ಯಾಹೂ 2021ರ ಹೆಚ್ಚು ಹುಡುಕಲ್ಪಟ್ಟ ಮಹಿಳಾ ಸೆಲೆಬ್ರಿಟಿ ಪಟ್ಟಿಯಲ್ಲಿ ಸಮಂತಾ: ವಿಚ್ಛೇದನವೇ ಇದಕ್ಕೆ ಕಾರಣವಾಯಿತೆ?

Samantha
Published on

ಹೈದರಾಬಾದ್: ಈ ವರ್ಷ ಹಲವಾರು ಕಾರಣಗಳಿಗಾಗಿ ಸುದ್ದಿಯಲ್ಲಿರುವ ನಟಿ ಸಮಂತಾ, 2021ರ ಹೆಚ್ಚು ಹುಡುಕಲ್ಪಟ್ಟ ಚಲನಚಿತ್ರ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಮಂತಾ ಮತ್ತು ಅಕ್ಕಿನೇನಿ ನಾಗಚೈತನ್ಯ ಅವರ ವಿಚ್ಛೇದನದಿಂದ ಹಲವಾರು ಚರ್ಚೆಗಳು, ಕಾಮೆಂಟ್‌ಗಳು ಇಂಟರ್ನೆಟ್​​ನಲ್ಲಿ ಸಹಜವಾಗಿವೆ. ಇದು ಸಮಂತಾಳ ಬೇಸರಕ್ಕೂ ಕಾರಣವಾಗಿದೆ ಎಂದು ಅಭಿಮಾನಿಗಳಿಗೆ ತಿಳಿದಿದೆ. ಇದೇ ಕಾರಣಕ್ಕೆ ಹೆಚ್ಚು ಹುಡುಕಲ್ಪಟ್ಟ ಮಹಿಳಾ ನಟಿ ಆಗಿದ್ದಾರೆ ಸಮಂತಾ.

ಕೆಲವರು ವಿಚ್ಛೇದನದ ಬಳಿಕ ಸಮಂತಾರನ್ನು ಟ್ರೋಲ್ ಮಾಡಿದರೆ, ಇತರರು ಅವರನ್ನು ಶ್ಲಾಘಿಸಿದ್ದಾರೆ. ಹೀಗಾಗಿ, ಯಾಹೂ ಇಂಡಿಯಾದ ವರ್ಷದ ಅತಿ ಹೆಚ್ಚು ಹುಡುಕಲ್ಪಟ್ಟ ಮಹಿಳಾ ನಟಿಯರ ಪಟ್ಟಿಯಲ್ಲಿ, ಸಮಂತಾಗೆ 10ನೇ ಸ್ಥಾನ ಲಭಿಸಿದೆ. ಇನ್ನು, ಈ ಪಟ್ಟಿಯಲ್ಲಿ ಅಗ್ರಸ್ಥಾನ ದಕ್ಕಿರುವುದು ನಟಿ ಕರೀನಾ ಕಪೂರ್ ಖಾನ್​ಗೆ. ಇದಕ್ಕೆ ಕಾರಣ, ಕರೀನಾಳ ಎರಡನೇ ಗರ್ಭಧಾರಣೆ ಮತ್ತು ಆ ವಿಷಯದ ಬಗ್ಗೆ ಬರೆದ ಪುಸ್ತಕ ಎಂದು ವರದಿಯಾಗಿದೆ.

ಆದರ ನಂತರ ನಟಿಯರಾದ ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಕ್ರಮವಾಗಿ 2, 3, 4 ಮತ್ತು 5ನೇ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಏತನ್ಮಧ್ಯೆ, ಪುರುಷರಲ್ಲಿ 'ಯಾಹೂ ಹುಡುಕಾಟ 2021'ರ ಹೆಚ್ಚು ಹುಡುಕಲ್ಪಟ್ಟ ನಟರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ನಟ ಸಿದ್ಧಾರ್ಥ್ ಶುಕ್ಲಾ ಪಡೆದಿದ್ದಾರೆ. ಏಕೆಂದರೆ, ಈ ಖ್ಯಾತ ನಟನ ಹಠಾತ್ ನಿಧನವು ದೇಶದಲ್ಲಿ ಹಲವಾರು ಮಂದಿಯನ್ನು ಆಘಾತಕ್ಕೀಡು ಮಾಡಿತ್ತು. ಜೊತೆಗೆ, ಪಟ್ಟಿಯಲ್ಲಿರುವ ಇತರ ನಟರೆಂದರೆ ಅದು ನಟ ಸಲ್ಮಾನ್ ಖಾನ್, ಅಲ್ಲು ಅರ್ಜುನ್, ಪುನೀತ್ ರಾಜಕುಮಾರ್. ಈ ನಟರಿಗೆ ಪಟ್ಟಿಯಲ್ಲಿ ಕ್ರಮವಾಗಿ 2, 3 ಮತ್ತು 4ನೇ ಸ್ಥಾನಗಳು ಲಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net