ದ್ವಿಭಾಷಾ ಚಿತ್ರದಲ್ಲಿ ಸಮಂತಾ

Samantha
Published on

ಪತಿ ನಾಗಚೈತನ್ಯ ಅವರಿಂದ ದೂರಾಗಿರುವ ಟಾಲಿವುಡ್ ನಟಿ ಸಮಂತಾ, ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ವಿಚಾರವಾಗಿಯೇ ಸುದ್ದಿಯಲ್ಲಿದ್ದರು. ಈಗ ಬಹಳ ಸಮಯದ ನಂತರ ಸಿನಿಮಾ ವಿಚಾರವಾಗಿ ಸುದ್ದಿಯಾಗಿದ್ದಾರೆ. ಎರಡು ತಿಂಗಳ ಹಿಂದೆ ‘ಶಾಕುಂತಲಂ’ ಎಂಬ ಪೌರಾಣಿಕ ಚಿತ್ರವನ್ನು ಮುಗಿಸಿದ್ದ ಸಮಂತಾ, ಆ ನಂತರ ಹೊಸದಾಗಿ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಈಗ, ಅವರು ತೆಲುಗು-ತಮಿಳಿನಲ್ಲಿ ಏಕಕಾಲಕ್ಕೆ ನಿರ್ವಣವಾಗುತ್ತಿರುವ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

ಈ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ನಿರ್ವಿುಸುತ್ತಿದ್ದು, ಶಂತರುಬನ್ ಜ್ಞಾನಶೇಖರನ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯದಶಮಿಯಂದು ಚಿತ್ರವು ಅಧಿಕೃತವಾಗಿ ಘೋಷಣೆಯಾಗಿದ್ದು, ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ‘ಶಾಕುಂತಲಂ’ ಅಲ್ಲದೆ ‘ಕಾತು ವಾಕುಲ ರೆಂಡು ಕಾದಲ್’ ಎಂಬ ಇನ್ನೊಂದು ಚಿತ್ರದಲ್ಲೂ ಸಮಂತಾ ನಟಿಸಿದ್ದು, ಇವೆರಡೂ ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿದೆ. ಈಗ ಒಪ್ಪಿಕೊಂಡಿರುವ ಈ ಹೆಸರಿಡದ ಚಿತ್ರದ ಜತೆಗೆ, ಸಮಂತಾ ಇನ್ನೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಆ ಚಿತ್ರದ ಘೋಷಣೆ ಇನ್ನಷ್ಟೇ ಅಧಿಕೃತವಾಗಿ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net