ಮತ್ತೆ ಏರಿದ ಸಮಂತಾ ಸಂಭಾವನೆ: ಹೊಸ ಚಿತ್ರಕ್ಕೆ ಸೌತ್​ ಬ್ಯೂಟಿ ಪಡೆದ ಹಣದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

Samantha
Published on

ಸಮಂತಾ ಸಂಭಾವನೆ ಕೋಟಿ ರೂ.ಗಳಿಗೆ ಏರಿ ಯಾವುದೋ ಕಾಲವಾಗಿದೆ. ‘ಯಶೋದಾ’ ಮತ್ತು ‘ಶಾಕುಂತಲಂ’ ಚಿತ್ರಗಳಿಗೆ ಸಮಂತಾ ಎರಡೂವರೆ ಕೋಟಿ ರೂ. ಸಂಭಾವನೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಈಗ ಹೊಸ ಚಿತ್ರಕ್ಕೆ ಅವರೊಂದು ಕೋಟಿ ರೂ. ಏರಿಸಿದ್ದಾರಂತೆ. ಮುಂದಿನ ದಿನಗಳಲ್ಲಿ ಒಪು್ಪವ ಎಲ್ಲ ಚಿತ್ರಗಳಿಗೆ ಅವರು ಮೂರೂವರೆ ಕೋಟಿ ರೂ. ಸಂಭಾವನೆ ನಿಗದಿ ಮಾಡಿದ್ದಾರಂತೆ.

ಸಮಂತಾ ಹೀಗೆ ಸಂಭಾವನೆಯಲ್ಲಿ ಏಕಾಏಕಿ ಒಂದು ಕೋಟಿ ರೂ. ಏರಿಸಿಕೊಂಡಿರುವುದು ಏಕೆ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಕಾರಣ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’. ಈ ಚಿತ್ರದಲ್ಲಿ ‘ಊ ಅಂಟಾವಾ ಮಾವ ...’ ಎಂಬ ಐಟಂ ಹಾಡಿನಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಅವರು ಸುಮ್ಮನೆ ಏನೂ ಕಾಣಿಸಿಕೊಂಡಿರಲಿಲ್ಲ, ಎರಡು ಕೋಟಿ ರೂ. ಸಂಭಾವನೆ ಪಡೆದೇ ಹಾಡಿಗೆ ಕುಣಿದಿದ್ದರು. ಆ ಹಾಡು ಯಾವ ಪರಿ ಜನಪ್ರಿಯವಾಗಿದೆಯೆಂದರೆ, ಅದೇ ಕಾರಣಕ್ಕೆ ಸಮಂತಾ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.

ಮೇಲಾಗಿ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್​ಸರಣಿಯಿಂದ ಸಮಂತಾ ಪ್ಯಾನ್ ಇಂಡಿಯಾ ನಟಿಯಾಗಿ ಹೊರಹೊಮ್ಮಿದ್ದಾರೆ. ಆಕೆಯ ಚಿತ್ರಗಳಿಗೆ ಓಟಿಟಿ ಮತ್ತು ಚಾನಲ್​ಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ, ಮೂರೂವರೆ ಕೋಟಿ ರೂ.ಗಳಿಗೆ ಒಂದು ರೂಪಾಯಿ ಕಡಿಮೆ ಮುಟ್ಟುವುದಿಲ್ಲ ಎಂದು ಸಮಂತಾ ಪಟ್ಟು ಹಿಡಿದಿದ್ದು, ಅದರಂತೆ ಮುಂದಿನ ದಿನಗಳಲ್ಲಿ ಒಪು್ಪವ ಚಿತ್ರಗಳಿಗೆ ಈ ಸಂಭವನೆ ನಿಗದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net