ವಿಚ್ಛೇದನದ ಬಳಿಕ ಹೇಗಿತ್ತು ನಟಿ ಸಮಂತಾಳ ಮೊದಲ ವ್ಯಾಲಂಟೈನ್ಸ್ ಡೇ? ಫೋಟೋ ವೈರಲ್!

Published on
ಫೆಬ್ರವರಿ 14 ರಂದು ವ್ಯಾಲಂಟೈನ್ಸ್ ಡೇ ಆಚರಿಸಲಾಗುತ್ತೆ. ಈ ದಿನ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ತಮ್ಮ ಪ್ರೇಮಿಯ ಜೊತೆಗಿನ ಒಂದು ಫೋಟೋ ಆದರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ, ನಾಲ್ಕು ತಿಂಗಳ ಹಿಂದೆ ಅವರ 11 ವರ್ಷಗಳ ಪ್ರೀತಿಗೆ ಆಂತ್ಯ ಹಾಡಿ, ವಿಚ್ಛೇದನ ಪಡೆದ ನಟಿ ಸಮಂತಾ ಈ ಬಾರಿ ವ್ಯಾಲಂಟೈನ್ಸ್ ಡೇವನ್ನು ಹೇಗೆ ಆಚರಿಸಿಕೊಳ್ಳುತ್ತಾರೆ ಎಂಬ ಕುತೂಹಲ ಹಲವರಲ್ಲಿ ಇತ್ತು. ಹಾಗಾದರೆ, ಸಮಂತಾ ಅವರ ಈ ವರ್ಷದ ವ್ಯಾಲಂಟೈನ್ಸ್ ಡೇ ಹೇಗಿತ್ತು?
ಅಂದಹಾಗೆ, ಬಹುಭಾಷಾ ನಟಿ ಸಮಂತಾ ವಿಚ್ಛೇದನ ಪಡೆದರೂ, ಈ ಬಾರಿ ಕೂಡಾ ಪ್ರೇಮಿಗಳ ದಿನವನ್ನು ವಿಭಿನ್ನವಾಗಿಯೇ ಆಚರಿಸಿದ್ದಾರೆ. ಹೌದು, ವೈವಾಹಿಕ ಜೀವನದಿಂದ ಹೊರನಡೆದ ಸಮಂತಾಗೆ, ಇದು ಮೊದಲ ಪ್ರೇಮಿಗಳ ದಿನವಾಗಿತ್ತು. ಹೀಗಿದ್ದರೂ, ಈ ದಿನವನ್ನು ನಟಿ ತುಂಬಾ ಅರ್ಥಪೂರ್ಣವಾಗಿ ಆಚರಿಸಿದ್ದು, ಅಭಿಮಾನಿಗಳಿಂದ ಬೇಷ್ ಎನಿಸಿಕೊಂಡಿದ್ದಾರೆ. ತಮಗೆ ಫೆಬ್ರವರಿ 14ರಂದು ವ್ಯಾಲಂಟೈನ್ಸ್ ಡೇ ಹೇಗಿತ್ತು ಎಂದು ಅಭಿಮಾನಿಗಳಿಗೆ ತಿಳಿಸಲು ಸೋಶಿಯಲ್ ಮೀಡಿಯಾದಲ್ಲಿ ನಟಿ ಸಮಂತಾ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ನಟಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿ ವಿಭಾಗದಲ್ಲಿ ಎಲ್ಲರಿಗೂ ವ್ಯಾಲಂಟೈನ್ಸ್ ಡೇಯ ಶುಭಾಶಯಗಳನ್ನು ಕೋರಿದ್ದಾರೆ. ಜತೆಗೆ, ತಾವು ಈ ವಿಶೇಷ ದಿನದಂದು ಬೀದಿ ನಾಯಿಯೊಂದಿಗೆ ಆಟವಾಡುತ್ತಿರುವ ಒಂದು ಫೋಟೋವನ್ನು ಸಮಂತಾ ಅಪ್​ಲೋಡ್ ಮಾಡಿದ್ದಾರೆ. ಇನ್ನು ಅದಕ್ಕೆ, ‘ಪಪ್ಪಿ ಲವ್’ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ನಟಿ ಸಮಂತಾಗೆ ಶ್ವಾನಗಳೆಂದರೆ ತುಂಬಾ ಪ್ರೀತಿ ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ನಟಿ ಎರಡು ಶ್ವಾನಗಳನ್ನು ಸಾಕಿದ್ದಾರೆ. ಆಗಾಗ, ತಮ್ಮ ಶ್ವಾನಗಳ ಫೋಟೋಗಳನ್ನು ನಟಿ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಲೆ ಇರುತ್ತಾರೆ,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net