ಸಂಚಾರಿ ವಿಜಯ್​ ಅವರ ಲಾಕ್​ಡೌನ್ ಸಿನಿಮಾ; ವೈರಸ್ - ಪ್ರಸ್ತುತತೆಯ ಪಾಠ

page 10 3
Published on

ಬೆಂಗಳೂರು: ಸದ್ಯದ ಸ್ಥಿತಿಯಲ್ಲಿ ಹೇಳಿ ಮಾಡಿಸಿದ ಸಿನಿಮಾ ಎಂದರೆ ಅದು ಮಲಯಾಳಂನ ‘ವೈರಸ್’. 2018ರಲ್ಲಿ ಕೇರಳಲ್ಲಿ ನಿಫಾ ವೈರಸ್ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆ ಹಿನ್ನೆಲೆ ಇಟ್ಟುಕೊಂಡು ನಿರ್ದೇಶಕ ಆಶಿಕಿ ಅಬು ಸೃಷ್ಟಿಸಿದ ಕಥೆ ನಿಜಕ್ಕೂ ರೋಚಕವಾಗಿದೆ.

ಸದ್ಯ ಕರೊನಾದಿಂದಾಗಿ ನಾವೆಲ್ಲ ಏನೆಲ್ಲ ನೋಡುತ್ತಿದ್ದೆವೋ, ಅದೆಲ್ಲವೂ ಆ ವೈರಸ್ ಸಿನಿಮಾದಲ್ಲಿದೆ. ಹಾಗಾಗಿ ನಾನೂ ಸಹ ಓದುಗರಿಗೆ ಅದೇ ಸಿನಿಮಾ ನೋಡುವಂತೆ ಸಜೆಸ್ಟ್ ಮಾಡುತ್ತೇನೆ. ಜಕಾರಿಯಾ ಎಂಬಾತ ವೈರಸ್ ಅಂಟಿಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಾನೆ. ಕೆಲ ಗಂಟೆಗಳ ಬಳಿಕ ಸಾವನ್ನಪ್ಪುತ್ತಾನೆ. ಆ ಸಾವಿನ ನಿಗೂಢತೆಯನ್ನು ಹುಡುಕುತ್ತ ಹೋಗುತ್ತಿದ್ದಂತೆ ಅದು ನಿಫಾ ವೈರಸ್ ಎಂದು ಗೊತ್ತಾಗುತ್ತದೆ. ಬಳಿಕ ಅದೇ ಸೋಂಕು ಮತ್ತೊಂದಿಷ್ಟು ಮಂದಿಗೆ ಹರಡಿರುತ್ತದೆ. ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಾಗಿದೆ ಎಂಬುದನ್ನು ಸಿನಿಮಾದಲ್ಲಿ ನಿರ್ದೇಶಕರು ಅಷ್ಟೇ ನೈಜವಾಗಿ ತೋರಿಸಿದ್ದಾರೆ.

ಐಸೋಲೇಶನ್, ಪ್ರಾಥಮಿಕ ಸಂಪರ್ಕ ಹೀಗೆ ಎಲ್ಲವೂ ಚಿತ್ರದಲ್ಲಿ ಕಾಣಿಸುತ್ತದೆ. ಹಾಗಾಗಿ ಪ್ರಸ್ತುತತೆ ಬಗ್ಗೆ ಸಿನಿಮಾ ನೋಡುವವರಿಗೆ ಇದೊಂದು ಒಳ್ಳೆಯ ಸಿನಿಮಾ.

| ಸಂಚಾರಿ ವಿಜಯ್ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net