ಚಾಲಕನಿಗೆ ಕರೊನಾ ಹಿನ್ನೆಲೆ; ಸಲ್ಮಾನ್​ ಖಾನ್​ ಹೋಮ್​ ಕ್ವಾರಂಟೈನ್​

Salman
Published on

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್​ ಅವರ ಕಾರು ಚಾಲಕ ಮತ್ತು ಇಬ್ಬರು ಕೆಲಸಗಾರರಿಗೆ ಕೋವಿಡ್ ಪಾಸಿಟವ್ ಬಂದ ಹಿನ್ನೆಲೆಯಲ್ಲಿ ಸಲ್ಮಾನ್​ ಖಾನ್​ ಸ್ವತಃ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಮುಂದಿನ 14 ದಿನಗಳ ಕಾಲ ಯಾರ ಸಂಪರ್ಕಕ್ಕೂ ಬಾರದೇ, ಮನೆಯಲ್ಲಿಯೇ ಇರುವುದಾಗಿ ಹೇಳಿಕೊಂಡಿದ್ದಾರೆ.

ಸದ್ಯ ಕರೊನಾ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಗೆ ದಾಖಲಾಗಿರುವ ತಮ್ಮ ಸಿಬ್ಬಂದಿಗೆ ಸೂಕ್ತ ವೈದ್ಯಕೀಯ ವೆಚ್ಚ ಮತ್ತು ಅವರ ಸಂಪೂರ್ಣ ಜವಾಬ್ದಾರಿಯನ್ನು ಸ್ವತಃ ಸಲ್ಮಾನ್ ಖಾನ್ ವಹಿಸಿಕೊಂಡಿದ್ದಾರೆ. ಮೂವರಲ್ಲಿ ಒಬ್ಬರಿಗೆ ಮಾತ್ರ ಸೋಂಕಿನ ಲಕ್ಷಣಗಳಿವೆ ಎಂದು ತಿಳಿದು ಬಂದಿದೆ.

ಇತ್ತ ಬಿಗ್​ಬಾಸ್​ ಶೂಟಿಂಗ್​ ಸಹ ಶುರುವಾಗಿದ್ದು, ಕ್ವಾರಂಟೈನ್​ ಅವಧಿಯಲ್ಲಿ ಅದರ ಶೂಟಿಂಗ್​ ಹೇಗೆ ಮುಗಿಸಿಕೊಳ್ಳುತ್ತಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಇತ್ತ ರಾಧೆ ಸಿನಿಮಾದ ಬಹುತೇಕ ಕೆಲಸಗಳು ಮುಕ್ತಾಯವಾಗಿವೆ. ಅದಾದ ಬಳಿಕ ಕಭೀ ಈದ್​ ಕಭೀ ದಿವಾಲಿ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net