ಶಕುಂತಲೆಯಾದ ಸಮಂತಾ ಅಕ್ಕಿನೇನಿ

Samantha
Published on

ಬೆಂಗಳೂರು: ಇದುವರೆಗೂ ಹಲವು ಸಾಮಾಜಿಕ ಚಿತ್ರಗಳಲ್ಲಿ ನಟಿಸಿರುವ ಸಮಂತಾ ಅಕ್ಕಿನೇನಿ, ಇದೀಗ ಪಥ ಬದಲಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ‘ಶಾಕುಂತಲಂ’ ಎಂಬ ಪೌರಾಣಿಕ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಮಹಾಕವಿ ಕಾಳಿದಾಸನ ‘ಅಭಿಜ್ಞಾನ ಶಾಕುಂತಲಂ’ ಸಂಸ್ಕೃತ ನಾಟಕವನ್ನು ಆಧರಿಸಿ ಗುಣಶೇಖರ್ ನಿರ್ದೇಶಿಸತ್ತಿರುವ ಈ ಚಿತ್ರದಲ್ಲಿ ಶಕುಂತಲೆಯಾಗಿ ನಟಿಸುತ್ತಿದ್ದಾರೆ.

‘ಶಾಕುಂತಲಂ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು, ಎಲ್ಲ ಭಾಷೆಗಳಿಗೂ ಸಲ್ಲುವ ನಟ-ನಟಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ಒಂದು ಕಡೆ ಸಮಂತಾ, ಶಕುಂತಲೆಯ ಪಾತ್ರ ಮಾಡಿದರೆ, ಪ್ಯಾನ್ ಇಂಡಿಯಾಗೆ ಸಲ್ಲುವ ತಮಿಳು ಅಥವಾ ಮಲಯಾಳಂನ ಸ್ಟಾರ್ ನಟರೊಬ್ಬರು ದುಷ್ಯಂತನ ಪಾತ್ರ ಮಾಡುತ್ತಾರಂತೆ. ಸೂಕ್ತ ನಾಯಕನಿಗಾಗಿ ಗುಣಶೇಖರ್ ಮತ್ತು ತಂಡದವರು ಹುಡುಕಾಟ ನಡೆಸುತ್ತಿದ್ದು, ನಾಯಕ ಸಿಕ್ಕ ತಕ್ಷಣ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net