ಹೌದು, ಹಸಿರು ಬಣ್ಣದ ಡೀಪ್ ನೆಕ್ ಗೌನ್ನಲ್ಲಿ ಸಮಂತಾಳನ್ನು ಕಂಡ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇನ್ನು, ನಟಿ ರಶ್ಮಿಕಾ ಮಂದಣ್ಣ, ನಟಿ ರಾಶಿ ಖನ್ನಾ, ನಟಿ ಹನ್ಸಿಕಾ ಮೊತ್ವಾನಿ, ನಟಿ ಸಂಯುಕ್ತಾ ಹೆಗಡೆ ಹಾಗೂ ಮುಂತಾದವರು ಸಮಂತಾ ಅವರ ಈ ಪೋಸ್ಟ್ಗೆ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಸಮಂತಾ ಅವರು ಈ ಫೋಟೋಗಳನ್ನು ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಟಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗ ತೊಡಗಿವೆ.