ್ಟು ಸಿದ್ಧರಿದ್ದೇವೆ?

Sudeep Rakshit
Published on

ಮೊದಲ ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಒಂದಿಷ್ಟು ಚಿತ್ರಗಳ ಬಗ್ಗೆ ಪ್ರೇಕ್ಷಕರ ನಿರೀೆ ಹೆಚ್ಚಿತ್ತು. ಎರಡನೇ ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಯಾವೆಲ್ಲ ಚಿತ್ರಗಳ ಬಗ್ಗೆ ಜನರಿಗೆ ನಿರೀೆ ಇದೆ ಮತ್ತು ಆ ಚಿತ್ರಗಳ ಬಿಡುಗಡೆ ಯಾವಾಗ?

ಕರೊನಾ 2ನೇ ಅಲೆಯಿಂದ ಪ್ರಾರಂಭವಾದ ಲಾಕ್​ಡೌನ್​ ಹಂತಹಂತವಾಗಿ ಸಡಿಲಗೊಳ್ಳುತ್ತಿದೆ. ಮುಂದಿನ 15 ದಿನಗಳಲ್ಲಿ ಚಿತ್ರೀಕರಣ ಚಟುವಟಿಕೆ ಗಳಿಗೆ ಅವಕಾಶ ನೀಡುವ ಸಾಧ್ಯತೆ ಇದ್ದು, ಜುಲೈ ಕೊನೆಯ ವಾರ ಅಥವಾ ಆಗಸ್ಟ್​ನಲ್ಲಿ ಚಿತ್ರಪ್ರದರ್ಶನ ಸಹ ಪ್ರಾರಂಭವಾಗುವ ನಿರೀೆ ಇದೆ. ಕರೊನಾ ಕೇಸ್​ಗಳು ಇನ್ನಷ್ಟು ತಗ್ಗಿದರೆ, ಕರ್ನಾಟಕದಲ್ಲೂ ಮೊದಲಿಗೆ ಶೇ. 50ರಷ್ಟು ಹಾಜರಾತಿಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇನ್ನು, ಶೇ. 100ರಷ್ಟು ಹಾಜರಾತಿಗೆ ಅನುಮತಿ ಬೇಕೆಂದರೆ, ಇನ್ನೆರೆಡು ತಿಂಗಳು ಬೇಕಾಗಬಹುದು. ಅಲ್ಲಿಗೆ ಅಕ್ಟೋಬರ್​ ಹೊತ್ತಿಗೆ, ಚಿತ್ರರಂಗದಲ್ಲಿ ಮತ್ತೆ ಪೂರ್ಣಪ್ರಮಾಣದ ಚಟುವಟಿಕೆಗಳು ಪ್ರಾರಂಭ ವಾಗಲಿವೆ. 3ನೆಯ ಅಲೆ ಎದುರಾದರೆ, ಆಗ ಇನ್ನಷ್ಟು ವಿಳಂಬವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಎಲ್ಲ ಸರಿ, ಚಿತ್ರಪ್ರದರ್ಶನಕ್ಕೆ ಅನುಮತಿ ಸಿಕ್ಕರೆ, ಕನ್ನಡ ಚಿತ್ರರಂಗವು ಪ್ರೇಕ್ಷಕರನ್ನು ಬರಮಾಡಿಕೊಳ್ಳುವುದಕ್ಕೆ ಎಷ್ಟರ ಮಟ್ಟಿಗೆ ತಯಾರಿದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಮೊದಲನೆಯ ಲಾಕ್​ಡೌನ್​ ಮುಗಿದ ಮೇಲೆ ಕೆಲವು ಹೊಸ ಚಿತ್ರಗಳು ಬಿಡುಗಡೆ ಯಾದರೂ, ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಬರಮಾಡಿಕೊಳ್ಳುವುದಕ್ಕೆ "ಪೊಗರು' ಬಿಡುಗಡೆಯಾಗುವವರೆಗೂ ಕಾಯಬೇಕಾಯಿತು. ಹಾಗೆ ನೋಡಿದರೆ, ಮೊದಲ ಲಾಕ್​ಡೌನ್​ ಮುಗಿದ ಮೇಲೆ ಚಿತ್ರರಂಗದವರು ಮತ್ತು ಪ್ರೇಕ್ಷಕರು ಮೂರು ಪ್ರಮುಖ ಚಿತ್ರಗಳ ಮೇಲೆ ನಿರೀೆ ಇಟ್ಟಿದ್ದರು. "ಪೊಗರು', "ರಾರ್ಬಟ್​' ಮುತ್ತು "ಯುವರತ್ನ' ಚಿತ್ರಗಳು ಚಿತ್ರಮಂದಿರಗಳಿಗೆ ದೊಡ್ಡ ಮಟ್ಟದ ಪ್ರೇಕ್ಷಕರನ್ನು ಕರೆತರುವುದಕ್ಕೆ ಸಾಧ್ಯವಾದರೆ, ಆ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ನಂಬಿದ್ದರು. ಆದರೆ, ಕರೊನಾ ಎರಡನೆಯ ಅಲೆಯಿಂದಾಗಿ ಮತ್ತೆ ಮೊದಲಿನ ಸ್ಥಿತಿಗೆ ವಾಪಸ್ಸು ಬಂದಂತಾಗಿದೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತರುವ ಜತೆಗೆ ಚಿತ್ರರಂಗಕ್ಕೆ ಹೊಸ ಶಕ್ತಿ ತುಂಬುವ ಶಕ್ತಿ ಯಾವೆಲ್ಲ ಚಿತ್ರಗಳಿಗಿದೆ ಎಂದು ಹುಡುಕಿದರೆ, ಕಣ್ಮುಂದೆ ನಾಲ್ಕಾರು ಚಿತ್ರಗಳು ಸಿಗುತ್ತವೆ. ಪ್ರಮುಖವಾಗಿ ಎಷ್ಟೇ ಚಿತ್ರಗಳು ಬಿಡುಗಡೆಯಾದರೂ, ಪ್ರೇಕ್ಷಕರನ್ನು ಸೆಳೆಯಲು ಕಮರ್ಷಿಯಲ್​ ಮತ್ತು ಪ್ರೇಕ್ಷಕರಲ್ಲಿ ನಿರೀೆ ಹುಟ್ಟುಹಾಕಿರುವ ಚಿತ್ರಗಳೇ ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಯಶ್​ ಅಭಿನಯದ "ಕೆಜಿಎ್​ 2', ಸುದೀಪ್​ ಅಭಿನಯದ "ಕೋಟಿಗೊಬ್ಬ 3' ಮತ್ತು "ವಿಕ್ರಾಂತ್​ ರೋಣ', ರತ್​ ಶೆಟ್ಟಿ ಅಭಿನಯದ "777 ಚಾರ್ಲಿ', ಶಿವರಾಜಕುಮಾರ್​ ಅಭಿನಯದ "ಭಜರಂಗಿ 2', "ದುನಿಯಾ' ವಿಜಯ್​ ಅಭಿನಯದ "ಸಲಗ' ಚಿತ್ರಗಳು ಸಿಗುತ್ತವೆ. ಈ ಎಲ್ಲ ಚಿತ್ರಗಳ ಚಿತ್ರೀಕರಣವೂ ಮುಗಿದಿದ್ದು, ಬಿಡುಗಡೆಗೆ ಸಿದ್ಧತೆ ನಡೆಸಿವೆ. ಈ ಪೈಕಿ "ಕೆಜಿಎ್​ 2' ಮತ್ತು "ವಿಕ್ರಾಂತ್​ ರೋಣ' ಚಿತ್ರಗಳ ಬಿಡುಗಡೆಯ ದಿನಾಂಕಗಳನ್ನೂ ಘೋಷಿಸಲಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಎರಡೂ ಚಿತ್ರಗಳು ಆ ದಿನಾಂಕಗಳಂದು ಬಿಡುಗಡೆಯಾಗುವ ಸಂಶಯವಿದ್ದು, ಮುಂದಕ್ಕೆ ಹೋಗುವ ನಿರೀೆ ಇದೆ. ಆದರೆ, ಸದ್ಯಕ್ಕಂತೂ ಎರಡೂ ಚಿತ್ರತಂಡಗಳು ಹೊಸ ದಿನಾಂಕವನ್ನು ಘೋಷಿಸಿಲ್ಲ. ಹಾಗಾಗಿ, ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಒಂದಿಷ್ಟು ನಿರೀತ ಚಿತ್ರಗಳಿವೆಯಾದರೂ, ಎಲ್ಲವೂ ಮೊದಲಿನಂತಾಗುವುದಕ್ಕೆ ಕನಿಷ್ಠ ಮೂರು ತಿಂಗಳಾದರೂ ಬೇಕು.

ಹಬ್ಬದ ಸೀಸನ್​ಗೆ ಡಿಮ್ಯಾಂಡ್​

ಹಬ್ಬದ ಸೀಸನ್​ನಲ್ಲಿ ದೊಡ್ಡ ಚಿತ್ರಗಳನ್ನು ಬಿಡುಗಡೆ ಮಾಡಿದರೆ ಅನುಕೂಲ ಎಂಬ ನಂಬಿಕೆ ಚಿತ್ರರಂಗದಲ್ಲಿ ಇರುವುದರಿಂದ, ಆ ಸಮಯದಲ್ಲಿ ಬಿಡುಗಡೆಗೆ ಹೆಚ್ಚು ಪ್ರಾಶಸ. ಈ ಬಾರಿ ವರಮಹಾಲಕ್ಷಿ$್ಮ ಹಬ್ಬಕ್ಕೆ ದೊಡ್ಡ ಚಿತ್ರಗಳನ್ನು ನಿರೀಸುವುದು ಕಷ್ಟ. ಇನ್ನು, ಗಣೇಶ ಹಬ್ಬ (ಸೆ.10), ವಿಜಯದಶಮಿ (ಅ.15) ಮತ್ತು ದೀಪಾವಳಿ (ನ.04) ಸಂದರ್ಭದಲ್ಲಿ ಬಿಗ್​ ಬಜೆಟ್​ನ ಮತ್ತು ನಿರೀತ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ, ಬೇರೆ ಭಾಷೆಗಳ ಪ್ಯಾನ್​ ಇಂಡಿಯಾ ಸಿನಿಮಾಗಳು ಸಹ ಹಬ್ಬದ ಸೀಸನ್​ ಮೇಲೆ ಕಣ್ಣಿಟ್ಟಿರುವಾಗ, ಪೈಪೋಟಿ ಜಾಸ್ತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net