ಚಂದನವನದ ಕಾಮಿಡಿ ಕಿಂಗ್ ಚಿಕ್ಕಣ ಮದುವೆ ಡೇಟ್​​ ಫಿಕ್ಸ್!​; ಆ.29ರಂದು ಉಪಾಧ್ಯಕ್ಷನ ಕೈ ಹಿಡಿಯೋ ಹುಡ್ಗಿ ಇವರೇ ನೋಡಿ..Chikkanna Marriage

Chikkanna Marriage
Chikkanna Marriage
Published on

ಪ್ರಮುಖ ಮುಖ್ಯಾಂಶಗಳು

  • ಚಂದನವನದ ಖ್ಯಾತ ಹಾಸ್ಯ ನಟ ಚಿಕ್ಕಣ ಮದವೆ ಡೇಟ್​ ಫಿಕ್ಸ್
  • ಆಗಸ್ಟ್​ 29 ಹಾಗೂ 30ರಂದು ಮೈಸೂರಿನ ಸ್ಪ್ರೆಕ್ಟ್ರಾ ಕನ್ವೆನ್ಷನ್​ ಹಾಲ್​ನಲ್ಲಿ ಮದುವೆ
  • ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿ ಪಾವನಾ ಜೊತೆ ಮದುವೆ
Chikkanna Marriage: ಕಿರಾತಕ, ರಾಜಾಹುಲಿ, ಅಧ್ಯಕ್ಷ, ಉಪಾಧ್ಯಕ್ಷ ಸಿನಿಮಾ ಮೂಲಕ ತಮ್ಮದೇ ರೀತಿಯ  ಹಾಸ್ಯದ ಮೂಲಕ ಕನ್ನಡಿಗರನ್ನು ನಕ್ಕು ನಗಿಸುತ್ತಿದ್ದ ಚಂದನವನದ ಖ್ಯಾತ ಹಾಸ್ಯ ನಟ ಚಿಕ್ಕಣ ಮದವೆ ಡೇಟ್​ ಫಿಕ್ಸ್​ ಆಗಿದೆ. ಆಗಸ್ಟ್​ 29ರಂದು ಮಹದೇವಪುರ ಮೂಲದ ಎಂಜಿನಿಯರಿಂಗ್​ ಪದವೀಧರೆ ಪಾವನಾ ಎನ್ನುವವರ ಜೊತೆಗೆ ಹಸೆಮಣೆ ಏರಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಈ ಹಿಂದೆ ಚಿಕ್ಕಣ್ಣ ಅವರು ಅನುಶ್ರೀ ಅವರೊಂದಿಗೆ ಮದುವೆ ಮಾಡಿಕೊಳ್ಳುತ್ತಾರೆ ಎನ್ನುವ ವದಂತಿ ಹರಿದಾಡಿತ್ತು.  'ಆ ಊಹಾಪೋಹದ ಬಳಿಕ ನನ್ನ ಬಳಿ ಮಾತನಾಡುತ್ತಲೇ ಇಲ್ಲ' ಎಂದು ಅನುಶ್ರೀ ಅವರು  ಬೇಸರ ವ್ಯಕ್ತಪಡಿಸಿದರು. ಸದ್ಯ ಕೊನೆಗೂ  ಹಾಸ್ಯನಟ ಚಿಕ್ಕಣ್ಣ ತಮ್ಮ ಫ್ಯಾನ್ಸ್​ಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ.

ಪಾವನಾ ಜೊತೆಗೆ ಟೆಂಪಲ್​ ರನ್

ಇತ್ತೀಚೆಗೆ ಪಾವನಾ ಜೊತೆಗೆ ಚಿಕ್ಕಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎಂಗೇಜ್ಮೆಂಟ್​ನ ಫೋಟೋ ವೈರಲ್​ ಆಗಿತ್ತು. ಅಲ್ಲದೆ ಇಬ್ಬರು ಒಟ್ಟಾಗಿ ದೇವಸ್ಥಾನಕ್ಕೆ ಹೋಗಿದ್ದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಸದ್ಯ ಎಲ್ಲ  ವದಂತಿಗೂ ಬ್ರೇಕ್​ ಬಿದ್ದಿದೆ.  ಬ್ಯಾಚುಲರ್​ ಚಿಕ್ಕಣ್ಣ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

ಮದುವೆ ಯಾವಾಗ

ಇದೇ ಆಗಸ್ಟ್​ 29 ಮತ್ತು 30ರಂದು ಚಿಕ್ಕಣ್ಣ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಮೈಸೂರಿನ ಸ್ಪ್ರೆಕ್ಟ್ರಾ ಕನ್ವೆನ್ಷನ್​ ಹಾಲ್​ನಲ್ಲಿ  ಸಮಾರಂಭ ನಡೆಯಲಿದ್ದು ನಟನ ಆಪ್ತರು, ಸಂಬಂಧಿಕರು ಹಾಗೂ ಸೆಲಬ್ರೆಟಿಗಳು  ಭಾಗಿಯಾಗಲಿದ್ದಾರೆ ಎನ್ನಲಾಗಿದೆ. 

ಆಹ್ವಾನ ಪತ್ರಿಕೆ ಹಂಚುವ ಬ್ಯುಸಿ

ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮಿಗೆ ಈಗಾಗಲೇ ನಟ ಚಿಕ್ಕಣ್ಣ ಹಾಗೂ ಅವರ ಭಾವಿ ಪತ್ನಿ ಪಾವಾನ ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇನ್ನೂ ಸ್ಯಾಂಡಲ್​ವುಡ್​ನ ತಮ್ಮ ಸ್ನೇಹಿತರಿಗೆ ಇನ್ವಿಟೇಶನ್​ ಕೊಡುವ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ

ಈ ಪಾವನಾ ಯಾರು?

ಪಾವನಾ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿ. ಇಂಜಿನಿಯರಿಂಗ್‌ ಪದವೀಧರೆಯಾಗಿರುವ ಪಾವನಾ, ಉದ್ಯಮಿ ಎನ್ನುವ ಬಗ್ಗೆ ಮಾಹಿತಿ ಇದೆ,. ಸದ್ಯ ಇವರೆ ಚಿಕ್ಕಣ್ಣನ ಕೈ ಹಿಡಿಯಲಿರುವ ಯುವತಿ ಎನ್ನುವ ಮಾಹಿತಿ ಇದೆ.
ಇನ್ನು ಚಿಕ್ಕಣ್ಣ ಹೆಚ್ಚೇನು ಓದಿಲ್ಲ ಮೈಸೂರಿನ ಬಲ್ಲಹಳ್ಳಿಯಲ್ಲಿ ಜನಿಸಿದ  ಅವರು ಎಸ್ಸೆಸ್ಸೆಲ್ಸಿ ಬಳಿಕ ಗಾರೆ ಕೆಲಸ ಮಾಡ್ತಾ ಜೀವನ ಸಾಗಿಸುತ್ತಿದ್ದರು.  ಶಾಲಾ ದಿನಗಳಿಂದಲೇ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಅಲ್ಲದೇ ಹಲವಾರು ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ಹಾಸ್ಯ ಪಾತ್ರಗಳನ್ನೂ ಮಾಡುತ್ತಿದ್ದರು. ಸದ್ಯ ಕನ್ನಡದ ಖ್ಯಾತ ಹಾಸ್ಯನಟರಾಗಿ ಹೊರಹೊಮ್ಮಿದ್ದಾರೆ

ಚಿಕ್ಕಣ್ಣ ನಟಿಸಿದ ಸಿನಿಮಾಗಳಿವು

ಫಾರೆಸ್ಟ್, ಮಾಸ್ಟರ್​ ಪೀಸ್, ರ್ಯಾಂಬೋ2, ಚೌಕ, ರಾಜ್​ ವಿಷ್ಣು, ಕಿರಾತಕ, ಕ್ವಾಟ್ಲೆ ಸತೀಶ,  ಮನೆ ಮಾರಾಟಕ್ಕಿದೆ, ರಾಜಾ ಹುಲಿ, ಬೆಂಗಳೂರು 560023, ಅಂಜದ ಗಂಡು, ರೈಡರ್, ರಾಬರ್ಡ್​, ಸೀತಾರಾಮ ಕಲ್ಯಾಣ, ಮಾರ್ಟಿನ್​​, ಬುಲ್​ಬುಲ್​, ಲಕ್ಕಿ ಸೇರಿದಂತೆ ನಾನಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಉಪಾಧ್ಯಕ್ಷ ಸಿನಿಮಾದಲ್ಲಿ ನಟನಾಗಿ ಬಣ್ಣ ಹಚ್ಚಿದ್ದಾರೆ. ಲಕ್ಷ್ಮೀ ಪುತ್ರ ಸಿನಿಮಾವು ರಿಲೀಸ್​ಗೆ ಸಜ್ಜಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net