ಮಂತ್ರವಾದಿಯಾದ ಸಮಂತಾ: ನಿರ್ಮಾಣದ ಮೊದಲ ಶುಭಂ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಣೆ

sam 2
Published on

ಬಹುಭಾಷೆ ನಟಿ ಸಮಂತಾ ರುಥ್ ಪ್ರಭು ಹಿಂದಿಯ ‘ಶುಭಂ’ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿರುವ ವಿಚಾರ ಗೊತ್ತೇ ಇದೆ. ಈಗಾಗಲೇ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಜ್ಯೋತಿಕಾ, ಕೃತಿ ಸನನ್ ಹಲವಾರು ನಟಿಯರು ನಿರ್ಮಾಪಕಿಯಾಗಿದ್ದಾರೆ. ಈ ಸಾಲಿಗೆ ಹೊಸದಾಗಿ ಸಮಂತಾ ಸೇರ್ಪಡೆಯಾಗುತ್ತಿದ್ದು, ‘ತ್ರಲಾಲ ಮೂವಿಂಗ್ ಪಿಕ್ಚರ್ಸ್’ ಬ್ಯಾನರಡಿಯಲ್ಲಿ ಬಂಡವಾಳ ಹೂಡಿದ್ದಾರೆ. ‘ಶುಭಂ’ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ಪೋಸ್ಟ್- ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದೆ. ಕಾಮಿಡಿ ಹಾಗೂ ಥ್ರಿಲ್ಲರ್ ಜಾನರ್‌ನ ಈ ಸಿನಿಮಾಕ್ಕೆ ಪ್ರವೀಣ್ ಕಂಡ್ರೈಗುಲಾ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಎದುರಿಸುವ ಜತೆ ಜತೆಗೆ ನಗೆಗಡಲಲ್ಲಿ ತೇಲಿಸುವ ಅಂಶಗಳಿವೆ. ಟ್ರೇಲರ್‌ನಲ್ಲಿ ಮದುವೆಯಾಗಿ ಹೊಸದಾಗಿ ಬಂದ ಹೆಣ್ಣು ಮಗಳೊಬ್ಬಳು ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ ನೋಡಿದ ತಕ್ಷಣವೇ ಆಕೆ ಅತಿಮಾನುಷಳಾಗಿ, ಗಂಡನನ್ನು ಎದುರಿಸುತ್ತಾಳೆ. ಕೊನೆಗೆ ಆತ ಮಾಟಗಾತಿ ಹತ್ತಿರ ಪರಿಹಾರಕ್ಕಾಗಿ ತೆರಳುತ್ತಾನೆ. ಆ ಮಾಟಗಾತಿಯೇ ಸಮಂತಾ. ತಾವೇ ನಿರ್ಮಿಸಿರುವ ಚಿತ್ರದಲ್ಲಿ ಸಮಂತಾ ಮಂತ್ರವಾದಿಯ ವಿಶೇಷ ಅತಿಥಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ಲುಕ್ ಕೂಡ ಗಮನಸೆಳೆಯುತ್ತದೆ. ಇದೇ ಮೇ 9ಕ್ಕೆ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಹರ್ಷಿತ್ ಮಾಲ್ಗಿರೆಡ್ಡಿ, ಶ್ರೀಯಾ, ಚರಣ್ ಪೆರಿ, ಶಾಲಿನಿ ಕೊಂಡೆಪುಡಿ, ಶ್ರಾವಣಿ ತಾರಾಬಳಗದಲ್ಲಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net