

ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ನಟ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಮೈಸೂರು ಮೂಲದ ವಿವೇಕ ನಿರ್ದೇಶಿಸುತ್ತಿದ್ದು, ಸಂಚಿತ್‌ಗೆ ಜೋಡಿಯಾಗಿ ‘ಕೆಟಿಎಂ’,‘ಪೆಪೆ’ ಖ್ಯಾತಿಯ ಕರಾವಳಿ ಪ್ರತಿಭೆ ಕಾಜಲ್ ಕುಂದರ್ ನಟಿಸುತ್ತಿದ್ದಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿಸಲಾಯಿತು. ಸಂಚಿತ್ ಮೊದಲ ಸಿನಿಮಾಕ್ಕೆ ನಟ ಸುದೀಪ್ ಕ್ಲ್ಯಾಪ್ ಮಾಡಿದರೆ, ಆಶ್ವಿನಿ ಪುನೀತ್ ರಾಜಕುಮಾರ್ ಕ್ಯಾಮರಾ ಆನ್ ಮಾಡಿ ಚಾಲನೆ ನೀಡಿದರು. ವಿವೇಕ, ‘ಇದು ಮೈಸೂರು ಮೂಲದ ಕ್ರೈಮ್ ಥ್ರಿಲ್ಲರ್ ಕಥೆ. 2001ರಿಂದ 2011ರವರೆಗೆ ನಡೆದ ಘಟನೆಗಳು ಈ ಸಿನಿಮಾದಲ್ಲಿವೆ. ಕಥೆ ಕೇಳಿ ಇಂಪ್ರೆಸ್ ಆದ ಸಂಚಿತ್ ಮೊದಲ ಭೇಟಿಯಲ್ಲಿಯೇ ಒಪ್ಪಿಕೊಂಡರು. ಆದರೆ, ಸುದೀಪ್ ಅವರಿಗೆ ಕಥೆ ಹೇಳಿದ್ದು, ಥ್ರಿಲ್ಲಿಂಗ್ ಅನುಭವ’ ಎಂದರು. ನಾಯಕ ಸಂಚಿತ್, ‘ಕಥೆ ಕೇಳಿ ಇಂಪ್ರೆಸ್ ಆದೆ. ಈ ಕಥೆಯ ಮೂಲಕ ಮೈಸೂರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದೇನೆ. ಧನಂಜಯ್ ಸರ್‌ಗೆ ಧನ್ಯವಾದ ಹೇಳಲೇಬೇಕು. ಈ ಚಿತ್ರಕ್ಕೆ ಅವರೇ ನನ್ನ ಹೆಸರು ಸೂಚಿಸಿದ್ದು’ ಎಂದರು. ನಾಯಕಿ ಕಾಜಲ್, ‘ಸಂಚಿತ್ ಜತೆ ಕೆಲಸ ಮಾಡಲು ಎಕ್ಸೈಟ್ ಆಗಿದ್ದೀನಿ. ನಮ್ಮ ತಂಡದಿಂದ ಉತ್ತಮ ಸಿನಿಮಾ ನಿರೀಕ್ಷೆ ಮಾಡಬಹುದು’ ಎಂದರು. ಮಯೂರ್ ಪಟೇಲ್ ಮುಖ್ಯಪಾತ್ರದಲ್ಲಿದ್ದಾರೆ. ವಿಜಯ ರಾಘವೇಂದ್ರ ಅಕ್ಕನ ಮಗ ಜಯ್, ಬಿಗ್‌ಬಾಸ್ ಹಂಸ, ಮಾಲಾಶ್ರೀ ಕಲಾ ಬಳಗದಲ್ಲಿದ್ದಾರೆ. ೆ.5ರ ಸಂಚಿತ್ ಹುಟುಹಬ್ಬದಂದು ಚಿತ್ರದ ಸ್ಟ್-ಲುಕ್ ಹಾಗೂ ಟೈಟಲ್ ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಇರಲಿದೆ. ಕೆಆರ್‌ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಿಸುತ್ತಿವೆ.