ಮುದ್ದಾದ ಗಂಡು ಮಗುವಿಗೆ ತಾಯಿಯಾದ ನಟಿ ಸಮಂತಾ; ಮಗನಿಗಿಟ್ಟ ಹೆಸರೇನು ಗೊತ್ತಾ?..Samantha

 ಸಮಂತಾ, ರಾಜ್​ ನಿಡಿಮೋರು(ಸಂಗ್ರಹ ಚಿತ್ರ)
ಸಮಂತಾ, ರಾಜ್​ ನಿಡಿಮೋರು(ಸಂಗ್ರಹ ಚಿತ್ರ)WEB
Published on: 
  • ಗಂಡು ಮಗುವಿಗೆ ತಾಯಿಯಾದ ನಟಿ ಸಮಂತಾ ರುತ್​ ಪ್ರಭು

  • ಮಗನಿಗೆ ದೇವ್​ ನಿಡಿಮೋರು ಎಂದು ಹೆಸರು

  • ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡ ನಿರ್ದೇಶಕ ರಾಜ್ ನಿಡಿಮೋರು

ನಟಿ ಸಮಂತಾ ರುತ್ ಪ್ರಭು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನ.19ರಂದು ಸಮಂತಾ ಮತ್ತು ರಾಜ್ ನಿಡಿಮೋರು ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದಂಪತಿ, ಮಗನಿಗೆ ದೇವ್ ನಿಡಿಮೋರು ಎಂದು ಹೆಸರಿಟ್ಟಿದ್ದಾರೆ.

ಮಗುವಿನ ಪುಟ್ಟ ಕೈ ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿರುವ ನಿರ್ದೇಶಕ ರಾಜ್​ ನಿಡಿಮೋರು, ನಮ್ಮ ಸುಂದರ ಗಂಡು ಮಗು, ನಮ್ಮ ಹೃದಯ ಎಂದಿಗಿಂತಲೂ ಹೆಚ್ಚು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಜೋಡಿಗೆ ಸಿನಿಮಾ ರಂಗದಿಂದು ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ.