Photo Gallery| ಬರ್ತಡೇ ಖುಷಿಯಲ್ಲಿ ಸಂಯುಕ್ತಾ: ಸ್ಯಾಂಡಲ್ವುಡ್ ಬೆಡಗಿಯ ಮುದ್ದಾದ ಚಿತ್ರಗಳು
Published on:
Copied
Follow Us
ಸ್ಯಾಂಡಲ್ವುಡ್ ಬೆಡಗಿ ಸಂಯುಕ್ತಾ ಹೊರನಾಡು ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳಿಂದ ಶುಭಾಯಗಳ ಮಹಾಪೂರವೇ ಹರಿದು ಬರುತ್ತಿದೆ.
ಸಂಯುಕ್ತಾ ಅವರ ತಾಯಿ ಸುಧಾ ಬೆಳವಾಡಿಯೂ ಸಹ ಮುಂಗಾರು ಮಳೆ ಸೇರಿದಂತೆ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮೀಡಿಯಾ, ಇಂಗ್ಲಿಷ್ ಮತ್ತು ಸೈಕಾಲಜಿ ವಿಭಾಗದಲ್ಲಿ ಪದವಿ ಪೂರ್ವ ಅಧ್ಯಯನ ಮಾಡಿದ ಸಂಯುಕ್ತಾ, ಮಾಡೆಲಿಂಗ್ ಕ್ಷೇತ್ರದ ಕಡೆಗೆ ಒಲವು.
ಟಿವಿ ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸಿದ ಸಂಯುಕ್ತಾ ಬಳಿ ಕನ್ನಡ ಚಿತ್ರರಂಗದ ನಟಿಯಾಗಿ ಹೊರಹೊಮ್ಮಿದರು.
ಆ ದಿನಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರೂ ಹೆಸರು ತಂದುಕೊಟ್ಟಿದ್ದು ದಿಗಂತ್ ಅಭಿನಯದ ಲೈಫು ಇಷ್ಟೇನೆ ಚಿತ್ರ. ಇದು ಬಾಕ್ಸ್ ಆಫೀಸ್ನಲ್ಲೂ ಭಾರಿ ಸದ್ದು ಮಾಡಿತು.
ಲೈಫು ಇಷ್ಟೇನೆ ಚಿತ್ರಕ್ಕಾಗಿ ಸೌಥ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ (ಸೈಮಾ) ಸೇರಿದಂತೆ ಅನೇಕ ಸಿನಿಮಾ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಚೊಚ್ಚಲ ನಟಿಯಾಗಿ ಆಯ್ಕೆ.
ಸಂಯಕ್ತಾ ಅವರಿಗೆ ಶ್ವಾನಗಳೆಂದರೆ ಬಲು ಪ್ರೀತಿ. ಅದು ಬೆಳ್ಳಿ ಪರದೆಯಲ್ಲೂ ನಾನು ಮತ್ತು ಗುಂಡಾ ಚಿತ್ರದ ಮೂಲಕ ಸಾಬೀತಾಗಿದೆ.
ಹಲವು ಸಮಾಜಮುಖಿ ಕಾರ್ಯಗಳಲ್ಲಿಯೂ ಸಂಯುಕ್ತಾ ತೊಡಗಿಸಿಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಸ್ಯಾಂಡಲ್ವುಡ್ ಬೆಡಗಿ ಸಂಯುಕ್ತಾ ಹೊರನಾಡು ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳಿಂದ ಶುಭಾಯಗಳ ಮಹಾಪೂರವೇ ಹರಿದು ಬರುತ್ತಿದೆ.