ಪ್ರಾಜೆಕ್ಟ್ ಕೆಗೆ ಸಮಂತಾ?

Samantha
Published on

ಕಾರ್ತಿಕ್ ಶರ್ಮಾ ಚಿತ್ರಕ್ಕೆ ಸಂಗೀತ ನೀಡಿದ್ದು, ಶ್ರೀನಿವಾಸ್ ಪಟೇಲ್ ಬಂಡವಾಳ ಹೂಡಿದ್ದಾರೆ. ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್, ಎಸ್ತರ್ ನರೋನಾ ಸೇರಿ ಹಲವರು ಈ ಸಿನಿಮಾದಲ್ಲಿಪ್ರಭಾಸ್ ಅಭಿನಯದ ‘ಪ್ರಾಜೆಕ್ಟ್ ಕೆ’ ಚಿತ್ರವು ಸದ್ದಿಲ್ಲದೆ ಗುರುಪೂರ್ಣಿಮೆ ದಿನದಂದು ಹೈದರಾಬಾದ್​ನ ರಾಮೋಜಿ ಫಿಲಂಸಿಟಿಯಲ್ಲಿ ಪ್ರಾರಂಭವಾಗಿದ್ದು, ಚಿತ್ರೀಕರಣ ಮುಂದುವರಿದಿದೆ. ‘ಮಹಾನಟಿ’ ಖ್ಯಾತಿಯ ನಾಗ್​ಅಶ್ವಿನ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದರೆ, ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗ ಈ ಚಿತ್ರತಂಡಕ್ಕೆ ಸಮಂತಾ ಅಕ್ಕಿನೇನಿ ಮತ್ತು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಅವರಿಬ್ಬರ ಪಾತ್ರವೇನು? ವಿಶೇಷತೆಯೇನು? ಅವರಿಬ್ಬರೂ ಯಾವಾಗ ಚಿತ್ರತಂಡ ಸೇರಿಕೊಳ್ಳುತ್ತಾರೆ? ಇದ್ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ಸದ್ಯಕ್ಕಂತೂ ಸಮಂತಾ ಮತ್ತು ಪೃಥ್ವಿರಾಜ್ ಇಬ್ಬರೂ ‘ಪ್ರಾಜೆಕ್ಟ್ ಕೆ’ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ.

ಅಂದಹಾಗೆ, ‘ಪ್ರಾಜೆಕ್ಟ್ ಕೆ’ ಎನ್ನುವುದು ಚಿತ್ರದ ನಿಜವಾದ ಹೆಸರೇನಲ್ಲ. ಚಿತ್ರದ ಹೆಸರು ಬೇರೇನೋ ಇದೆಯಂತೆ. ಆದರೆ, ಚಿತ್ರತಂಡದವರು ಸದ್ಯಕ್ಕೆ ‘ಪ್ರಾಜೆಕ್ಟ್ ಕೆ’ ಹೆಸರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಸದ್ಯಕ್ಕೆ ಅಮಿತಾಭ್ ಮತ್ತು ಇತರೆ ಕಲಾವಿದರು ನಟಿಸುತ್ತಿರುವ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಪ್ರಭಾಸ್ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ.ದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net