

ಹೈದರಾಬಾದ್: ತಮ್ಮ ಜೀವನದಲ್ಲಿ ಕಂಡ ಇತ್ತೀಚಿನ ಕಹಿ ಬದಲಾವಣೆಯ ನಡುವೆಯೂ ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಲವು ಉಲ್ಲಾಸಮಯ ಅಂಶಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವರ ಸಾಕುನಾಯಿಗಳೊಂದಿಗಿನ ಫೋಟೋ-ವಿಡಿಯೋಗಳು, ಸ್ನೇಹಿತರೊಂದಿಗಿನ ಒಡನಾಟಗಳ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ಸಮಂತಾ ಪೋಸ್ಟ್ ಮಾಡಿರುವ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಸ್ನೇಹಿತೆ ಸಾಧನಾ ಸಿಂಗ್ಗೆ ಮೇಕಪ್ ಮಾಡುತ್ತಿರುವ ವಿಡಿಯೋ ತುಣುಕೊಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಸಮಂತಾ ನೀಲಿ ಶೇಡ್ ಲಿಪ್ಸ್ಟಿಕ್ಅನ್ನು ಹಚ್ಚುತ್ತಿದ್ದರೆ, ಅವರೊಂದಿಗಿರುವ ಸೆಲೆಬ್ರಿಟಿ ಸ್ಟೈಲಿಸ್ಟ್ ಪ್ರೀತಂ ಜುಕಲ್ಕೇರ್ ಸಾಧನಾ ಮೂಗಿಗೆ ಲಿಪ್ಸ್ಟಿಕ್ ಬಳಿಯುತ್ತಾರೆ.
ಸಾಧನಾ, 'ಓಹೋ.. ಇವತ್ತು ನನ್ನನ್ನ ಬಿಡೋದಿಲ್ವಾ ನೀವು' ಎಂದು ಹೇಳುತ್ತಿರುವ ಈ ವಿಡಿಯೋಗೆ "ಬ್ರೈಡಲ್ ಬುಕಿಂಗ್ಸ್ ಓಪನ್" ಅಂತ ಹಾಸ್ಯಮಯವಾದ ಶೀರ್ಷಿಕೆಯನ್ನು ಸಮಂತಾ ನೀಡಿದ್ದರು. ಹೀಗೆ ತಮಾಷೆಯಾಗಿ ಕಾಲ ಕಳೆದ ನಂತರ ತಮ್ಮ ಮೇಕಪ್ನ ಪ್ರತಾಪದಿಂದ ಸಾಧನಾರ ಮುಖ ಹೇಗೆ ಕಾಣುತ್ತಿತ್ತು ಎಂಬುದನ್ನೂ 'ಮಾಸ್ಟರ್ಪೀಸ್' ಎಂದು ಬರೆದು ಶೇರ್ ಮಾಡಿಕೊಂಡಿದ್ದರು. (ಏಜೆನ್ಸೀಸ್)